ಸಂಗ್ರಹ ಚಿತ್ರ 
ಕ್ರಿಕೆಟ್

ಕ್ರಿಕೆಟಿಗ ಫಿಲಿಪ್ ಹ್ಯೂಸ್ ಸಾವಿಗೆ ಕಾರಣರಾದ ಬೌಲರ್ ನಿಂದ ಮತ್ತೋರ್ವ ಬ್ಯಾಟ್ಸಮನ್ ಗೆ ಗಾಯ!

ಆಸಿಸ್ ಕ್ರಿಕೆಟಿಗ ಫಿಲಿಪ್ ಹ್ಯೂಸ್ ಬಲಿ ಪಡೆದ ವೇಗಿ ಸೀನ್ ಅಬಾಟ್ ರಿಂದ ಮತ್ತೋರ್ವ ಬ್ಯಾಟ್ಸಮನ್ ಗೆ ಗಾಯವಾಗಿದೆ..

ಮೆಲ್ಬೋರ್ನ್: ಆಸಿಸ್ ಕ್ರಿಕೆಟಿಗ ಫಿಲಿಪ್ ಹ್ಯೂಸ್ ಬಲಿ ಪಡೆದ ವೇಗಿ ಸೀನ್ ಅಬಾಟ್ ರಿಂದ ಮತ್ತೋರ್ವ ಬ್ಯಾಟ್ಸಮನ್ ಗೆ ಗಾಯವಾಗಿದೆ..
2014ರ ನವೆಂಬರ್‌ನಲ್ಲಿ ನಡೆದಿದ್ದ ಫಿಲಿಪ್ ಹ್ಯೂಸ್ ಸಾವಿನ ಪ್ರಕರಣವನ್ನುನೆನಪಿಸುವ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದ್ದು, ಅಂದು ಫಿಲಿಪ್ ಹ್ಯೂಸ್ ಬಲಿ ಪಡೆದ ಆಸೀಸ್ ನ ಅದೇ ಬೌಲರ್ ನಿಂದ ಇದೀಗ ಮತ್ತೋರ್ವ ಬ್ಯಾಟ್ಸಮನ್ ತಲೆಗೆ ಬೌನ್ಸರ್ ಬಂದು ತಗುಲಿದೆ. 
ಭಾನುವಾರ ನಡೆದ ಶೇಫೀಲ್ಡ್ ಶೀಲ್ಡ್ ಟೂರ್ನಿಯಲ್ಲಿ ನ್ಯೂ ಸೌತ್ ವೇಲ್ಸ್ ತಂಡವನ್ನು ಪ್ರತಿನಿಧಿಸುತ್ತಿದ್ದ ಸೀನ್ ಅಬಾಟ್ ಎಸೆದ ಬೌನ್ಸರ್ ಎಸೆತವೊಂದು ವಿಕ್ಟೋರಿಯಾ ತಂಡದ ಬ್ಯಾಟ್ಸ್‌ಮನ್ ವಿಲ್ ಪುಕೋಸ್ಕಿ ಹೆಲ್ಮೆಟ್‌ಗೆ ಬಲವಾಗಿ ಅಪ್ಪಳಿಸಿತು. ಇದರಿಂದ ನೆಲಕ್ಕುರುಳಿದ ವಿಲ್ ಗಾಯಗೊಂಡು ನಿವೃತ್ತಿಯಾದರು. ಚೆಂಡು ಬಡಿದ ಬಳಿಕ ಮೈದಾನದಲ್ಲೇ ಚಿಕಿತ್ಸೆ ಪಡೆದ ವಿಲ್ ಕೆಲವು ನಿಮಿಷದ ಬಳಿಕ ಚೇತರಿಸಿಕೊಂಡರು. ಬಳಿಕ ವೈದ್ಯರು ಹಾಗೂ ಫಿಸಿಯೋ ತಜ್ಞರ ನೆರವಿನಿಂದ ಮೈದಾನದಿಂದ ಹೊರ ನಡೆದಿದ್ದರು. ಆದರೆ, ವಿಲ್ ಸರಿಯಾಗಿ ನಿಲ್ಲಲು ಪರದಾಡುತ್ತಿರುವಂತೆ ಕಂಡುಬಂದರು.
ಇದೀಗ ಅಬಾಟ್ ಬೌಲಿಂಗ್‌ಗೆ ಗಾಯಗೊಂಡಿರುವ 20ರ ಹರೆಯದ ಪುಕೊಸ್ಕಿ ಹಲವು ಬಾರಿ ಬ್ಯಾಟಿಂಗ್ ವೇಳೆ ಗಾಯಗೊಂಡಿದ್ದಾರೆ. ಕಳೆದ ಋತುವಿನಲ್ಲಿ ಪ್ರಥಮ ದರ್ಜೆ ಕ್ರಿಕೆಟ್‌ನ ಚೊಚ್ಚಲ ಪಂದ್ಯದಲ್ಲಿ ಚೆಂಡು ತಲೆಗೆ ಬಡಿದು ಗಾಯಗೊಂಡಿದ್ದರು. ಮೂರು ತಿಂಗಳ ಬಳಿಕ ಚೇತರಿಸಿಕೊಂಡಿದ್ದರು.
ಇಂತಹುದೇ ಘಟನೆ 2014ರ ನವೆಂಬರ್ ನಲ್ಲಿ ಇದೇ ಆಸ್ಟ್ರೇಲಿಯಾದಲ್ಲಿ ನಡೆದಿತ್ತು. ಇದೇ ವೇಗಿ ಸೀನ್ ಅಬಾಟ್ ಎಸೆದ ಬೌನ್ಸರ್ ವೊಂದು ಬ್ಯಾಟ್ಸಮನ್ ಫಿಲಿಪ್ ಹ್ಯೂಸ್ ಬಲಿ ಪಡೆದಿತ್ತು.  ಸಿಡ್ನಿಯಲ್ಲಿ ನಡೆದ ಶೀಫೀಲ್ಡ್ ಶೀಲ್ಡ್ ದೇಶೀಯ ಟೂರ್ನಿಯಲ್ಲಿ ಅಬಾಟ್ ಎಸೆದ ಬೌನ್ಸರ್‌ ಆಸ್ಟ್ರೇಲಿಯದ ಮಾಜಿ ಟೆಸ್ಟ್ ಬ್ಯಾಟ್ಸ್‌ಮನ್ ಫಿಲಿಪ್ ಹ್ಯೂಸ್ ಹೆಲ್ಮೆಟ್‌ಗೆ ಅಪ್ಪಳಿಸಿತ್ತು. ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತಾದರೂ ಜೀವ ಉಳಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ಹ್ಯೂಸ್ ದುರಂತ ಸಾವು ಆಸ್ಟ್ರೇಲಿಯಾ ಹಾಗೂ ವಿಶ್ವ ಕ್ರಿಕೆಟ್‌ಗೆ ದೊಡ್ಡ ಆಘಾತ ಉಂಟು ಮಾಡಿತ್ತು.
ವಿಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ...

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

IPL 2026 Eliminator: ವಿಶ್ವದಾಖಲೆಯ ಹೊಸ್ತಿಲಲ್ಲಿ ಎಡವಿದ Vaibhav Suryavanshi, ಮತ್ತೊಂದು ರೆಕಾರ್ಡ್ ಜಸ್ಟ್ ಮಿಸ್!

ಬೆಂಗಳೂರು: ಮಾಜಿ ಪ್ರೇಯಸಿ ಕರೆದಳೆಂದು ಮನೆಗೆ ಹೋದ ಪ್ರಿಯಕರ ದುರಂತ ಸಾವು: ಅಷ್ಟಕ್ಕೂ ಆಗಿದ್ದೇನು?

SCROLL FOR NEXT