ರೋಹಿತ್ ಶರ್ಮಾ ಶತಕ 
ಕ್ರಿಕೆಟ್

ಮೊದಲ ಏಕದಿನ ಪಂದ್ಯ: 18ನೇ ಶತಕ ಸಿಡಿಸಿದ ರೋ'ಹಿಟ್' ಶರ್ಮಾ

ಮೊದಲ ಏಕದಿನ ಪಂದ್ಯದ ಮೇಲೆ ಬಿಗಿ ಹಿಡಿತ ಸಾಧಿರುವ ಭಾರ ತಂಡ ಗೆಲುವಿನ ಹೊಸ್ತಿಲಲ್ಲಿದ್ದು, ಭಾರತದ ಪರ ರೋಹಿತ್ ಶರ್ಮಾ ಭರ್ಜರಿ ಶತಕ ಸಿಡಿಸಿದ್ದಾರೆ.

ನಾಟಿಂಗ್ ಹ್ಯಾಮ್: ಮೊದಲ ಏಕದಿನ ಪಂದ್ಯದ ಮೇಲೆ ಬಿಗಿ ಹಿಡಿತ ಸಾಧಿರುವ ಭಾರ ತಂಡ ಗೆಲುವಿನ ಹೊಸ್ತಿಲಲ್ಲಿದ್ದು, ಭಾರತದ ಪರ ರೋಹಿತ್ ಶರ್ಮಾ ಭರ್ಜರಿ ಶತಕ ಸಿಡಿಸಿದ್ದಾರೆ.
ಕೇವಲ 82 ಎಸೆತಗಳನ್ನು ಎದುರಿಸಿದ ರೋಹಿತ್ ಶರ್ಮಾ ಸಿಕ್ಸರ್ ಸಿಡಿಸುವ ಮೂಲಕ ಶತಕ ಸಿಡಿಸಿದ್ದು, ಇದು ಅವರ ವೃತ್ತಿ ಜೀವನದ 18ನೇ ಅಂತಾರಾಷ್ಟ್ರೀಯ ಏಕದಿನ ಶತಕವನ್ನು ಸಿಡಿಸಿದರು. ರೋಹಿತ್ ಶರ್ಮಾ ಅವರ ಶತಕದಲ್ಲಿ ಒಟ್ಟು 4 ಭರ್ಜರಿ ಸಿಕ್ಸರ್ ಮತ್ತು 12 ಬೌಂಡರಿಗಳು ಸೇರಿವೆ. 
ಗೆಲುವಿನ ಸನಿಹದಲ್ಲಿ ಭಾರತ
ಇನ್ನು ಇಂಗ್ಲೆಂಡ್ ತಂಡ ನೀಡಿರುವ 269 ರನ್ ಗಳ ಗುರಿಯನ್ನು ಬೆನ್ನು ಹತ್ತಿರುವ ಭಾರತ ತಂಡ ಗೆಲುವಿನ ಹೊಸ್ತಿಲಲ್ಲಿದೆ. ಇತ್ತೀಚಿನ ವರದಿಗಳು ಬಂದಾಗ ಭಾರತ ತಂಡ 2 ವಿಕೆಟ್ ನಷ್ಟಕ್ಕೆ 226 ರನ್ ಗಳಿಸಿದೆ. ಇನ್ನೂ 17 ಓವರ್ ಬಾಕಿ ಇದ್ದು, ಭಾರತ ತಂಡದ ಗೆಲುವಿಗೆ ಇನ್ನು ಕೇವಲ 43 ರನ್ ಗಳ ಅವಶ್ಯಕತೆ ಇದೆ. ಪ್ರಸ್ತುತ ಶತಕ ವೀರ ರೋಹಿತ್ ಶರ್ಮಾ ಮತ್ತು ರಾಹುಲ್ ಕ್ರೀಸ್ ಕಾಯ್ದುಕೊಂಡಿದ್ದು, 75 ರನ್ ಸಿಡಿಸಿದ್ದ ವಿರಾಟ್ ಕೊಹ್ಲಿ ಅದಿಲ್ ರಷೀದ್ ಬೌಲಿಂಗ್ ನಲ್ಲಿ ಸ್ಟಂಪೌಟ್ ಆದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Nepal Floods: ಸಾವಿನ ಸಂಖ್ಯೆ 359ಕ್ಕೆ ಏರಿಕೆ; 288 ಭಾರತೀಯರು ಸೇರಿ 826 ಮಂದಿ ನಾಪತ್ತೆ; ಮತ್ತೆ ಪ್ರವಾಹ ಭೀತಿ! ಹೊಸ ಸರೋವರ ಪತ್ತೆ!

Nepal floods: ನೇಪಾಳ ಪ್ರವಾಹದ ಭೀಕರತೆ, 150 ಕಿ.ಮೀ ದೂರದ ಉತ್ತರ ಪ್ರದೇಶಕ್ಕೆ ಕೊಚ್ಚಿಕೊಂಡು ಬಂದ ಶವಗಳು!

Nepal Floods: ‘ಸಾವಿನ ಸಂಖ್ಯೆ ಊಹೆಗೂ ನಿಲುಕದಷ್ಟು ಏರಬಹುದು’; ಚೀನಾ ನಡೆ ಕುರಿತು ನೇಪಾಳ ಮಾಜಿ ಸಚಿವರ ಅನುಮಾನ!

RSS ಪಥಸಂಚಲನದಲ್ಲಿ ಭಾಗಿ: ಯಾದಗಿರಿಯ ಇಬ್ಬರು ಸರ್ಕಾರಿ ಶಿಕ್ಷಕರ ಅಮಾನತು

ಮಣಿಪುರದಲ್ಲಿ ಉಗ್ರರ ಅಟ್ಟಹಾಸ: ನಾಲ್ವರ ಸಾವು, ಒಬ್ಬ ನಾಪತ್ತೆ