ಟೀಂ ಇಂಡಿಯಾ 
ಕ್ರಿಕೆಟ್

ಐತಿಹಾಸಿಕ ಟೆಸ್ಟ್: ಆಫ್ಘಾನ್ ವಿರುದ್ಧ ಮೊದಲ ದಿನದಾಟಕ್ಕೆ ಟೀಂ ಇಂಡಿಯಾ 347/6

ಆಫ್ಘಾನಿಸ್ತಾನ ವಿರುದ್ಧದ ಐತಿಹಾಸಿಕ ಏಕೈಕ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಟೀಂ ಇಂಡಿಯಾ 6 ವಿಕೆಟ್ ನಷ್ಟಕ್ಕೆ 347 ರನ್ ಪೇರಿಸಿದೆ...

ಬೆಂಗಳೂರು: ಆಫ್ಘಾನಿಸ್ತಾನ ವಿರುದ್ಧದ ಐತಿಹಾಸಿಕ ಏಕೈಕ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಟೀಂ ಇಂಡಿಯಾ 6 ವಿಕೆಟ್ ನಷ್ಟಕ್ಕೆ 347 ರನ್ ಪೇರಿಸಿದೆ. 
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಚೊಚ್ಚಲ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ಮೊದಲ ದಿನದಾಟದಂತ್ಯಕ್ಕೆ 78 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 347 ರನ್ ಬಾರಿಸಿದೆ. 
ಮಳೆಯಿಂದಾಗಿ ಪಂದ್ಯವನ್ನು ಎರಡು ಬಾರಿ ತಾತ್ಕಾಲಿಕವಾಗಿ ರದ್ದು ಮಾಡಲಾಯಿತು. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಬ್ ಏರ್ ವ್ಯವಸ್ಥೆ ಇದ್ದಿದ್ದರಿಂದ ಪಂದ್ಯವನ್ನು ಶೀಘ್ರದಲ್ಲೇ ಆರಂಭಿಸಲಾಯಿತು. 
ಟೀಂ ಇಂಡಿಯಾ ಪರ ಶಿಖರ್ ಧವನ್ 107, ಮುರಳಿ ವಿಜಯ್ 105, ಕೆಎಲ್ ರಾಹುಲ್ 54, ಚೇತೇಶ್ವರ ಪೂಜಾರಾ 35, ಅಜಿಂಕ್ಯ ರಹಾನೆ 10, ದಿನೇಶ್ ಕಾರ್ತಿಕ್ 4, ಹಾರ್ದಿಕ್ ಪಾಂಡ್ಯ ಅಜೇಯ 10 ಮತ್ತು ಆರ್ ಅಶ್ವಿನ್ ಅಜೇಯ 7 ರನ್ ಬಾರಿಸಿದ್ದಾರೆ. 
ಆಫ್ಘಾನ್ ಪರ ಯಾಮಿನ್‌ ಅಹ್ಮದ್‌ಜೈ 2, ವಫಾದಾರ್, ರಶೀದ್ ಖಾನ್ ಮತ್ತು ರೆಹಮನ್ ತಲಾ 1 ವಿಕೆಟ್ ಪಡೆದಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚನೆ "ಐತಿಹಾಸಿಕ ನಿರ್ಧಾರ"; ಐದು ಪಾಲಿಕೆಗೆ ಆಯುಕ್ತರ ನೇಮಕ

ದಶಕಗಳ ಪ್ರಯತ್ನಕ್ಕೆ Trump ಕೊಳ್ಳಿ ಇಟ್ಟಿದ್ದಾರೆ: ಅಧ್ಯಕ್ಷನ ಆತುರ ನಿರ್ಧಾರಗಳೇ ಭಾರತ-ರಷ್ಯಾ-ಚೀನಾ ದೋಸ್ತಿಗೆ ಕಾರಣ!

ಬಳ್ಳಾರಿ ಜೈಲಿಗೆ ನಟ ದರ್ಶನ್ ಶಿಫ್ಟ್?: ಅರ್ಜಿ ವಿಚಾರಣೆ ನಾಳೆಗೆ ಮುಂದೂಡಿಕೆ

ವರ್ಲ್ಡ್ ಟ್ರಾನ್ಸ್‌ಪ್ಲಾಂಟ್ ಗೇಮ್ಸ್: 63 ಪದಕ ಪಡೆದು ಮಿಂಚಿದ ಭಾರತದ ಕ್ರೀಡಾಪಟುಗಳು!

Cricket: 'Alcohol, Pornography...': ಡ್ರೀಮ್11 ಹೊರಕ್ಕೆ, ಜೆರ್ಸಿ ಸ್ಪಾನ್ಸರ್‌ಗೆ BCCI ಅರ್ಜಿ ಆಹ್ವಾನ, ಡೆಡ್‌ಲೈನ್ ನಿಗದಿ, ಅರ್ಹತೆ ಏನು?

SCROLL FOR NEXT