ಕ್ರಿಕೆಟ್

ಕ್ರಿಕೆಟ್‍ನಲ್ಲಿ ಯಶಸ್ಸು ಕಾಣಲು ಯುವ ಕ್ರಿಕೆಟಿಗರಿಗೆ ಡಿವಿಲಿಯರ್ಸ್ ಕೊಟ್ಟ ಸಲಹೆ ಏನು ಗೊತ್ತಾ!

Vishwanath S
ನವದೆಹಲಿ: ಅಂತಾರಾಷ್ಟ್ರೀಯ ಕ್ರಿಕೆಟ್ ಬದುಕಿಗೆ ದಿಢೀರ್ ವಿದಾಯ ಘೋಷಿಸಿದ್ದ ದಕ್ಷಿಣ ಆಫ್ರಿಕಾ ತಂಡದ ಖ್ಯಾತ ಆಟಗಾರ ಎಬಿ ಡಿವಿಲಿಯರ್ಸ್ ಯುವ ಕ್ರಿಕೆಟಿಗರಿಗೆ ಕೆಲ ಸಲಹೆಗಳನ್ನು ನೀಡಿದ್ದಾರೆ. 
ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಮಿಂಚುತ್ತಿರುವ ಕೆಲ ಯುವ ಕ್ರಿಕೆಟಿಗರು ಹಾಗೂ ವಿವಿಧ ದೇಶಗಳ ಕ್ರಿಕೆಟ್ ತಂಡಗಳಿಗೆ ಪಾದಾರ್ಪಣೆ ಮಾಡಲು ತುದಿಗಾಲಿನಲ್ಲಿ ನಿಂತಿರುವ ಯುವ ಆಟಗಾರರಿಗೆ ಡಿವಿಲಿಯರ್ಸ್ ಕಠಿಣ ಶ್ರಮ ಯಶಸ್ಸಿನ ಮೂಲ ಎಂದು ಹೇಳಿದ್ದಾರೆ. 
ಯುವ ಕ್ರಿಕೆಟಿಗರು ಅಂತಾರಾಷ್ಟ್ರೀಯ ಪಂದ್ಯಗಳಿಗೆ ಆಯ್ಕೆಯಾದಾಗ ನಿಮ್ಮ ಮೇಲೆ ಸಾಕಷ್ಟು ಒತ್ತಡವಿರುತ್ತದೆ. ಅಲ್ಲಿ ಯಶಸ್ಸು ಕಾಣಬೇಕಾದರೆ ಕೆಲವೊಂದು ಕಠಿಣ ಆಯ್ಕೆ, ಶ್ರಮದಿಂದ ನಿಮಗೆ ನೀಡಿರುವ ಕೆಲಸದಲ್ಲಿ ಉತ್ತಮ ಪ್ರದರ್ಶನ ನೀಡಿದಾಗ ಮಾತ್ರ ನೀವೂ ಯಶಸ್ಸು ಕಾಣಲು ಸಾಧ್ಯವಾಗುತ್ತದೆ ಎಂದು ಹೇಳಿದ್ದಾರೆ. 
34 ವರ್ಷದ ಎಬಿಡಿ ವಿಲಿಯರ್ಸ್ 14 ವರ್ಷಗಳ ಕಾಲ ಅಂತಾರಾಷ್ಟ್ರೀಯ ಕ್ರಿಕೆಟ್ ಮೂರು ಮಾದರಿಯಲ್ಲೂ ಆಡಿದ್ದರು. ದಕ್ಷಿಣ ಆಫ್ರಿಕಾ ಪರ 114 ಟೆಸ್ಟ್, 228 ಏಕದಿನ ಮತ್ತು 78 ಅಂತಾರಾಷ್ಟ್ರೀಯ ಟಿ20 ಪಂದ್ಯಗಳನ್ನು ಆಡಿದ್ದಾರೆ.
SCROLL FOR NEXT