ಪುಣೆ: ಚುನಾವಣೆಗಳಲ್ಲಿ ಮತದಾರರನ್ನು ಸೆಳೆಯಲು ಹಣ, ಹೆಂಡ ಹಂಚುವುದು, ಸಿನಿ ತಾರೆಯರನ್ನು ಗಣ್ಯರನ್ನು ಕರೆತಂದು ಪ್ರಚಾರ ಮಾಡುವುದು ಸಾಮಾನ್ಯ. ಆದರೆ ಇಲ್ಲೊಬ್ಬ ಭೂಪ ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ತಮ್ಮ ಪರ ಪ್ರಚಾರ ಮಾಡುತ್ತಾರೆ ಎಂದು ಹೇಳಿ ಕೊನೆಗೆ ಡೂಪ್ ಕೊಹ್ಲಿಯನ್ನು ಕರೆತಂದು ಜನರನ್ನು ಬಕ್ರಾ ಮಾಡಿದ್ದಾನೆ.
ಮಹಾರಾಷ್ಟ್ರ ಸ್ಥಳೀಯ ಚುನಾವಣೆ ಅಭ್ಯರ್ಥಿ ವಿಠಲ್ ಗಣ್ಪತ್ ಘಾವಟೆ ಎಂಬುವರು ರಾಮಲಿಂಗಾ ಗ್ರಾಮ ಪಂಚಾಯ್ತಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದು ಇದೇ ಮೇ 25ರಂದು ತಮ್ಮ ಪರವಾಗಿ ವಿರಾಟ್ ಕೊಹ್ಲಿಯವರು ಪ್ರಚಾರ ಮಾಡಲು ಬರುತ್ತಿದ್ದಾರೆ. ಹೀಗಾಗಿ ಈ ಕಾರ್ಯಕ್ರಮಕ್ಕೆ ಸ್ಥಳೀಯ ಜನರೆಲ್ಲಾ ಬರಬೇಕೆಂದು ಬ್ಯಾನರ್ ಹಾಕಿಸಿದ್ದರು.
ನಂತರ ವಿಠಲ್ ಅವರು ಕೊಹ್ಲಿಯನ್ನೇ ಹೋಲುವಂತಾ ವ್ಯಕ್ತಿಯನ್ನು ಕರೆದುಕೊಂಡು ಚುನಾವಣಾ ಪ್ರಚಾರ ಮಾಡಿದ್ದಾರೆ. ಇದನ್ನು ಕಂಡ ಸ್ಥಳೀಯರೊಬ್ಬರು ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡಿದ್ದು ಈ ಫೋಟೋ ಇದೀಗ ವೈರಲ್ ಆಗಿದೆ.
ಜತೆಗೆ ಟ್ವೀಟರಿಗರು ಹಾಸ್ಯಾತ್ಮಕ ಟ್ವೀಟ್ ಗಳನ್ನು ಮಾಡುವ ಮೂಲಕ ಹಾಸ್ಯ ಚಟಾಕಿ ಹಾರಿಸುತ್ತಿದ್ದಾರೆ.