ಭಾರತದಲ್ಲಿರಬೇಡಿ, ಬೇರೆ ದೇಶಕ್ಕೆ ಹೋಗಿ: ಕ್ಯಾಪ್ಟನ್ ಕೊಹ್ಲಿ ಹೀಗೇಕೆ ಅಬ್ಬರಿಸಿದ್ದು, ಕಾರಣ ಏನು ಅಂತೀರಾ? ಇಲ್ಲಿದೆ ವಿವರ 
ಕ್ರಿಕೆಟ್

'ಭಾರತದಲ್ಲಿ ಇರಬೇಡಿ, ಬೇರೆ ದೇಶಕ್ಕೆ ಹೋಗಿ': ಅಭಿಮಾನಿಯ ವಿರುದ್ಧ ಅಬ್ಬರಿಸಿದ ಕ್ಯಾಪ್ಟನ್ ಕೊಹ್ಲಿ

ಸಾಮಾನ್ಯವಾಗಿ ಆನ್ ಫೀಲ್ಡ್ ನಲ್ಲಿ ಅಗ್ರೆಸೀವ್ ಆಗಿರುವ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ, ವ್ಯಕ್ತಿಯೊಬ್ಬರಿಗೆ ಪ್ರತಿಕ್ರಿಯೆ ನೀಡಲು ಹೋಗಿ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.

ಸಾಮಾನ್ಯವಾಗಿ ಆನ್ ಫೀಲ್ಡ್ ನಲ್ಲಿ ಅಗ್ರೆಸೀವ್ ಆಗಿರುವ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ, ವ್ಯಕ್ತಿಯೊಬ್ಬರಿಗೆ ಪ್ರತಿಕ್ರಿಯೆ ನೀಡಲು ಹೋಗಿ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. 
ಕೊಹ್ಲಿ ಕುರಿತ ಆಪ್ ನಲ್ಲಿ ಬಂದಿರುವ ಸಂದೇಶಗಳನ್ನು ಓದಿ, ಅದಕ್ಕೆ ಪ್ರತಿಕ್ರಿಯೆ ನೀಡುತ್ತಿದ್ದ ವೇಳೆ ಕೊಹ್ಲಿ ಗರಂ ಆಗಿದ್ದು, ವ್ಯಕ್ತಿಯೊಬ್ಬರ  ವಿರುದ್ಧ ಕಿಡಿ ಕಾರಿದ್ದಾರೆ. ಈ ವೇಳೆ ನೀವು ಭಾರತದಲ್ಲಿರಬೇಡಿ ನಿಮಗೆ ಯಾವ ದೇಶ ಇಷ್ಟ ಆಗುತ್ತೋ ಅಲ್ಲೇ ಇರಿ ಎಂದು ಗುಡುಗಿದ್ದಾರೆ. 
ಭಾರತೀಯ ಬ್ಯಾಟ್ಸ್‌ಮನ್‌ಗಳಿಗೆ ಸುಮ್ಮನೆ ಹೆಚ್ಚಿನ ಪ್ರಚಾರ ಸಿಗುತ್ತಿದೆ. ಆದರೆ ಬ್ಯಾಟಿಂಗ್‌ನಲ್ಲಿ ಅಂತಹಾ ವಿಶೇಷತೆ ಏನೂ ಇರಲ್ಲ. ಇಂಗ್ಲೀಷ್ ಅಥವಾ ಆಸ್ಟ್ರೇಲಿಯಾ ಬ್ಯಾಟ್ಸ್‌ಮನ್‌ಗಳ ಪ್ರದರ್ಶನ ನನಗೆ ಹೆಚ್ಚು ಖುಷಿ ನೀಡುತ್ತೆ ಎಂದು ಆಪ್ ನಲ್ಲಿ ವ್ಯಕ್ತಿಯೋರ್ವರು ಕಾಮೆಂಟ್ ಮಾಡಿದ್ದಾರೆ. 
ಇದಕ್ಕೆ ಪ್ರತಿಕ್ರಿಸಿಯಿದ ಕೊಹ್ಲಿ, ಹಾಗಾದರೆ ನೀವು ಭಾರತ ಬಿಟ್ಟು ಇತರ ದೇಶ ಹುಡುಕಿಕೊಳ್ಳುವುದು ಒಳ್ಳೆಯದು. ಭಾರತದಲ್ಲಿದ್ದುಕೊಂಡು, ಬೇರೆ ದೇಶವನ್ನ ಇಷ್ಟಪಡುವುದಾದರೆ ಭಾರತದಲ್ಲಿರುವುದೇಕೆ? ನೀವು ನನ್ನನ್ನ ಇಷ್ಟಪಡುವುದಿಲ್ಲ ಎಂದು ನನಗೆ ಸಮಸ್ಯೆ ಇಲ್ಲ. ಆದರೆ ನೀವು ಭಾರತದಲ್ಲಿರಲು ಸೂಕ್ತ ಎಂದು ನನಗನಿಸುವುದಿಲ್ಲ ಎಂದಿದ್ದಾರೆ. ಕೊಹ್ಲಿ ಪ್ರತಿಕ್ರಿಯೆಗೆ ಟ್ವಿಟಿಗರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.  ಕೊಹ್ಲಿ ಭಾರತವನ್ನು ಅಷ್ಟು ಇಷ್ಟಪಡುವುದಾದರೆ ವಿದೇಶದಲ್ಲೇಕೆ ಮದುವೆಯಾದರು ಎಂದು ಟ್ವಿಟಿಗರು ಪ್ರಶ್ನಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?