ಮೂರನೇ ಟೆಸ್ಟ್: ದಕ್ಷಿಣ ಆಫ್ರಿಕಾ ವಿರುದ್ಧ ಭಾರತಕ್ಕೆ ಜಯ 
ಕ್ರಿಕೆಟ್

ಮೂರನೇ ಟೆಸ್ಟ್: ದಕ್ಷಿಣ ಆಫ್ರಿಕಾ ವಿರುದ್ಧ ಭಾರತಕ್ಕೆ ಜಯ

ದಕ್ಷಿಣ ಆಫ್ರಿಕಾ ವಿರುದ್ಧದ ಮೂರನೇ ಟೆಸ್ಟ್ ನಲ್ಲಿ ಭಾರತಕ್ಕೆ 63 ರನ್ ಗಳಿಂದ ಜಯ ಲಭಿಸಿದೆ.

ಜೊಹಾನ್ಸ್ ಬರ್ಗ್: ದಕ್ಷಿಣ ಆಫ್ರಿಕಾ ವಿರುದ್ಧದ ಮೂರನೇ ಟೆಸ್ಟ್ ನಲ್ಲಿ ಭಾರತಕ್ಕೆ 63 ರನ್ ಗಳಿಂದ ಜಯ ಲಭಿಸಿದೆ. ಬೌಲರ್ ಗಳ ನೆರವಿನೊಡನೆ ಭಾರತ ಈ ಸಾಧನೆ ಮಾಡಿದ್ದು ಹಿಂದಿನ ಎರಡು ಪಂದ್ಯಗಳಲ್ಲಿ ಸೋಲನುಭವಿಸಿದ್ದ ಕೊಹ್ಲಿ ಬಳಗಕ್ಕೆ ಈ ವಿಜಯ ತುಸು ಗೌರವ ತಂದಿದೆ.  ಆದರೆ ದಕ್ಷಿಣ ಆಫ್ರಿಕಾ ಪಂದ್ಯ ಸೋತರೂ ಸರಣಿಯನ್ನು 2–1ರಿಂದತನ್ನದಾಗಿಸಿಕೊಂಡಿದೆ.
ದಕ್ಷಿಣ ಆಫ್ರಿಕಾ ತಂಡ 1 ವಿಕೆಟ್‌ಗೆ 17ರನ್‌ ನಿಂದ ಕಡೆ ದಿನದ ಆಟ ಮುಂದುವರಿಸಿದ್ದು 73.3 ಓವರ್‌ಗಳಲ್ಲಿ 177ರನ್‌ ಗಳಿಸುವಷ್ಟರಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿತು.  ಸರಣಿ ಸಂಪೂರ್ಣ ಕೈವಶ ಮಾಡಿಕೊಳ್ಳುವ ಉದ್ದೇಶದಿಂಡ ಉತ್ತಮ ಪ್ರದರ್ಶನ ನೀಡುತ್ತಿದ್ದ ಆಫ್ರಿಕಾ ತಂಡಕ್ಕೆ ಭಾರತೀಯ ಬೌಲರ್ ಗಳು ನಿಯಂತ್ರಣ ಹೇರಿದ್ದರು. ಈ ನಡುವೆ ಸಹ ಆಫ್ರಿಕಾ ಬ್ಯಾಟ್ ಮನ್ ಗಳು ಉತ್ತಮ ಆಟ ಪ್ರದರ್ಶಿಸಿದ್ದರು. ಅವರ ಪೈಕಿ ಡೀನ್‌ ಎಲ್ಗರ್‌ (ಔಟಾಗದೆ 86),  ಹಾಶೀಮ್‌ ಆಮ್ಲಾ (52) ಜತೆಯಾಗಿ 119ರನ್‌ ಗಳಿಸಿದ್ದರೆ ಎಬಿ ಡಿವಿಲಿಯರ್ಸ್‌ (6) ಪ್ಲೆಸಿಸ್‌ (2) ಕ್ವಿಂಟನ್‌ ಡಿ ಕಾಕ್‌ (೦) ಸಂಪಾದಿಸಿದ್ದು ಆ ನಂತರ ಬಂದ ಆಟಗಾರರೆಲ್ಲಾ ಒಬ್ಬರಾದ ಬಳಿಕ ಒಬ್ಬರು ಪೆವಿಲಿಯನ್ ಹಾದಿ ಹಿಡಿದರು.  ಒಟ್ಟಾರೆ ತನ್ನ ಗೆಲುವಿಗಾಗಿ 241ರನ್‌ ಗುರಿ ಪಡೆದಿದ್ದ ಹರಿಣಗಳ ತಂಡ 177 ರನ್ ಗಳಿಸಲಷ್ಟೇ ಶಕ್ತವಾಗಿತ್ತು.
ಇನ್ನು ಭಾರತದ ಪರವಾಗಿ 53ನೇ ಓವರ್‌ ಬೌಲ್ ಮಾಡಿದ್ದ ಇಶಾಂತ್ ಶರ್ಮಾ ಆಫ್ರಿಕಾದ ಹಶೀಮ್ ಆಮ್ಲಾ ವಿಕೆಟ್ ಕಬಳಿಸಿದ್ದರು. ಇದರ ನಂತರ ಹರಿಣಗಳ ಮೇಲೆ ಭಾರತ ಬೌಲರ್ ಗಳ ಹಿಡಿತ ಬಲವಾಗುತ್ತಾ ಸಾಗಿತ್ತು. ಮುಂದಿನ 53 ರನ್‌ ಅಂತರದಲ್ಲಿ ಆಫ್ರಿಕಾ 9 ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಇದರಲ್ಲಿ ನಾಲ್ವರು ಶೂನ್ಯಕ್ಕೆ ಔಟಾದದ್ದು ಭಾರತ್ದ ಗೆಲುವಿಗೆ ಮುಖ್ಯ ಕಾರಣವಾಗಿತ್ತು. 
ಇನ್ನು ಭಾರತದ ವೇಗಿ ಮೊಹಮ್ಮದ್‌ ಶಮಿ 28 ರನ್‌ಗೆ 5 ವಿಕೆಟ್‌ ಪಡೆದು ಮಿಂಚಿದರು.ಬುಮ್ರಾ ಮತ್ತು ಇಶಾಂತ್‌ ಶರ್ಮ ತಲಾ 2, ಭುವನೇಶ್ವರ್‌ ಕುಮಾರ್‌ 1 ವಿಕೆಟ್ ಗಳಿಸಿಕೊಂಡರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತದಾನದ ಹಕ್ಕನ್ನೇ ಕಸಿದರೆ ಯಾವ ಪಕ್ಷವೂ ಸುರಕ್ಷಿತವಾಗಿರಲ್ಲ': SIR ವಿರುದ್ಧ ದೇಶಾದ್ಯಂತ ಹೋರಾಟಕ್ಕೆ CJP ಕರೆ

ಸ್ಟಿಂಗ್‌ ಆಪರೇಷನ್ ಆರೋಪ: ಶಾಂಗ್ರೀಲಾ ಹೋಟೆಲ್‌ನಲ್ಲಿ ಯಾರ ಜೊತೆ ಕುಳಿತಿದ್ರಿ; ಸಿಎಂ ಶಿವಕುಮಾರ್ ವಿರುದ್ಧ HDK ಹೊಸ ಬಾಂಬ್

ಒಂದು ಕ್ಷಣದ ನಿರ್ಲಕ್ಷ್ಯ, ವಿಚಿತ್ರ ರನೌಟ್‌ಗೆ ತಿಲಕ್ ವರ್ಮಾ ಬಲಿ; ಗಂಭೀರ್ ಫುಲ್ ಗರಂ! ಆಗಿದ್ದೇನು? Video

3rd T20I: ಆಲೌಟ್ ನಲ್ಲೂ ವಿಚಿತ್ರ ದಾಖಲೆ ಬರೆದ ಟೀಂ ಇಂಡಿಯಾ!

"ಜಗತ್ತಿಗೆ ಅಗತ್ಯವಿರುವ ಪರಿಹಾರಗಳು ನಿಮ್ಮಲ್ಲಿವೆ": ಚೆನ್ನೈನಲ್ಲಿ 'Gen Z ಯನ್ನುದ್ದೇಶಿಸಿ ಪ್ರಧಾನಿ ಮೋದಿ ಮಾತು