ಚೆನ್ನೈ: ಇಂಗ್ಲೆಂಡ್ ತಂಡದ ವೇಗಿ ಮಾರ್ಕ್ ವೂಡ್ ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡುತ್ತಿದ್ದು ಎಂಎಸ್ ಧೋನಿ ಮತ್ತು ಡ್ವೈನ್ ಬ್ರಾವೊ ರೀತಿ ಆಡುವ ಚಾಕಚಕ್ಯತೆಯನ್ನು ಬೆಳಸಿಕೊಳ್ಳಬೇಕು ಎಂದು ಹೇಳಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಎಂಎಸ್ ಧೋನಿ ಹಾಗೂ ಡ್ವೈನ್ ಬ್ರಾವೊ ಅವರು ಆಡುತ್ತಿದ್ದು ಇವರಿಬ್ಬರಂತೆ ನಾನು ಶ್ರೇಷ್ಠ ಆಟಗಾರನಾಗಬೇಕು. ಎಂತಹ ಒತ್ತಡದ ಸಮಯದಲ್ಲೂ ಕೂಲ್ ಆಗಿರುವ ಧೋನಿಯ ಸ್ವಭಾವ. ಇನ್ನು ಡ್ವೈನ್ ಬ್ರಾವೊ ರೀತಿ ಬೌಲಿಂಗ್ ನಲ್ಲಿ ಅದ್ಭುತ ಪ್ರದರ್ಶನ ನೀಡುಬೇಕು ಎಂದು 28ರ ಹರೆಯದ ಮಾರ್ಕ್ ವೂಡ್ ಹೇಳಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಆಡಲು ಅವಕಾಶ ಸಿಕ್ಕಿರುವುದು ಅಪಾರ ಹೆಮ್ಮೆ ತಂದಿದೆ. ಐಪಿಎಲ್ ಅಷ್ಟೇ ಅಲ್ಲ ಒಂದು ಉತ್ತಮ ತಂಡದಲ್ಲಿ ಆಡಲು ಅವಕಾಶ ಸಿಕ್ಕಿರುವುದು ನನ್ನ ಸುಕೃತ ಎಂದರು.
ಮಾರ್ಕ್ ವೂಡ್ ಗಂಟೆಗೆ 140 ಕಿಮೀ ವೇಗದಲ್ಲಿ ಬೌಲಿಂಗ್ ಮಾಡುತ್ತಾರೆ. ಇಂಗ್ಲೆಂಡ್ ಪರ 23 ಏಕದಿನ ಪಂದ್ಯಗಳನ್ನು ಆಡಿರುವ ಅವರು 25 ವಿಕೆಟ್ ಗಳನ್ನು ಪಡೆದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics