ಸಂಗ್ರಹ ಚಿತ್ರ 
ಕ್ರಿಕೆಟ್

ಏಷ್ಯಾ ಕಪ್ 2018: ಬಿಸಿಸಿಐ ವಿರೋಧಕ್ಕಿಲ್ಲ ಮಣೆ, ಬದಲಾದ ವೇಳಾ ಪಟ್ಟಿಯಲ್ಲೂ ಟೀಂ ಇಂಡಿಯಾಗೆ ಸತತ ಪಂದ್ಯ ಆಯೋಜನೆ

ಏಷ್ಯಾಕಪ್ 2018ರ ಟೂರ್ನಿಯ ವೇಳಾಪಟ್ಟಿ ಬದಲಾಗಿದ್ದು, ಇದೇ ಸೆಪ್ಟೆಂಬರ್ 15ರಿಂದ ಭಾರತ, ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶ, ಹಾಂಕಾಂಗ್ ಮತ್ತು ಆಪ್ಘಾನಿಸ್ತಾನ ರಾಷ್ಟ್ರಗಳು ಪಾಲ್ಗೊಳ್ಳುವ ಏಷ್ಯಾಕಪ್ ಕ್ರಿಕೆಟ್ ಟೂರ್ನಿ ಆರಂಭವಾಗಲಿದೆ.

ದುಬೈ: ಏಷ್ಯಾಕಪ್ 2018ರ ಟೂರ್ನಿಯ ವೇಳಾಪಟ್ಟಿ ಬದಲಾಗಿದ್ದು, ಇದೇ ಸೆಪ್ಟೆಂಬರ್ 15ರಿಂದ ಭಾರತ, ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶ, ಹಾಂಕಾಂಗ್ ಮತ್ತು ಆಪ್ಘಾನಿಸ್ತಾನ ರಾಷ್ಟ್ರಗಳು ಪಾಲ್ಗೊಳ್ಳುವ ಏಷ್ಯಾಕಪ್ ಕ್ರಿಕೆಟ್ ಟೂರ್ನಿ ಆರಂಭವಾಗಲಿದೆ.
ಈ ಹಿಂದೆ ವೇಳಾಪಟ್ಟಿಯಲ್ಲಿ ಎಡವಟ್ಟಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಬಿಸಿಸಿಐ ತೀವ್ರ ವಿರೋಧ ವ್ಯಕ್ತಪಡಿಸಿತ್ತು. ಇದಾಗ್ಯೂ ಟೀಂ ಇಂಡಿಯಾ ವೇಳಾಪಟ್ಟಿಯಲ್ಲಿ ಯಾವುದೇ ರೀತಿಯ ಬದಲಾವಣೆಯಾಗಿಲ್ಲ. ಆದರ ಕೇವಲ ಟೀಂ ಇಂಡಿಯಾ ಆಡುವ ಮೈದಾನದಲ್ಲಿ ಮಾತ್ರ ಬದಲಾವಣೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಯುಎಇಯಲ್ಲಿ ಏಷ್ಯಾಕಪ್ 2018ರ ಟೂರ್ನಿ ಆಯೋಜನೆಯಾಗಿದ್ದು, ಅಲ್ಲಿನ ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನ ಮತ್ತು ಅಬುದಾಬಿಯ ಶೇಖ್ ಜಾಯೆದ್ ಕ್ರೀಡಾಂಗಣಗಳಲ್ಲಿ ಪಂದ್ಯಗಳ ಆಯೋಜನೆ ಮಾಡಲಾಗಿದೆ. ಸೆಪ್ಟೆಂಬರ್ 15ರಂದು ಬಾಂಗ್ಲಾದೇಶ ಮತ್ತು ಶ್ರೀಲಂಕಾ ತಂಡಗಳು ಮುಖಾಮುಖಿಯಾಗಲಿದ್ದು, ಸೆಪ್ಟೆಂಬರ್ 18ರಿಂದ ಹಾಂಕಾಂಗ್ ವಿರುದ್ಧದ ಪಂದ್ಯದೊಂದಿಗೆ ಭಾರತ ಯಾತ್ರೆ ಆರಂಭವಾಗಲಿದೆ. ಆದರ ಮಾರನೆಯೇ ದಿನವೇ ಭಾರತ ತನ್ನ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಎದುರಿಸಲಿದೆ.
ಒಂದು ವೇಳೆ ಭಾರತ ಸೂಪರ್ 4 ಹಂತ ಪ್ರವೇಶ ಮಾಡಿದರೂ ಕ್ರೀಡಾಂಗಣ ಬದಲಿಸುವ ಅಗತ್ಯತೆ ಇಲ್ಲ. ಭಾರತ ಸೂಪರ್ 4 ಹಂತ ಪ್ರವೇಶ ಮಾಡಿದರೂ ದುಬೈನಲ್ಲೇ ಪಂದ್ಯವಾಡುವಂತೆ ನೂತನ ವೇಳಾಪಟ್ಟಿ ರಚನೆ ಮಾಡಲಾಗಿದೆ. ಇನ್ನು ಭಾರತ ತಂಡಕ್ಕೆ ವಿಶೇಷ ಆತಿಥ್ಯ ನೀಡಲು ಯುಎಇ ಕ್ರಿಕೆಟ್ ಮಂಡಳಿ ನಿರ್ಧರಿಸಿದ್ದು, ಇದಕ್ಕಾಗಿ ವಿಶೇಷ ಸಿಬ್ಬಂದಿಗಳನ್ನು ನೇಮಕ ಮಾಡಿದೆ ಎನ್ನಲಾಗಿದೆ.
ವೇಳಾಪಟ್ಟಿ ವಿರೋಧಿಸಿದ್ದ ಬಿಸಿಸಿಐ
ಬಿಡುಗಡೆಯಾಗಿರುವ ವೇಳಾಪಟ್ಟಿಯಂತೆ ಪಾಕಿಸ್ತಾನ ಸೆಪ್ಟೆಂಬರ್‌ 16 ರಂದು ಕ್ವಾಲಿಫೈರ್‌ ಪಂದ್ಯ ಆಡಿ ಬಳಿಕ 19 ರಂದು ಭಾರತವನ್ನು ಎದುರಿಸಲಿದೆ. ಅಲ್ಲಿಗೆ ಪಾಕಿಸ್ತಾನಕ್ಕೆ ಮುಂದಿನ ಪಂದ್ಯಕ್ಕೆ 2 ದಿನಗಳ ಕಾಲಾವಕಾಶ ದೊರೆಯುತ್ತದೆ. ಆದರೆ ಅದೇ ಭಾರತದ ವಿಚಾರಕ್ಕೆ ಬಂದರೆ, ಭಾರತ ಸೆಪ್ಟೆಂಬರ್ 18  ರಂದು ಕ್ವಾಲಿಫೈರ್‌ ಪಂದ್ಯವನ್ನು ಆಡಿ ಮತ್ತೆ ಮರುದಿನವೇ ಅಂದರೆ ಸೆಪ್ಟೆಂಬರ್ 19 ಪಾಕಿಸ್ತಾನ ವಿರುದ್ಧ ಸೆಣಸಬೇಕು. ಭಾರತಕ್ಕೆ ಯಾವುದೇ ರೀತಿಯ ಕಾಲಾವಕಾಶವಿಲ್ಲ. ಹೀಗಾಗಿ ಬಿಸಿಸಿಐ ವೇಳಾಪಟ್ಟಿ ವಿರುದ್ಧ ಕಿಡಿ ಕಾರಿದೆ. ಅಲ್ಲದೆ ವೇಳಾಪಟ್ಟಿ ಪರಿಷ್ಕರಿಸುವಂತೆ ಆಗ್ರಹಿಸಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಷ್ಯಾ ಕರಾವಳಿಯಲ್ಲಿ ಡ್ರೋನ್ ದಾಳಿ: ಹೊತ್ತಿ ಉರಿದ ತೈಲ ಟ್ಯಾಂಕರ್‌, 23 ಭಾರತೀಯ ಸಿಬ್ಬಂದಿ ಪಾರು..!

Lionel Messi: 21 ವರ್ಷಗಳ ಬಳಿಕ ತವರಿನಲ್ಲೇ ಫುಟ್ಬಾಲ್​ ದಿಗ್ಗಜ ಲಿಯೋನೆಲ್ ಮೆಸ್ಸಿ ಭಾವುಕ ವಿದಾಯ; ಹೇಗಿತ್ತು ನೋಡಿ ಅಂತಿಮ ಪಂದ್ಯ; Video

‘ದಯವಿಟ್ಟು ಮಲಗಬೇಡಿ, ನಮಗೆ ನೀವು ಬೇಕು’: ಸಾವಿನ ದವಡೆಯಲ್ಲಿದ್ದ ಸ್ಮಿತ್ ಮಚ್ಚರ್'ಗೆ ಧೈರ್ಯ ತುಂಬಿದ ದಂತ ವೈದ್ಯ, Flydubai ವಿಮಾನದಲ್ಲಿ ಆ 45 ನಿಮಿಷಗಳಲ್ಲಿ ನಡೆದಿದ್ದೇನು..?

‘ಮತ ಕಳ್ಳತನ’ದ ಆರೋಪದಲ್ಲಿ ಹುರುಳಿಲ್ಲ, ಸುಖಾಸುಮ್ಮನೆ ರಾಹುಲ್ ಗಾಂಧಿಯಿಂದ ಗೊಂದಲ ಸೃಷ್ಟಿ: ಹೆಚ್‌.ಡಿ. ಕುಮಾರಸ್ವಾಮಿ ಆರೋಪ

SIR ಗೊಂದಲ: ಅಕ್ರಮ ಬಯಲಾಗುವ ಭೀತಿಯಿಂದಲೇ ರಾಜಪಾಲರ ಬಳಿ ಓಡಿದ್ದಾರೆ: NDA ನಾಯಕರ ವಿರುದ್ಧ ಡಿಕೆ.ಶಿವಕುಮಾರ್ ವಾಗ್ದಾಳಿ