ಸಂಗ್ರಹ ಚಿತ್ರ 
ಕ್ರಿಕೆಟ್

ದುಲೀಪ್ ಟ್ರೋಫಿ ಅಡಲು ಅವಕಾಶ ನೀಡಿದರೆ ಆಫ್ಘಾನಿಸ್ತಾನ ಟೆಸ್ಟ್ ಕ್ರಿಕೆಟ್ ಉತ್ತಮವಾಗುತ್ತದೆ: ಕಪಿಲ್ ದೇವ್

ಆಫ್ಘಾನಿಸ್ತಾನ ಕ್ರಿಕೆಟ್ ಅಭಿವೃದ್ಧಿ ವಿಚಾರದಲ್ಲಿ ಬಿಸಿಸಿಐ ಕೈಗೊಳ್ಳುತ್ತಿರುವ ನಿರ್ಧಾರಗಳು ಶ್ಲಾಘನಾರ್ಹವಾಗಿದ್ದು, ಅವರ ಟೆಸ್ಟ್ ಕ್ರಿಕೆಟ್ ಉತ್ತಮಗೊಳ್ಳಲು ಅವರಿಗೆ ದುಲೀಪ್ ಟ್ರೋಫಿ ಆಡುವ ಅವಕಾಶ ನೀಡಬೇಕು ಎಂದು ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್ ಕಪಿಲ್ ದೇವ್ ಹೇಳಿದ್ದಾರೆ.

ನವದೆಹಲಿ: ಆಫ್ಘಾನಿಸ್ತಾನ ಕ್ರಿಕೆಟ್ ಅಭಿವೃದ್ಧಿ ವಿಚಾರದಲ್ಲಿ ಬಿಸಿಸಿಐ ಕೈಗೊಳ್ಳುತ್ತಿರುವ ನಿರ್ಧಾರಗಳು ಶ್ಲಾಘನಾರ್ಹವಾಗಿದ್ದು, ಅವರ ಟೆಸ್ಟ್ ಕ್ರಿಕೆಟ್ ಉತ್ತಮಗೊಳ್ಳಲು ಅವರಿಗೆ ದುಲೀಪ್ ಟ್ರೋಫಿ ಆಡುವ ಅವಕಾಶ ನೀಡಬೇಕು ಎಂದು ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್ ಕಪಿಲ್ ದೇವ್ ಹೇಳಿದ್ದಾರೆ.
ಖಾಸಗಿ ಆಂಗ್ಲ ಪತ್ರಿಕೆಗೆ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಪಿಲ್ ದೇವ್, ಟೆಸ್ಟ್ ಕ್ರಿಕೆಟ್ ಗೆ ಆಫ್ಘಾನಿಸ್ತಾನ ಪದಾರ್ಪಣೆ ಮಾಡಿರುವುದು ನಿಜಕ್ಕೂ ಸಂತಸದ ವಿಚಾರ. ಆದರೆ ಆ ತಂಡ ಟೆಸ್ಟ್ ಕ್ರಿಕೆಟ್ ನಲ್ಲಿ ಇನ್ನೂ ಪಳಗಬೇಕಿದೆ. ಇನ್ನು ಆಪ್ಘಾನಿಸ್ತಾನದಲ್ಲಿ ಕ್ರಿಕೆಟ್ ಬೆಳವಣಿಗೆ ಕುರಿತಂತೆ ಬಿಸಿಸಿಐ ನಿರ್ಧಾರ ಶ್ಲಾಘನಾರ್ಹವೇ ಆದರೂ, ಇನ್ನೂ ಅಭಿವೃದ್ಧಿ ಕಾರ್ಯಗಳು ಆಗಬೇಕಿದೆ. ಈ ನಿಟ್ಟಿನಲ್ಲಿ ಬಿಸಿಸಿಐ ಕೆಲಸ ಮಾಡಬೇಕು ಎಂದು  ಹೇಳಿದ್ದಾರೆ.
ಅಂತೆಯೇ ಆಫ್ಘಾನಿಸ್ತಾನ ತಂಡ ಟೆಸ್ಟ್ ಕ್ರಿಕೆಟ್ ನಲ್ಲಿ ಅನುಭವ ಮತ್ತು ಕೌಶಲ್ಯದ ಕೊರತೆ ಎದುರಿಸುತ್ತಿದ್ದು, ಅನುಭವ ಸಹಿತ ತಂಡಗಳೊಂದಿಗೆ ಆಡಿ ಅದು ಪಳಗಬೇಕು. ಈ ನಿಟ್ಟಿನಲ್ಲಿ ಹೇಳುವುದಾದರೆ, ಆಪ್ಘಾನಿಸ್ತಾನ ತಂಡಕ್ಕೆ ದುಲೀಪ್ ಟ್ರೋಫಿ ಟೂರ್ನಿ ಆಡಲು ಅವಕಾಶ ನೀಡಿದರೆ ಪ್ರಯೋಜನವಾಗುತ್ತದೆ. ಬಿಸಿಸಿಐ ಆಫ್ಘಾನಿಸ್ತಾನ ತಂಡಕ್ಕೆ ನಮ್ಮ ಮೈದಾನದಲ್ಲಿ ಆಡುವ ಅವಕಾಶ ನೀಡಬೇಕು ಎಂದು ಕಪಿಲ್ ದೇವ್ ಹೇಳಿದರು.
ಇತ್ತೀಚೆಗಷ್ಟೇ ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ್ದ ಆಫ್ಘಾನಿಸ್ತಾನ ತಂಡ ಭಾರತದ ವಿರುದ್ಧ ತನ್ನ ಮೊದಲ ಪಂದ್ಯದಲ್ಲಿಯೇ ಇನ್ನಿಂಗ್ಸ್ ಮತ್ತು 262 ರನ್ ಗಳ ಹೀನಾಯ ಸೋಲು ಕಂಡಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

CM ಆಗಲು ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಸ್ಟಿಂಗ್ ಆಪರೇಷನ್; ಈಗ ಸಚಿವರ ವಿರುದ್ಧವೂ ಅದೇ ತಂತ್ರ: ಕುಮಾರಸ್ವಾಮಿ ಗಂಭೀರ ಆರೋಪ

SIR ವೇಳೆ ಡಿಲೀಟ್ ಆಗಿರುವ 13.3 ಕೋಟಿ ಮತದಾರರ ಪತ್ತೆಗೆ ಕಾಂಗ್ರೆಸ್‌ನಿಂದ ‘ಮತ ರಕ್ಷಕ’ರ ನೇಮಕ!

'ಸ್ಪಾದಲ್ಲಿ ಅಕ್ರಮ ಚಟುವಟಿಕೆ' ಎಂದು ಆರೋಪಿಸಿ ದಾಂಧಲೆ; 5 ಲಕ್ಷ ರೂ ಗೆ ಬೇಡಿಕೆ, 1 ಲಕ್ಷ ವಸೂಲಿ! ಶಾಕಿಂಗ್ ಘಟನೆ

'ಇತಿಹಾಸ ನಿಮ್ಮನ್ನು ಇನ್ನಷ್ಟು ಗೌರವದಿಂದ ನೆನಪಿಸಿಕೊಳ್ಳಲಿದೆ'; Agarkarಗೆ ಗೇಟ್ ಪಾಸ್`, ಗಂಭೀರ್‌ ಭಾವುಕ ಸಂದೇಶ!

Bigg Boss Kannada: ಟಾಸ್ಕ್ ವೇಳೆ ಕುಸಿದು ಬಿದ್ದ ನಟಿ ಸಂಗೀತಾ ಭಟ್; ಆರೋಗ್ಯದಲ್ಲಿ ಏರುಪೇರು! ವಿಡಿಯೋ ವೈರಲ್