ಶಿಖರ್ ಧವನ 
ಕ್ರಿಕೆಟ್

ಡಿಆರ್‌ಎಸ್ ತೆಗೆದುಕೊಳ್ಳುವಲ್ಲಿ ಎಡವಿಡ ಆಫ್ಘಾನ್; ಧವನ್‍ಗೆ ಜೀವದಾನ, ದಾಖಲೆ ಶತಕ!

ಆಫ್ಘಾನಿಸ್ತಾನ ವಿರುದ್ಧದ ಐತಿಹಾಸಿಕ ಏಕೈಕ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾದ ಆರಂಭಿಕ ಆಟಗಾರ ಶಿಖರ್ ಧವನ್ ದಾಖಲೆಯ ಶತಕ ಸಿಡಿಸಿದ್ದಾರೆ...

ಬೆಂಗಳೂರು: ಆಫ್ಘಾನಿಸ್ತಾನ ವಿರುದ್ಧದ ಐತಿಹಾಸಿಕ ಏಕೈಕ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾದ ಆರಂಭಿಕ ಆಟಗಾರ ಶಿಖರ್ ಧವನ್ ದಾಖಲೆಯ ಶತಕ ಸಿಡಿಸಿದ್ದಾರೆ. 
ಆಫ್ಘಾನಿಸ್ತಾನ ಡಿಆರ್‌ಎಸ್ ತೆಗೆದುಕೊಳ್ಳದೆ ಎಡವಿದ್ದೆ ಶಿಖರ್ ಧವನ್ ದಾಖಲೆಯ ಶತಕ ಸಿಡಿಸಲು ಕಾರಣವಾಗಿದೆ. ಹೌದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಏಕೈಕ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಇನ್ನಿಂಗ್ಸ್ ಆರಂಭಿಸಿತು. 
ಆರಂಭಿಕರಾಗಿ ಕಣಕ್ಕಿಳಿದ ಧವನ್ 23 ರನ್ ಗಳಿಸಿದ್ದಾಗ ಆಫ್ಘಾನ್ ಬೌಲರ್ ವಫಾದಾರ್ ಎಸೆದ 9ನೇ ಓವರ್ ನ 5 ಎಸೆತ ಬ್ಯಾಟ್ ಗೆ ತಗುಲಿ ಕೀಪರ್ ಕೈಸೇರಿತು. ಈ ವೇಳೆ ಕೀಪರ್ ಸೇರಿದಂತೆ ಮೈದಾನದಲ್ಲಿದ್ದ ಆಟಗಾರರೆಲ್ಲಾ ಅಪೀಲ್ ಮಾಡಿದರು. ಆದರೆ ಅಂಪೈರ್ ಇದನ್ನು ನಾಟೌಟ್ ಎಂದು ಘೋಷಿಸಿದರು. ಆಗ ಆಫ್ಘಾನ್ ನಾಯಕ ಸೇರಿದಂತೆ ಎಲ್ಲರು ಚರ್ಚೆ ನಡೆಸಿದರು. ಆದರೆ ಯಾರೂ ಬಾಲ್ ಬ್ಯಾಟ್ ಗೆ ತಗುಲಿದ್ದಾಗಿ ಸ್ಪಷ್ಟವಾಗಿ ಹೇಳದಿದ್ದ ಕಾರಣ ನಾಯಕ ಡಿಆರ್‌ಎಸ್ ತೆಗೆದುಕೊಳ್ಳಲು ಮುಂದಾಗಲಿಲ್ಲ. ಇದು ಧವನ್ ಸಿಕ್ಕ ಜೀವದಾನವಾಗಿದ್ದು ನಂತರ ಅವರು ಶತಕ ಸಿಡಿಸಿ ಸಂಭ್ರಮಿಸಿದರು. 
ಶಿಖರ್ ಧವನ್ ಭರ್ಜರಿ ಶತಕ ಸಿಡಿಸಿದ್ದು,ಕೇವಲ 96 ಎಸೆತಗಳಲ್ಲಿ 19 ಬೌಂಡರಿ ಹಾಗೂ 3 ಭರ್ಜರಿ ಸಿಕ್ಸರ್ ಗಳ ಮೂಲಕ 107 ರನ್ ಸಿಡಿಸಿ ಔಟ್ ಆಗಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಇಂದಿರಾ ಗಾಂಧಿ ಕೂಡ ಹೀಗೆ ಮಾಡಿರಲಿಲ್ಲ': ದೆಹಲಿ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆಯುವ ಮುನ್ನ ಅಭಿಜಿತ್ ದೀಪ್ಕೆ; ವಿಡಿಯೋ ಹಂಚಿಕೊಂಡ CJP

ದೇಶವಿರೋಧಿ ಶಕ್ತಿಗಳಿಂದ ಅಶಾಂತಿ ಸೃಷ್ಟಿಗೆ ಯತ್ನ; CJP ಪ್ರತಿಭಟನೆಯಿಂದ ದೂರವಿರಿ: ಮುಸ್ಲಿಮರಿಗೆ ಇಮಾಮ್‌ ಮುಖ್ಯಸ್ಥ ಕರೆ

CEC ಜ್ಞಾನೇಶ್ ಕುಮಾರ್ ವಿರುದ್ಧ ಸಿಜೆಪಿ ಪ್ರತಿಭಟನೆ ವೇಳೆ 2 ಪೊಲೀಸರಿಗೆ ಕಲ್ಲೇಟು!

'ತಂದಿಟ್ಟ ಗಿಡ ಮನೆಗೇ ಹಾನಿ ಮಾಡಿದ್ರೆ..'; 'ನೋ ಕ್ಲಾಸ್', BiggBoss ಇತಿಹಾಸದ ಅತಿದೊಡ್ಡ ನಿರ್ಧಾರದ ಸುಳಿವು ನೀಡಿದ ಕಿಚ್ಚಾ ಸುದೀಪ್

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌‌ವೇಯಲ್ಲಿ ಅಪಘಾತಕ್ಕೆ ಬಿಗ್ ಟ್ವಿಸ್ಟ್: ಸ್ನೇಹಿತನಿಂದಲೇ ಭೂಮಿಕಾ ಕೊಲೆ?