ಕ್ರಿಕೆಟ್

ವೇಗಿಗಳು ಅಶ್ವಿನ್ ಗೆ ನೆರವಾಗುವ ಪಿಚ್ ರೂಪಿಸಬೇಕು: ಸಚಿನ್ ತೆಂಡೂಲ್ಕರ್

Lingaraj Badiger
ನವದೆಹಲಿ: ದಕ್ಷಿಣ ಆಫ್ರಿಕಾದಲ್ಲಿ ಸ್ಪಿನ್ ಸ್ನೇಹಿ ಪಿಚ್ ಗಳಿಲ್ಲ. ಹೀಗಾಗಿಯೇ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರು ಭಾರತೀಯ ವೇಗಿಗಳಿಗೆ ಸ್ಪಿನ್ ಗೆ ನೆರವಾಗುವ ಪಿಚ್ ರೂಪಿಸುವಂತೆ ಸಲಹೆ ನೀಡಿದ್ದಾರೆ.
ಹೊಸ ವರ್ಷದಲ್ಲಿ ಆರಂಭವಾಗಲಿರುವ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಬಹುನಿರೀಕ್ಷಿತ ಟೆಸ್ಟ್ ಸರಣಿಗೂ ಮುನ್ನ, ಟೀಂ ಇಂಡಿಯಾದ ವೇಗಿಗಳು ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರಿಗೆ ನೆರವಾಗುವ ಪಿಚ್ ರೂಪಿಸಬೇಕಿದೆ ಎಂದು ಸಚಿನ್ ತೆಂಡೂಲ್ಕರ್ ಅಭಿಪ್ರಾಯಪಟ್ಟಿದ್ದಾರೆ.
ವೇಗಿ ಪಿಚ್‌ಗಳಲ್ಲೂ ಅಶ್ವಿನ್ ಉತ್ತಮ ದಾಳಿ ಎಸೆಯಬಲ್ಲರು. ಇದನ್ನು ಮನದಟ್ಟು ಮಾಡಿಕೊಂಡಿರುವ ಸಚಿನ್ ಇಂತಹದೊಂದು ಸಲಹೆಯನ್ನು ನೀಡಿದ್ದಾರೆ. ಅಲ್ಲದೆ 2010-11ರ ಸರಣಿ ನೆನಪಿಸಿಕೊಂಡಿರುವ ಸಚಿನ್, ಅಂದು ಹರಭಜನ್ ಸಿಂಗ್‌ ಗೆ ಅನುಕೂಲಕರವಾಗುವ ರೀತಿಯಲ್ಲಿ ಜಹೀರ್ ಖಾನ್ ನೆರವಾಗಿದ್ದರು. ಅದೇ ರೀತಿ ನ್ಯೂಲ್ಯಾಂಡ್ಸ್ ಪಿಚ್‌ನಲ್ಲೀಗ ವೇಗಿಗಳು ಅಶ್ವಿನ್‌ಗೆ ರಫ್ ಪಿಚ್ ನಿರ್ಮಾಣವಾಗಲು ನೆರವಾಗಬೇಕಿದೆ ಎಂದಿದ್ದಾರೆ.
2010-11ರಲ್ಲಿ ಕೇಪ್ ಟೌನ್ ನಲ್ಲಿ ನಡೆದ ಟೆಸ್ಟ್ ನಲ್ಲಿ ಹರಭಜನ್ ಸಿಂಗ್ ಅವರು ಏಳು ವಿಕೆಟುಗಳ್ನು ಕಬಳಿಸಿದ್ದರು. ಈ ಮೂಲಕ ಹರಿಣಗಳ ಬ್ಯಾಟ್ಸ್‌ಮನ್‌ಗಳಿಗೆ ಕಡಿವಾಣ ಒಡ್ಡಿದ್ದರು ಎಂದು ಸಚಿನ್ ವಿವರಿಸಿದ್ದಾರೆ.
SCROLL FOR NEXT