ಆರ್ಸಿಬಿ 
ಕ್ರಿಕೆಟ್

ಇಂದು ಆರ್ಸಿಬಿಗೂ ಅಗ್ನಿಪರೀಕ್ಷೆ, ಇಂದಿನ ಪಂದ್ಯದಲ್ಲಿ ಗೆದ್ದರೆ ಫ್ಲೇ ಆಫ್ ಗೇರುವ ಸಾಧ್ಯತೆ?

ಕರ್ನಾಟಕ ವಿಧಾನಸಭೆ ಅತಂತ್ರ ಫಲಿತಾಂಶದಿಂದಾಗಿ ಇಂದು ವಿಶ್ವಾಸಮತ ಸಾಬೀತು ಪಡಿಸಲು ಬಿಎಸ್ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರಕ್ಕೆ...

ಜೈಪುರ: ಕರ್ನಾಟಕ ವಿಧಾನಸಭೆ ಅತಂತ್ರ ಫಲಿತಾಂಶದಿಂದಾಗಿ ಇಂದು ವಿಶ್ವಾಸಮತ ಸಾಬೀತು ಪಡಿಸಲು ಬಿಎಸ್ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಇಂದು ಸಂಜೆ 4ಕ್ಕೆ ಮುಹೂರ್ತ ನಿಗದಿಯಾಗಿದ್ದು ಇನ್ನೊಂದೆಡೆ ಈ ಸಲ ಕಪ್ ನಮ್ದೆ ಎನ್ನುತ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್ಸಿಬಿ)ಗೂ ಇದೇ ಸಮಯಕ್ಕೆ ಸರಿಯಾಗಿ ಅಗ್ನಿ ಪರೀಕ್ಷೆ ಎದುರಾಗಿದೆ. 
ಜೈಪುರದಲ್ಲಿ ಇಂದು ಸಂಜೆ ನಾಲ್ಕು ಗಂಟೆಗೆ ರಾಜಸ್ತಾನ ರಾಯಲ್ಸ್ ವಿರುದ್ಧ ಆರ್ಸಿಬಿ ಸೆಣಸಾಡಲಿದ್ದು ಲೀಗ್ ಹಂತದಲ್ಲಿ ಆರ್ಸಿಬಿಗಿದು ಕೊನೆಯ ಪಂದ್ಯವಾಗಿದ್ದು ಅತ್ಯಂತ ಮಹತ್ವದಾಗಿದೆ. 
ರಾಜಸ್ತಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಒಂದು ವೇಳೆ ಆರ್ಸಿಬಿ ಸೋತರು ಪ್ಲೇ ಆಫ್ ರೇಸ್ ನಿಂದ ತಂಡ ಸಂಪೂರ್ಣವಾಗಿ ಹೊರಬೀಳುವುದಿಲ್ಲ. ಉಳಿದ ಪಂದ್ಯಗಳ ಫಲಿತಾಂಶಗಳು ಆರ್ಸಿಬಿ ಭವಿಷ್ಯವನ್ನು ನಿರ್ಧರಿಸಲಿದೆ. 
ಡೆಲ್ಲಿ ಡೇರ್ ಡೆವಿಲ್ಸ್, ಪಂಜಾಬ್, ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಹ್ಯಾಟ್ರಿಕ್ ಗೆಲುವು ಸಾಧಿಸುವ ಮೂಲಕ ಆತ್ಮವಿಶ್ವಾಸದ ಅಲೆಯಲ್ಲಿ ತೇಲುತ್ತಿರುವ ಆರ್ಸಿಬಿ ಲೀಗ್ ಹಂತದ ತನ್ನ ಕೊನೆ ಪಂದ್ಯದಲ್ಲೂ ಇದೇ ಲಯ ಉಳಿಸಿಕೊಳ್ಳುವ ವಿಶ್ವಾಸದಲ್ಲಿದೆ. ಮತ್ತೊಂದೆಡೆ ಆಡಿರುವ 13 ಪಂದ್ಯಗಳಲ್ಲಿ 6ರಲ್ಲಿ ಗೆದ್ದು 7ರಲ್ಲಿ ಸೋಲುಂಡಿರುವ ರಾಯಲ್ಸ್ ಸಹ 12 ಅಂಕ ಗಳಿಸಿದ್ದು ಪ್ಲೇ-ಆಫ್ ಹಂತಕ್ಕೇರಲು ಶನಿವಾರದ ಪಂದ್ಯ ನಿರ್ಣಾಯಕವಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಾಲಿವುಡ್ ಹಿರಿಯ ನಟ ನಾನಾ ಪಾಟೇಕರ್ ಇನ್ನಿಲ್ಲ

"ಜೀವಕ್ಕೆ ಕುತ್ತು ತರುವ ಹಾದಿ": ರಷ್ಯಾ ಸೇನಾ ನೇಮಕಾತಿ ಆಮಿಷಗಳಿಗೆ ಬಲಿಯಾಗದಂತೆ ನಾಗರಿಕರಿಗೆ ಭಾರತ ಕಟ್ಟುನಿಟ್ಟಿನ ಸೂಚನೆ, 69 ಭಾರತೀಯರ ಬಿಡುಗಡೆಗೆ ಪಟ್ಟು..!

CM ಡಿ.ಕೆ. ಶಿವಕುಮಾರ್‌ಗಾಗಿ IndiGo flight ಲೇಟ್? VVIP ಸಂಸ್ಕೃತಿ ವಿರುದ್ಧ ಪ್ರಯಾಣಿಕರ ಆಕ್ರೋಶ..!

ಬರಗಾಲದ ಬೆನ್ನಲ್ಲೇ ಬೆಲೆ ಏರಿಕೆ ಬರೆ: ಮಧ್ಯಮ ವರ್ಗದವರಿಗೆ ಆರ್ಥಿಕ ಹೊಡೆತ, ಅಕ್ಕಿ ದರ ಗಗನಕ್ಕೆ..!

ಬರ ಎಫೆಕ್ಟ್: ರೈತರ ನೆರವಿಗೆ ಧಾವಿಸಿದ ಸರ್ಕಾರ; 1,250 ಕೋಟಿ ರೂ. ಮೊದಲ ಕಂತು ಬಿಡುಗಡೆ..!