ಕ್ರಿಕೆಟ್

ಭರ್ಜರಿ ಬ್ಯಾಟಿಂಗ್: ಟಿ20ಯಲ್ಲಿ 4ನೇ ಶತಕ ಸಿಡಿಸಿದ ಸುರೇಶ್ ರೈನಾ

Vishwanath S
ಕೋಲ್ಕತ್ತ: ಟೀಂ ಇಂಡಿಯಾದ ಸ್ಫೋಟಕ ಬ್ಯಾಟ್ಸ್ ಮನ್ ಸುರೇಶ್ ರೈನಾ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಟೂರ್ನಿಯ ಕಳೆದ ಕೆಲ ಪಂದ್ಯಗಳಿಂದ ತೀವ್ರ ರನ್ ಬರ ಎದುರಿಸುತ್ತಿದ್ದ ರೈನಾ ಕೊನೆಗೂ ಶತಕ ಸಿಡಿಸುವ ಮೂಲಕ ಫಾರ್ಮ್ ಕಂಡುಕೊಂಡಿದ್ದಾರೆ. 
ಟೂರ್ನಿಯ ಸೂಪರ್ ಲೀಗ್ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಮಾಡಿದ ಸುರೇಶ್ ರೈನಾ 59 ಎಸೆತಗಳಲ್ಲಿ 13 ಬೌಂಡರಿ, 7 ಸಿಕ್ಸರ್ ಸೇರಿದಂತೆ ಅಜೇಯ 126 ರನ್ ಸಿಡಿಸಿ ಉತ್ತರ ಪ್ರದೇಶ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಇದು ಟಿ20 ಕ್ರಿಕೆಟ್ ನಲ್ಲಿ ರೈನಾ ಸಿಡಿಸಿದ 4ನೇ ಶತಕವಾಗಿದೆ. 
ಇನ್ನು ಮುಂಬರುವ ಐಪಿಎಲ್ ಆವೃತ್ತಿಯಲ್ಲಿ ಸುರೇಶ್ ರೈನಾ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ರಿಟೇನ್ ಮಾಡಿದ್ದು ತಮ್ಮ ತಾಕತ್ತು ಏನು ಎಂಬುದನ್ನು ತೋರಿಸಿದ್ದಾರೆ.
ಟಿ20 ಕ್ರಿಕೆಟ್ ನಲ್ಲಿ 7000 ರನ್ ಪೂರೈಸಿದರು. ಈ ಸಾಧನೆ ಮಾಡಿದ ಭಾರತದ 2ನೇ ಹಾಗೂ ವಿಶ್ವದ 9ನೇ ಆಟಗಾರ ಎನ್ನುವ ಹೆಗ್ಗಳಿಕೆಗೆ ಸುರೇಶನ್ ರೈನಾ ಪಾತ್ರರಾಗಿದ್ದಾರೆ. ಇದಕ್ಕೂ ಮೊದಲು ವಿರಾಟ್ ಕೊಹ್ಲಿ 7000 ರನ್ ಗಡಿ ದಾಟಿದ್ದರು.
SCROLL FOR NEXT