ವೆಸ್ಟ್ ಇಂಡೀಸ್-ಹರ್ಭಜನ ಸಿಂಗ್
ನವದೆಹಲಿ: ಪ್ರವಾಸಿ ವೆಸ್ಟ್ ಇಂಡೀಸ್ ತಂಡ ಟೀಂ ಇಂಡಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಹೀನಾಯವಾಗಿ ಸೋಲು ಕಂಡಿದ್ದು ಈ ಮಧ್ಯೆ ಟೀಂ ಇಂಡಿಯಾದ ಹಿರಿಯ ಬೌಲರ್ ಹರ್ಭಜನ್ ಸಿಂಗ್ ಮಾಡಿರುವ ಟ್ವೀಟ್ ಇದೀಗ ವಿವಾದಕ್ಕೆ ಕಾರಣವಾಗಿದೆ.
ಕೆರಿಬಿನ್ನಯನ್ನರ ಕಳಪೆ ಆಟದ ಬಗ್ಗೆ ಟ್ವೀಟ್ ಮಾಡಿರುವ ಹರ್ಭಜನ್ ಸಿಂಗ್, ವೆಸ್ಟ್ ಇಂಡೀಸ್ ತಂಡದ ಸದ್ಯದ ಪರಿಸ್ಥಿತಿ ನೋಡಲು ದುಃಖವಾಗುತ್ತದೆ. ಅವರ ಬಗ್ಗೆ ನನಗೆ ತುಂಬಾ ಗೌರವ ಇದೆ. ಸದ್ಯದ ಪರಿಸ್ಥಿತಿ ನೋಡಿದರೆ ಅವರು ರಣಜಿಯಲ್ಲಿ ಕ್ವಾರ್ಟರ್ ಫೈನಲ್ ತಲುಪುತ್ತಾ? ತಲುಪಲು ಸಾಧ್ಯವಿಲ್ಲ ಎಂದು ಟ್ವೀಟಿಸಿದ್ದಾರೆ.
ಭಜ್ಜಿ ಟ್ವೀಟ್ ಗೆ ಹಲವು ಪರ ವಿರೋಧ ಕಮೆಂಟ್ ಗಳು ಬರುತ್ತಿದ್ದು ವೆಸ್ಟ್ ಇಂಡೀಸ್ ಒಂದು ಉತ್ತಮ ತಂಡ, ಅವರ ಪರಿಸ್ಥಿತಿ ಈಗ ಕಳಪೆಯಾಗಿರಬಹುದಷ್ಟೇ ಎಂದು ಕೆಲವರು, ಇನ್ನೂ ಕೆಲವರು ಮೊನ್ನೆಯಷ್ಟೇ ಇಂಗ್ಲೆಂಡ್ ವಿರುದ್ಧ ಟೀಂ ಇಂಡಿಯಾ ಪ್ರದರ್ಶನ ಹೇಗಿತ್ತು ಎಂಬುದನ್ನು ನೆನಪು ಮಾಡಿಕೊಳ್ಳಿ ಎಂದು ನೆಟ್ಟಿಗರು ಭಜ್ಜಿ ಟ್ವೀಟ್ ಗೆ ಪ್ರತ್ಯುತ್ತರ ನೀಡಿದ್ದಾರೆ.