ಅಂತಾರಾಷ್ಟ್ರೀಯ ಏಕದಿನ ಕ್ಲಬ್ ಗೆ ನೇಪಾಳ ತಂಡ ಹೊಸ ಸೇರ್ಪಡೆಯಾಗಿದೆ. ಜಿಂಬಾಬ್ವೆಯಲ್ಲಿ ನಡೆಯುತ್ತಿರುವ ಐಸಿಸಿ ವಿಶ್ವಕಪ್ ಅರ್ಹತಾ ಪಂದ್ಯದಲ್ಲಿ ಪಪುವಾ ನ್ಯೂ ಗಿನಿಯಾ ತಂಡವನ್ನು ಮಣಿಸಿದೆ.
2022ರವರೆಗೆ ತಾತ್ಕಾಲಿಕ ಏಕದಿನ ಸದಸ್ಯ ತಂಡವನ್ನು ನೇಪಾಳ ಸೇರಿಕೊಂಡಿದೆ. ಇದರಲ್ಲಿ ಸ್ಕಾಟ್‌ಲ್ಯಾಂಡ್, ನೆದರ್ಲ್ಯಾಂಡ್ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ಇನ್ನಿತರ ತಂಡಗಳು. 2022ರ ನಂತರ ಈ ನಾಲ್ಕು ರಾಷ್ಟ್ರಗಳಿಗೆ ಏಕದಿನದ ಅಧಿಕೃತ ತಂಡಗಳು ಎಂಬ ಸ್ಥಾನ ಸಿಗಲಿದೆ.
ನೇಪಾಳ ಕ್ರಿಕೆಟ್ ಮಂಡಳಿ ಅಲ್ಲಿನ ಸರ್ಕಾರದ ಹಸ್ತಕ್ಷೇಪವನ್ನು ಅಮಾನತುಗೊಳಿಸಿದ ನಂತರ ತಂಡದ ಸಾಧನೆಯು ಹೆಚ್ಚು ಪರಿಣಾಮಕಾರಿಯಾಗಿದೆ. ಇದೊಂದು ದೊಡ್ಡ ಸಾಧನೆ, ಇದಕ್ಕಾಗಿ ನಾವು ಬಹಳ ಸಮಯದಿಂದ ಶ್ರಮಿಸಿದ್ದೇವೆ ಎಂದು ತಂಡದ ನಾಯಕ ಪರಾಸ್ ಖಡ್ಕಾ ಐಸಿಸಿ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.