ಸಂಗ್ರಹ ಚಿತ್ರ 
ಕ್ರಿಕೆಟ್

ಕಬ್ಬಿಣದ ಕಡಲೆ ಪಾಕ್ ಗೆ ಸೇಡಿನ ತಿರುಗೇಟು ನೀಡುವುದೇ ಟೀಂ ಇಂಡಿಯಾ!

ಹಾಂಕಾಂಗ್ ವಿರುದ್ಧದ ಪ್ರಯಾಸದ ಗೆಲುವಿನ ಬೆನ್ನಲ್ಲೇ ಟೀಂ ಇಂಡಿಯಾ ಮತ್ತೊಂದು ಹೈ ವೋಲ್ಟೇಜ್ ಪಂದ್ಯಕ್ಕೆ ಸಜ್ಜಾಗಬೇಕಿದ್ದು, ಇಂದು ಇಂಡೋ-ಪಾಕ್ ನಡುವಿನ ಹೈವೋಲ್ಟೇಜ್ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ.

ದುಬೈ: ಹಾಂಕಾಂಗ್ ವಿರುದ್ಧದ ಪ್ರಯಾಸದ ಗೆಲುವಿನ ಬೆನ್ನಲ್ಲೇ ಟೀಂ ಇಂಡಿಯಾ ಮತ್ತೊಂದು ಹೈ ವೋಲ್ಟೇಜ್ ಪಂದ್ಯಕ್ಕೆ ಸಜ್ಜಾಗಬೇಕಿದ್ದು, ಇಂದು ಇಂಡೋ-ಪಾಕ್ ನಡುವಿನ ಹೈವೋಲ್ಟೇಜ್ ಪಂದ್ಯಕ್ಕೆ ಕ್ಷಣಗಣನೆ  ಆರಂಭವಾಗಿದೆ.
ವಿಶ್ವದಾದ್ಯಂತ ಕ್ರಿಕೆಟ್‌ ಅಭಿಮಾನಿಗಳು ತುದಿಗಾಲಲ್ಲಿ ನಿಂತು ಕಾಯುತ್ತಿರುವ ಘಳಿಗೆ ಕೊನೆಗೂ ಸಮೀಪಿಸಿದ್ದು, ಏಷ್ಯಾ ಕಪ್‌ ಟೂರ್ನಿಯಲ್ಲಿ ಬಹು ನಿರೀಕ್ಷಿತ ಭಾರತ ಮತ್ತು ಪಾಕಿಸ್ತಾನ ನಡುವಣ ಹೈವೋಲ್ಟೇಜ್‌ ಪಂದ್ಯ ದುಬೈನ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಬುಧವಾರ ನಡೆಯಲಿದೆ. ಇಂದು ಸಂಜೆ 5 ಗಂಟೆಗೆ ಪಂದ್ಯ ಆರಂಭವಾಗಲಿದ್ದು, ಸಾಂಪ್ರದಾಯಿಕ ಎದುರಾಳಿಗಳ ನಡುವಿನ ಪಂದ್ಯ ಕದನ ಕುತೂಹಲ ಮೂಡಿಸಿದೆ. 
ಇಡೀ ಏಷ್ಯಾಕಪ್ ಟೂರ್ನಿಯಲ್ಲಿ ಈ ಪಂದ್ಯ ಕೇಂದ್ರಬಿಂದುವಾಗಿ ಮಾರ್ಪಟ್ಟಿದ್ದು, ಉಭಯ ತಂಡಗಳಿಗೂ ಇದು ನಿರ್ಣಾಯಕ ಪಂದ್ಯವಾಗಿ ಮಾರ್ಪಟ್ಟಿದೆ. ಇನ್ನು ನಿನ್ನೆ ನಡೆದ ತನ್ನ ಮೊದಲ ಪಂದ್ಯದಲ್ಲಿ ಭಾರತ ಕ್ರಿಕೆಟ್ ಶಿಶು ಹಾಂಕಾಂಗ್ ವಿರುದ್ಧ ಪ್ರಯಾಸದ ಗೆಲುವು ಸಾಧಿಸಿದೆ. ಒಂದು ಹಂತದಲ್ಲಿ ಪಂದ್ಯವನ್ನೇ ಕಳೆದುಕೊಳ್ಳುವ ಭೀತಿ ಎದುರಾಗಿತ್ತು. ಆದರೆ ಬೌಲರ್ ಗಳ ಸಮಯೋಚಿತ ಬೌಲಿಂಗ್ ದಾಳಿ ಭಾರತ ಪಂದ್ಯ ಗೆಲ್ಲುವಂತೆ ಮಾಡಿತ್ತು. ಆದರೆ ಹಾಂಕಾಂಗ್ ವಿರುದ್ದದ ಪಂದ್ಯದಲ್ಲಿ ಆದ ಎಡವಟ್ಟುಗಳು ಪಾಕ್ ವಿರುದ್ಧವೂ ಮುಂದುವರೆದರೆ ಭಾರತಕ್ಕೆ ಸೋಲು ಕಟ್ಟಿಟ್ಟಬುತ್ತಿ.
ಭಾರತಕ್ಕೆ ಸೇಡು ತೀರಿಸಿಕೊಳ್ಳುವ ತವಕ
ಇತ್ತಂಡಗಳು ಇದೀಗ ದ್ವಿಪಕ್ಷೀಯ ಕ್ರಿಕೆಟ್‌ ಸರಣಿಗಳಲ್ಲಿ ಪಾಲ್ಗೊಳ್ಳದೇ ಇರುವ ಕಾರಣ, ಐಸಿಸಿ ಆಯೋಜಿತ ಟೂರ್ನಿಗಳಲ್ಲಿ ಮಾತ್ರವೇ ಮುಖಾಮುಖಿಯಾಗುತ್ತಿವೆ. ಹೀಗಾಗಿ ಇಂಡೊ-ಪಾಕ್‌ ಕದನ ಕ್ರಿಕೆಟ್‌ ಪ್ರಿಯರಿಗೆ ಹಬ್ಬವೇ ಸರಿ. ಕಳೆದ ಬಾರಿ ಜೂನ್ 18 ರಂದು ಉಭಯ ತಂಡಗಳು ಇಂಗ್ಲೆಂಡ್ ನ ಓವಲ್ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಟೀಂ ಇಂಡಿಯಾ ಸೋಲನುಭವಿಸಿತ್ತು.  ಇನ್ನು ಕಳೆದ ವರ್ಷ ಇಂಗ್ಲೆಂಡ್ ನಲ್ಲಿ ನಡೆದ ಚಾಂಪಿಯನ್ಸ್‌ ಟ್ರೋಫಿ ಕ್ರಿಕೆಟ್‌ ಟೂರ್ನಿಯ ಫೈನಲ್ ನಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಕಡೆಯದಾಗಿ ಮುಖಾಮುಖಿಯಾಗಿದ್ದವು. 
ಈ ಪಂದ್ಯದಲ್ಲಿ ಪಾಕಿಸ್ತಾನ ತಂಡ ಭಾರತದ ಎದುರು 180 ರನ್ ಗಳ ಭರ್ಜರಿ ಜಯ ದಾಖಲಿಸಿತ್ತು. ಈ ಸೋಲಿಗೆ ಸೇಡು ತೀರಿಸಿಕೊಳ್ಳುವುದು ರೋಹಿತ್‌ ಶರ್ಮಾ ನೇತೃತ್ವದ ಭಾರತ ತಂಡದ ಲೆಕ್ಕಾಚಾರವಾಗಿದೆ. ಅಂದಹಾಗೆ ಟೂರ್ನಿಯ ಸೂಪರ್‌ ಫೋರ್‌ ಹಂತದಲ್ಲೂ ಭಾರತ ಮತ್ತು ಪಾಕಿಸ್ತಾನ ತಂಡಗಳು ಎದುರಾಗುವುದು ಕೂಡ ಖಾತ್ರಿಯಾಗಿದ್ದು, ಇತ್ತಂಡಗಳು ಫೈನಲ್‌ ತಲುಪಿದರೆ ಒಂದೇ ಟೂರ್ನಿಯಲ್ಲಿ ಒಟ್ಟಾರೆ 3 ಬಾರಿ ಸಾಂಪ್ರದಾಯಿಕ ಎದುರಾಳಿಗಳ ಕದನ ವೀಕ್ಷಿಸುವುದು ಸಾಧ್ಯವಾಗಲಿದೆ. 
ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವಾಗಿರುವ ಟೀಮ್‌ ಇಂಡಿಯಾ ತನ್ನ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ 'ಎ' ಗುಂಪಿನಲ್ಲಿ ಎರಡನೇ ಲೀಗ್‌ ಪಂದ್ಯದಲ್ಲಿ ಪೈಪೋಟಿ ನಡೆಸಲಿದೆ. ಅಲ್ಲದೆ, ಹಾಂಕಾಂಗ್ ವಿರುದ್ಧ ಪ್ರಯಾಸಕರ ಗೆಲುವು ಸಾಧಿಸಿರುವುದರಿಂದ ಈ ಪಂದ್ಯ ಭಾರತಕ್ಕೆ ಸವಾಲೆನಿಸಿದೆ. ಆದ್ದರಿಂದಲೇ ಬುಧವಾರ ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ 25 ಸಾವಿರಕ್ಕೂ ಅಧಿಕ ಸಂಖ್ಯೆಯ ಪ್ರೇಕ್ಷಕರು ಸೇರುವ ಸಾಧ್ಯತೆ ಇದೆ. 
ಪಾಕಿಸ್ತಾನ ತಂಡದ ಇತ್ತೀಚಿನ ಪ್ರದರ್ಶನ ಗಮನಿಸಿದಲ್ಲಿ ಯುವ ಆಟಗಾರರು ಭರ್ಜರಿ ಪ್ರದರ್ಶನ ನೀಡುತ್ತಿದ್ದಾರೆ. ಇನ್ನು ಯುಎಇ ಅಂಗಣದಲ್ಲಿ ಅತಿ ಹೆಚ್ಚು ಪಂದ್ಯಗಳನ್ನು ಆಡಿದ ಅನುಭವ ಪಾಕ್‌ ತಂಡಕ್ಕಿದೆ. ಜತೆಗೆ ಯುವ ಆರಂಭಿಕ ಬ್ಯಾಟ್ಸ್‌ಮನ್‌ಗಳದ ಫಖರ್‌ ಝಮಾನ್‌ ಮತ್ತು ಇಮಾಮ್‌ ಉಲ್‌ ಹಕ್‌ ಶ್ರೇಷ್ಠ ಲಯದಲ್ಲಿದ್ದಾರೆ. ಅವರಿಗೆ ಬಾಬರ್‌ ಅಝಾಮ್‌ ಉತ್ತಮ ಸಾಥ್‌ ನೀಡುತ್ತಿದ್ದು, ಈ ಮೂವರು ಪಾಕ್‌ ಪಡೆಯ ಬ್ಯಾಟಿಂಗ್‌ ಬೆನ್ನೆಲುಬಾಗಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ನನ್ನ ವಿರುದ್ಧವೇ ಸ್ಟಿಂಗ್ ಆಪರೇಷನ್ ಮಾಡಿ ಟ್ರ್ಯಾಪ್​ ಮಾಡಲು ಯತ್ನ': ಡಿ ಕೆ ಶಿವಕುಮಾರ್ ಸ್ಫೋಟಕ ಆರೋಪ; Video

'Evil Dead': ನಟ ನಾನಾ ಪಾಟೇಕರ್ ಸಾವು, #MeToo ಆರೋಪ ಮಾಡಿದ್ದ ನಟಿ ತನುಶ್ರೀ ದತ್ತಾ ಹೇಳಿದ್ದೇನು? ವಿಚಿತ್ರ ಪೋಸ್ಟ್!

'SIR' ವಿರುದ್ಧ ಭಾರೀ ಪ್ರತಿಭಟನೆ: ಜ್ಞಾನೇಶ್ ಕುಮಾರ್ Z+ ಭದ್ರತೆ ಮತ್ತಷ್ಟು ಹೆಚ್ಚಿಸಿದ ಕೇಂದ್ರ ಸರ್ಕಾರ!

ಚಲಿಸುತ್ತಿದ್ದ ಬಸ್`ನಲ್ಲೇ ವೃದ್ಧನ 'ಮೈ ಬಿಸಿ ಏರಿಸಿ', 1 ಕೋಟಿ ರೂ ಮೌಲ್ಯದ ಚಿನ್ನ ಎಗರಿಸಿದ 'ಖತರ್ನಾಕ್ ಕಳ್ಳಿಯರು', Video

ಕಾವೇರಿ ವಿಚಾರದಲ್ಲಿ ಕರ್ನಾಟಕಕ್ಕೆ CWRC ಮತ್ತೆ ಶಾಕ್: ತಮಿಳುನಾಡಿಗೆ ನಿತ್ಯ 3,000 ಕ್ಯೂಸೆಕ್ ನೀರು ಹರಿಸಲು ಸೂಚನೆ