ಸಂಗ್ರಹ ಚಿತ್ರ 
ಕ್ರಿಕೆಟ್

ಸತತ 6 ವರ್ಷಗಳಿಂದ ಈ ದಾಖಲೆಯಲ್ಲಿ ಹಿಟ್ ಮ್ಯಾನ್ ರೋಹಿತ್ ಅನಭಿಶಕ್ತ ದೊರೆ!

ಟೀಂ ಇಂಡಿಯಾದ ಹಿಟ್ ಮ್ಯಾನ್ ರೋಹಿತ್ ಶರ್ಮಾ ತಮ್ಮದೇ ಅಪೂರ್ವ ದಾಖಲೆಯೊಂದನ್ನು ಮತ್ತಷ್ಟು ಉತ್ತಮಗೊಳಿಸಿಕೊಂಡಿದ್ದಾರೆ.

ನವದೆಹಲಿ: ಟೀಂ ಇಂಡಿಯಾದ ಹಿಟ್ ಮ್ಯಾನ್ ರೋಹಿತ್ ಶರ್ಮಾ ತಮ್ಮದೇ ಅಪೂರ್ವ ದಾಖಲೆಯೊಂದನ್ನು ಮತ್ತಷ್ಟು ಉತ್ತಮಗೊಳಿಸಿಕೊಂಡಿದ್ದಾರೆ.
ಹೌದು.. ಭಾರತದ ರನ್ ಮೆಷಿನ್ ವಿರಾಟ್ ಕೊಹ್ಲಿ ವೇಗದ 10 ಸಾವಿರ ರನ್ ಪೂರೈಸಿದ ಆಟಗಾರ ಎಂಬ ಕೀರ್ತಿಗೆ ಭಜನರಾಗಿದ್ದರೂ, ರೋಹಿತ್ ಶರ್ಮಾ ಅವರ ಹೆಸರಿನಲ್ಲಿರುವ ಈ ದಾಖಲೆ ಹಿಂದಿಕ್ಕಲು ಕಳೆದ  ವರ್ಷಗಳಿಂದ ಸಾಧ್ಯವಾಗಿಲ್ಲ. ಇಷ್ಟಕ್ಕೂ ಯಾವುದು ಆ ದಾಖಲೆ ಎಂಬ ಪ್ರಶ್ನೆಗೆ ಉತ್ತರ ಪಂದ್ಯವೊಂದರಲ್ಲಿ ಆಟಗಾರ ಗಳಿಸಿದ ಗರಿಷ್ಠ ವೈಯುಕ್ತಿಕ ರನ್ ಗಳಿಕೆ..
ವಿರಾಟ್ ಕೊಹ್ಲಿ ಅತಿ ಹೆಚ್ಚು ರನ್​, ಕ್ಯಾಲೆಂಡರ್​ ಇಯರ್​ನಲ್ಲಿ ಸಾವಿರ ರನ್​ಗಳ ಸರದಾರನಾಗಿದ್ದು, ಸೆಂಚುರಿಗಳ ಮೇಲೆ ಸೆಂಚುರಿ ಬಾರಿಸಿ ಇದ್ದಬಿದ್ದ ಎಲ್ಲ ದಾಖಲೆಗಳನ್ನ ಪುಡಿಗಟ್ಟಿ ಗೆಲುವಿನ ರಣಕೇಕೆ ಹಾಕುತ್ತಿದ್ದಾರೆ. ಆದರೆ ಅತ್ತ ರೋಹಿತ್ ಶರ್ಮಾ, ತಣ್ಣನೇ ತಮ್ಮ ವೈಯಕ್ತಿಕ ದಾಖಲೆಯನ್ನ ಆರು ವರ್ಷಗಳಿಂದ  ಯಾರಿಗೂ ಬಿಟ್ಟು ಕೊಡದೇ ಕಾಯ್ದುಕೊಂಡು ಬಂದಿದ್ದಾರೆ.  ಅದು ವಿರಾಟ್​ ಜತೆಗೆ ಈ ಪಂದ್ಯವೊಂದರಲ್ಲಿ ಭಾರತದ ಪರ ವೈಯಕ್ತಿಕ ಟಾಪ್​​ ಸ್ಕೋರರ್​ ಸ್ಪರ್ಧೆಯಲ್ಲಿ ಕೊಹ್ಲಿ ಹಿಮ್ಮೆಟ್ಟಿಸಿ ಮೊದಲ ಸ್ಥಾನದಲ್ಲೇ ಮುಂದುವರೆದಿದ್ದಾರೆ. 
ಹೌದು ಕಳೆದ ಆರು ವರ್ಷಗಳಿಂದ ರೋಹಿತ್ ಶರ್ಮಾ ಗರಿಷ್ಠ ವೈಯುಕ್ತಿಕ ರನ್ ಗಳಿಕೆ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲೇ ಮುಂದವರೆದಿದ್ದಾರೆ. 2013ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ  209 ರನ್​ಗಳ ಮೂಲಕ ಮೊದಲ ವೈಯಕ್ತಿಕ ದ್ವಿಶತಕ ಬಾರಿಸಿ ದಾಖಲೆ ಬರೆದಿದ್ದರು. ಆ ಮೂಲಕ ಆ ವರ್ಷದ ಟಾಪ್​ ಸ್ಕೋರರ್​ ಆಗಿ ಹೊರ ಹೊಮ್ಮಿದ್ದರು.  ಅಂದಿನಿಂದ ಇತ್ತೀಚೆಗಿನ ವಿಂಡೀಸ್ ವಿರುದ್ಧ ಪಂದ್ಯದವರೆಗೂ ತಮ್ಮ ದಾಖಲೆಯನ್ನು ರೋಹಿತ್ ಮುಂದುವರೆಸಿಕೊಂಡು ಬಂದಿದ್ದಾರೆ.
ಕ್ರಿಕೆಟ್ ವರ್ಷದಲ್ಲಿ ವೈಯುಕ್ತಿಕ ಗರಿಷ್ಠ ಸ್ಕೋರ್ ಕಲೆಹಾಕಿದ ಆಟಗಾರರ ಪಟ್ಟಿಯಲ್ಲಿ ರೋಹಿತ್ ಶರ್ಮಾ ಅಗ್ರ ಸ್ಥಾನದಲ್ಲೇ ಮುಂದುವರೆದ್ದಾರೆ. ರೋಹಿತ್ ಗಳಿಸಿದ ವೈಯುಕ್ತಿಕ ಗರಿಷ್ಠ ರನ್ ಗಳಿಕೆ ಪಟ್ಟಿ ಇಲ್ಲಿದೆ.
2013 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ರೋಹಿತ್ ಶರ್ಮಾ 209 ರನ್​ಗಳ ಮೂಲಕ ಮೊದಲ ವೈಯಕ್ತಿಕ ದ್ವಿಶತಕ ಬಾರಿಸಿ ದಾಖಲೆ ಬರೆದಿದ್ದರು. ಆ ಮೂಲಕ ಆ ವರ್ಷದ ಟಾಪ್​ ಸ್ಕೋರರ್​ ಆಗಿ ಹೊರ ಹೊಮ್ಮಿದ್ದರು.  ಅದೇ ವರ್ಷ ಜೈಪುರದದಲ್ಲಿ ನಡೆದ ಪಂದ್ಯದಲ್ಲೂ ಔಟಾಗದೇ 141 ರನ್​ ಬಾರಿಸಿ ತಮಗೆ ತಾವೇ ಪ್ರತಿಸ್ಪೆರ್ಧೆಯಾಗಿದ್ದರು. ಇದು  ಆ ವರ್ಷ ಭಾರತ ಕ್ರಿಕೆಟ್ ತಂಡದ ಪರ ಆಟಗಾರನೋರ್ವ ಗಳಿಸಿದ ವೈಯುಕ್ತಿಕ ಗರಿಷ್ಟ ರನ್ ಗಳಿಕೆಯಾಗಿತ್ತು.
ಇದಾದ ಬಳಿಕ 2014ರಲ್ಲಿ ಕೋಲ್ಕತ್ತಾದಲ್ಲಿ ಶ್ರೀಲಂಕಾ ವಿರುದ್ಧ ನಡೆದ ಪಂದ್ಯದಲ್ಲಿ  ವಿಶ್ವದಾಖಲೆಯ 264 ರನ್​ಗಳ ದಾಖಲೆ ಬರೆದು ಇತಿಹಾಸ ಸೃಷ್ಟಿಸಿದ್ದರು.  ಅದೇ ವರ್ಷ ನಡೆದ ಪಂದ್ಯದಲ್ಲಿ ವಿರಾಟ್​ ಕೊಹ್ಲಿ, ಅಜೇಯ 139 ರನ್​ ಬಾರಿಸಿ ರೋಹಿತ್​ ನಂತರದ ಸ್ಥಾನದಲ್ಲಿದ್ದರು. 
ಬಳಿಕ 2015 ರಲ್ಲಿ ರೋಹಿತ್ ಶರ್ಮಾ ದಕ್ಷಿಣ ಆಫ್ರಿಕಾ ವಿರುದ್ಧ 150 ರನ್​ ಬಾರಿಸಿದರೆ, ಇದೇ ವರ್ಷ ಮೆಲ್ಬೋರ್ನ್​ನಲ್ಲಿ  ಆಸ್ಟ್ರೇಲಿಯಾ ವಿರುದ್ಧ ನಾಯಕ ಧೋನಿ 138 ರನ್​ ಬಾರಿಸಿದ್ದರು. ಆ ವರ್ಷದಲ್ಲಿ ವೈಯುಕ್ತಿಕ ರನ್ ಗಳಿಗೆ ಪಟ್ಟಿಯಲ್ಲಿ ರೋಹಿತ್ ಅಗ್ರ ಸ್ಥಾನಿಯಾಗಿದ್ದರೆ, ಕೊಹ್ಲಿ 2ನೇಯವರಾಗಿದ್ದರು.
ಇನ್ನು 2016 ರಲ್ಲಿ ಹಿಟ್ ಮ್ಯಾನ್​ ಆಸ್ಟ್ರೇಲಿಯಾ ವಿರುದ್ಧ  ಪರ್ತ್​ನಲ್ಲಿ ನಡೆದ ಪಂದ್ಯದಲ್ಲಿ ಅಮೋಘ 171 ರನ್​ಗಳ ಭಾರಿಸಿದ್ದರು.  ಅದೇ ವರ್ಷ ನ್ಯೂಜಿಲೆಂಡ್​ ವಿರುದ್ಧ ಮೊಹಾಲಿಯಲ್ಲಿ ನಡೆದ  ಪಂದ್ಯದಲ್ಲಿ ಅಜೇಯ 154 ಸಿಡಿಸಿ ಆ ವರ್ಷ ಎರಡನೇ ಅತಿಹೆಚ್ಚು ಸ್ಕೋರ್​ ಮಾಡಿ ಗಮನ ಸೆಳೆದಿದ್ದರು. ಆ ವರ್ಷದಲ್ಲಿ ರೋಹಿತ್ ಮೊದಲೆರಡು ಸ್ಥಾನಗಳಲ್ಲಿ ವಿರಾಜಮಾನರಾಗಿದ್ದರು.
2017ರಲ್ಲಿ ಮೊಹಾಲಿಯಲ್ಲಿ ಶ್ರೀಲಂಕಾ ವಿರುದ್ಧ ನಡೆದ ಪಂದ್ಯದಲ್ಲಿ ರೋಹಿತ್ 208 ರನ್​ಗಳನ್ನು ಸಿಡಿಸುವ ಮೂಲಕ ತಮ್ಮ ಮೂರನೇ ದ್ವಿಶತಕವನ್ನು ದಾಖಲಿಸಿದ್ದರು.  ಇನ್ನು ಯುವರಾಜ್​ ಸಿಂಗ್​ ಕಟಕ್ ನ​ಲ್ಲಿ ಇಂಗ್ಲೆಂಡ್​ ವಿರುದ್ಧ ನಡೆದ ಮ್ಯಾಚ್​ನಲ್ಲಿ  150 ರನ್ ಚಚ್ಚುವ ಮೂಲಕ ಕ್ಯಾಲೆಂಡರ್​ ಇಯರ್ ನಲ್ಲಿ ಪಂದ್ಯವೊಂದರಲ್ಲಿ ಅತಿ ಹೆಚ್ಚು  ವೈಯಕ್ತಿಕ ಸ್ಕೋರ್​ ಮಾಡಿದ 2ನೇ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.
2018 : 
ಇನ್ನು ರೋಹಿತ್​ ಶರ್ಮಾ ಪ್ರಸ್ತುತ ವರ್ಷದ ಮ್ಯಾಚ್ ​ಗಳಲ್ಲೂ ವೈಯಕ್ತಿಕ ಹೆಚ್ಚಿನ ಸ್ಕೋರ್​ ವಿಭಾಗದಲ್ಲಿ​  ನಾಯಕ ಕೊಹ್ಲಿ ಅವರನ್ನ ಹಿಂದಿಕ್ಕಿದ್ದಾರೆ.  ಇದೇ ವರ್ಷ ಕೇಪ್​ ಟೌನ್​ನಲ್ಲಿ ಕೊಹ್ಲಿ ವೈಯಕ್ತಿಕ ಗರಿಷ್ಠ ಸ್ಕೋರ್​ 160 ರನ್​ಗಳ ಸ್ಕೋರ್​ ಅನ್ನು ಹಿಟ್​ ಮ್ಯಾನ್​,  ಸಿಸಿಐ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ವೆಸ್ಟ್​ ಇಂಡೀಸ್​ ವಿರುದ್ಧ 162 ರನ್​ ಬಾರಿಸುವ ಮೂಲಕ ಹಿಮ್ಮೆಟ್ಟಿಸಿದ್ದಾರೆ.  ಪ್ರಸ್ತುತ ಹಾಲಿ ಕ್ರಿಕೆಟ್ ಕ್ಯಾಲೆಂಡರ್ ವರ್ಷದಲ್ಲಿ ವೈಯುಕ್ತಿಕ ಗರಿಷ್ಠ ರನ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಎಲ್ಲವನ್ನೂ ತಡೆಯಲು ಸಾಧ್ಯವಿಲ್ಲ': CJP ದೆಹಲಿ ಪ್ರತಿಭಟನೆಗೆ ನಿರ್ಬಂಧ ಕುರಿತು ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಚಾಟಿ

'ಮಕ್ಕಳನ್ನು ಪ್ರತಿಭಟನೆಗಳಿಂದ ದೂರವಿಡಿ': ದೆಹಲಿ ಪ್ರತಿಭಟನೆಗೆ ಸಿದ್ಧತೆ, ಮಸೀದಿ ಮೈಕ್‌ನಲ್ಲಿ ಪೊಲೀಸರ ಮನವಿ! Video

'ಜೀವನ ನರಕ, ನನ್ನ ಪಾಲಿನ ದೆವ್ವ ಸತ್ತಿದೆ, ಸತ್ತ ಮಾತ್ರಕ್ಕೆ ಪಾಪ ಕಳೆಯಲ್ಲ': ನಾನಾ ಪಾಟೇಕರ್ ವಿರುದ್ಧ ನಟಿ ತನುಶ್ರೀ ದತ್ತಾ ಮತ್ತೆ ಕಿಡಿ-Video

ಈ ಬಾರಿ ಮೈಸೂರು ದಸರಾ ಮತ್ತಷ್ಟು ಆಕರ್ಷಕ; 146 ಕಿ.ಮೀ. ದೀಪಾಲಂಕಾರ; 3,500 ಡ್ರೋನ್‌ಗಳ ಪ್ರದರ್ಶನ

ಭಾರತೀಯ ಮೂಲದ ನ್ಯಾಯಶಾಸ್ತ್ರಜ್ಞೆಗೆ ಈ ಬಾರಿಯ ನೊಬೆಲ್ ಶಾಂತಿ ಪ್ರಶಸ್ತಿ; ನವನೇತಮ್ ನವಿ ಪಿಳ್ಳೈಗೆ ಒಲಿದ ನೊಬೆಲ್ ಶಾಂತಿ ಗರಿ