ಮುಂಬೈ: ತೀವ್ರ ಕುತೂಹಲ ಕೆರಳಿಸಿರುವ ಐಪಿಎಲ್ 2018 ಸರಣಿ ನಿರ್ಣಾಯಕ ಹಂತ ತಲುುಪಿದ್ದು, ಫೈನಲ್ ಪಂದ್ಯದಲ್ಲಿ ಹೈದರಾಬಾದ್ ಮತ್ತು ಚೆನ್ನೈ ತಂಡಗಳು ಮದಗಜಗಳಂತೆ ಕಾದಾಡುತ್ತಿವೆ. ಆದರೆ ಈ ಎರಡೂ ತಂಡಗಳಲ್ಲಿ ಯಾವುದೇ ತಂಡ ಗೆದ್ದರೂ ಟ್ರೋಫಿ ಮಾತ್ರ ಚೆನ್ನೈ ಪಾಲಾಗಲಿದೆ.
ಅರೆ.. ಏನು ಭವಿಷ್ಯ ಹೇಳುತ್ತಿದ್ದೀರಾ ಎಂದು ಭಾವಿಸಬೇಡಿ.. ಇದು ನೈಜ ಸಂಗತಿ.. ಹೌದು ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಕೇನ್ ವಿಲಿಯಮ್ಸನ್ ನೇತೃತ್ವದ ಸನ್ ರೈಸರ್ಸ್ ಹೈದರಾಬಾದ್ ತಂಡಗಳು ಫೈನಲ್ ಪಂದ್ಯದಲ್ಲಿ ಮುಖಾಮುಖಿಯಾಗಿವೆ. ಎರಡೂ ತಂಡಗಳು ಹಾಲಿ ಟೂರ್ನಿಯ ಶ್ರೇಷ್ಠ ತಂಡಗಳಾಗಿದ್ದು, ತಮ್ಮ ಅತ್ಯುತ್ತಮ ಪ್ರದರ್ಶನದ ಮೂಲಕವೇ ಟೂರ್ನಿಯ ನಿರ್ಣಾಯಕ ಘಟ್ಟ ತಲುಪಿವೆ. ಇನ್ನು ಕೆಲವೇ ಗಂಟೆಗಳಲ್ಲಿ ಪಂದ್ಯದ ಪಲಿತಾಂಶ ಕೂಡ ಹೊರ ಬೀಳುತ್ತದೆ.
ಆದರೆ ಈ ಎರಡೂ ತಂಡಗಳ ಪೈಕಿ ಯಾವುದೇ ತಂಡ ಗೆದ್ದರೂ ಟ್ರೋಫಿ ಮಾತ್ರ ಚೆನ್ನೈ ಪಾಲಾಗುತ್ತದೆ. ಹೌದು.. ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ತಂಡಗಳ ಫ್ರಾಂಚೈಸಿಗಳು ಚೆನ್ನೈ ಮೂಲದವರಾಗಿದ್ದು, ಇದೇ ಕಾರಣಕ್ಕೆ ನಾವು ಯಾವುದೇ ತಂಡ ಫೈನಲ್ ಗೆದ್ದರೂ ಟ್ರೋಫಿ ಮಾತ್ರ ಚೆನ್ನೈ ಪಾಲಾಗುತ್ತದೆ ಎಂದು. ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಎನ್ ಶ್ರೀನಿವಾಸನ್ ಮಾಲೀಕತ್ವದ ಇಂಡಿಯಾ ಸಿಮೆಂಟ್ಸ್ ಮಾಲೀಕರಾಗಿದ್ದಾರೆ. ಅಂತೆಯೇ ಸನ್ ರೈಸರ್ಸ್ ಹೈದರಾಬಾದ್ ತಂಡಕ್ಕೆ ಮಾರನ್ ಒಡೆತನದ ಸನ್ ನೆಟ್ ವರ್ಕ್ ಸಂಸ್ಥೆ ಮಾಲೀಕತ್ವ ಹೊಂದಿದೆ.
ಚೆನ್ನೈನ ಕರ್ಪಾಗಂ ಅವೆನ್ಯೂ ರಸ್ತೆಯಲ್ಲಿರುವ ಕೊರಮಂಡಲ್ ಟವರ್ಸ್ ನಲ್ಲಿ ಇಂಡಿಯಾ ಸಿಮೆಂಟ್ಸ್ ಸಂಸ್ಥೆಯ ಪ್ರಧಾನ ಕಚೇರಿ ಇದ್ದು, ಜಾನಕಿ ಅವೆನ್ಯೂ ರಸ್ತೆಯಲ್ಲಿರುವ ಮುರಸೋಲಿ ಮಾರನ್ ಟವರ್ಸ್ ಕಟ್ಟಡದಲ್ಲಿ ಸನ್ ನೆಟ್ವರ್ಕ್ ಸಂಸ್ಥೆಯ ಪ್ರಧಾನ ಕಚೇರಿ ಇದೆ. ಇದೇ ಕಾರಣಕ್ಕೆ ಯಾವುದೇ ತಂಡ ಗೆದ್ದರೂ ಟ್ರೋಫಿ ಮಾತ್ರ ಚೆನ್ನೈ ಪಾಲಾಗುತ್ತದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics