ರವೀಂದ್ರ ಜಡೇಜಾ, ವಿರಾಟ್ ಕೊಹ್ಲಿ
ಮುಂಬೈ: ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧದ ನಾಲ್ಕನೇ ಏಕದಿನ ಪಂದ್ಯದಲ್ಲಿ ರವೀಂದ್ರ ಜಡೇಜಾ ಹಾಗೂ ವಿರಾಟ್ ಕೊಹ್ಲಿ ಚೆಂಡನ್ನು ಹಿಡಿಯಲು ತಾ ಮುಂದು ನಾ ಮುಂದು ಅಂತ ಓಡಿರುವ ವಿಡಿಯೋ ಇದೀಗ ವೈರಲ್ ಆಗಿದೆ.
ಮುಂಬೈನಲ್ಲಿ ನಡೆಯುತ್ತಿರುವ ನಾಲ್ಕನೇ ಏಕದಿನ ಪಂದ್ಯದಲ್ಲಿ ಮೊದಲ ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ 377 ರನ್ ಪೇರಿಸಿದ್ದು ವಿಂಡೀಸ್ ಗೆ ಗೆಲ್ಲಲು 378 ರನ್ ಗಳ ಗುರಿ ನೀಡಿದೆ.
ಇನ್ನು ವೆಸ್ಟ್ ಇಂಡೀಸ್ ಬ್ಯಾಟಿಂಗ್ ವೇಳೆ ಮೊದಲ ಓವರ್ ನಲ್ಲೇ ರವೀಂದ್ರ ಜಡೇಜಾ ಹಾಗೂ ವಿರಾಟ್ ಕೊಹ್ಲಿ ಇಬ್ಬರು ಚೆಂಡನ್ನು ಹಿಡಿಯಲು ತಾವಿಬ್ಬರು ಜಿದ್ದಿಗೆ ಬಿದ್ದಂತೆ ಓಡಿದ್ದಾರೆ. ಇಲ್ಲಿ ಜಡೇಜಾರ ವೇಗ ಕಂಡು ಕೊನೆಗೆ ಕೊಹ್ಲಿಯೇ ಸುಮ್ಮನಾದರು. ಡೈವ್ ಮಾಡಿ ಚೆಂಡನ್ನು ಹಿಡಿದ ಜಡೇಜಾ ಚೆಂಡನ್ನು ಕೊಹ್ಲಿ ಕೈಗೆ ಎಸೆದರು.
ಕೊಹ್ಲಿ ಚೆಂಡನ್ನು ಕೀಪರ್ ಗೆ ಎಸೆದಿದ್ದು ಇಬ್ಬರು ಸೇರಿ ಓಡಿ ಬೌಂಡರಿಗೆ ಹೋಗುತ್ತಿದ್ದ ಚೆಂಡನ್ನು ಹಿಡಿದಿದ್ದು ಎರಡು ರನ್ ಅನ್ನು ಸೇವ್ ಮಾಡಿದ್ದಾರೆ. ಇನ್ನು ಆಟಗಾರರ ರನ್ನಿಂಗ್ ರೇಸ್ ವಿಡಿಯೋ ಇದೀಗ ವೈರಲ್ ಆಗಿದೆ.