ಧೋನಿ ಸ್ಟಂಪಿಂಗ್ 
ಕ್ರಿಕೆಟ್

ಕಣ್ ರೆಪ್ಪೆ ಮಿಟುಕಿಸುವಷ್ಟರಲ್ಲೇ ಧೋನಿ ಸ್ಟಂಪಿಂಗ್ ಗೆ ಆಫ್ಘನ್ ನ ಇಬ್ಬರು ಬ್ಯಾಟ್ಸಮನ್ ಗಳ ಬಲಿ!

ಭಾರತ ತಂಡದ ನಾಯಕ ಎಂಎಸ್ ಧೋನಿ ಅವರ ಚಾಣಾಕ್ಷ ವಿಕೆಟ್ ಕೀಪಿಂಗ್ ನಿಂದಾಗಿ ಆಫ್ಘಾನಿಸ್ತಾನ ತಂಡ ನಿನ್ನೆ ಕ್ಷಣ ಮಾತ್ರದಲ್ಲೇ 2 ವಿಕೆಟ್ ಕಳೆದುಕೊಂಡಿತ್ತು.

ದುಬೈ: ಭಾರತ ತಂಡದ ನಾಯಕ ಎಂಎಸ್ ಧೋನಿ ಅವರ ಚಾಣಾಕ್ಷ ವಿಕೆಟ್ ಕೀಪಿಂಗ್ ನಿಂದಾಗಿ ಆಫ್ಘಾನಿಸ್ತಾನ ತಂಡ ನಿನ್ನೆ ಕ್ಷಣ ಮಾತ್ರದಲ್ಲೇ 2 ವಿಕೆಟ್ ಕಳೆದುಕೊಂಡಿತ್ತು.
ವಿಶ್ವ ಕ್ರಿಕೆಟ್ ಕಂಡ ಕೆಲವೇ ಕೆಲ ಅಸಮಾನ್ಯ ವಿಕೆಟ್ ಕೀಪರ್ ಗಳಲ್ಲಿ ಭಾರತದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಕೂಡ ಒಬ್ಬರು. ಅವರ ವಿಕೆಟ್ ಕೀಪಿಂಗ್ ಕೌಶಲ್ಯಕ್ಕೆ ಕೇವಲ ಭಾರತ ಮಾತ್ರವಲ್ಲದೇ ವಿದೇಶಗಳಲ್ಲೂ ಅವರಿಗೆ ಅಭಿಮಾನಿಗಳು ಹುಟ್ಟಿಕೊಂಡಿದ್ದಾರೆ. ಇಂತಹ ಧೋನಿ ನಿನ್ನೆ ಅಫ್ಘಾನಿಸ್ತಾನ ವಿರುದ್ಧ ನಡೆದ ಪಂದ್ಯದಲ್ಲೂ ತಮ್ಮ ಅದ್ಬುತ ಕೈ ಚಳಕ ತೋರಿ ಇಬ್ಬರು ಬ್ಯಾಟ್ಸಮನ್ ಗಳನ್ನು ಪೆವಿಲಿಯನ್ ಗೆ ಅಟ್ಟಿದ್ದಾರೆ.
ಹೌದು.. ನಿನ್ನೆ ನಡೆದ ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಧೋನಿ ತಮ್ಮ ಅಸಮಾನ್ಯ ವಿಕೆಟ್ ಕೀಪಿಂಗ್ ಕೌಶಲ್ಯದಿಂದ ಇಬ್ಬರು ಬ್ಯಾಟ್ಸಮನ್ ಗಳನ್ನು ಪೆವಿಲಿಯನ್ ಗೆ ಅಟ್ಟಿದ್ದಾರೆ. ಆಫ್ಘಾನಿಸ್ತಾನದ ಆರಂಭಿಕ ಆಟಗಾರ ಜಾವೆದ್ ಅಹ್ಮದಿ ಮತ್ತು ಮಧ್ಯಮ ಕ್ರಮಾಂಕದ ಆಟಗಾರ ಹಶ್ಮತುಲ್ಲಾ  ಶಾಹಿದಿ ಅವರನ್ನು ಧೋನಿ ಅದ್ಬುತ ರೀತಿಯಲ್ಲಿ ಪೆವಿಲಿಯನ್  ಗೆ ಅಟ್ಟಿದ್ದಾರೆ. 
ಪಂದ್ಯದ 13ನೇ ಓವರ್ ನಲ್ಲಿ ರವೀಂದ್ರ ಜಡೇಜಾ ಎಸೆದ 4ನೇ ಎಸೆತವನ್ನು ಆಡುವಲ್ಲಿ ಜಾವೆದ್ ಅಹ್ಮದಿ ವಿಫಲರಾದರು. ಕೂಡಲೇ ಸಿಕ್ಕ ಅವಕಾಶವನ್ನು ಉಪಯೋಗಿಸಿಕೊಂಡ ಧೋನಿ ಕಣ್ಣು ಮಿಟುಕಿಸುವಷ್ಟರಲ್ಲಿ ಸ್ಟಂಪೌಟ್ ಮಾಡಿದ್ದರು. ಈ ಸ್ಟಂಪೌಟ್ ಗೆ ಧೋನಿ ತೆಗೆದುಕೊಂಡಿದ್ದು ಕೇವಲ 0.12 ಮಿಲಿ ಸೆಕೆಂಡ್ಸ್ ಗಳು. ಬಳಿಕ ಮುಂದಿನ ಬಲಿಯಾಗಿದ್ದು ಅಫ್ಘಾನಿಸ್ತಾನದ ಅಶ್ಮದುಲ್ಲಾ. 16ನೇ ಓವರ್ ನಲ್ಲಿ ಚಾಹಲೆ ಎಸೆದ 2ನೇ ಎಸೆತವನ್ನು ಅಶ್ಮದುಲ್ಲಾ ರಕ್ಷಣಾತ್ಮಕವಾಗಿ ಆಡಲು ಹೋಗಿ ಎಡವಟ್ಟು ಮಾಡಿಕೊಂಡರು. ಚೆಂಡು ಅಸ್ಮದುಲ್ಲಾ ಅವರನ್ನು ವಂಚಿಸಿ ಮಾಸ್ಟರ್ ಮೈಂಡ್ ಧೋನಿ ಕೈ ಸೇರಿತ್ತು. 
ಕೂಡಲೇ ಧೋನಿ ಸ್ಟಂಪ್ ಗೆ ಬಡಿದರು. ಮೂರನೇ ಅಂಪೈರ್ ತೀರ್ಪಿನಲ್ಲಿ ಇದು ಔಟ್ ಆಗಿತ್ತು. ಈ ಸ್ಟಂಪೌಟ್ ಗೆ ಧೋನಿ ತೆಗೆದುಕೊಂಡಿದ್ದು, ಕೇವಲ  1.16 ಮಿಲಿ ಸೆಕೆಂಡ್ ಗಳು ಮಾತ್ರ. ಆ ಮೂಲಕ ಧೋನಿ ತಮ್ಮ ಅದ್ಭುತ ಕೌಶಲ್ಯದ ಮೂಲಕ ಇಬ್ಬರು ಬ್ಯಾಟ್ಸಮನ್ ಗಳ ಪೆವಿಲಿಯನ್ ಗೆ ಅಟ್ಟಿದ್ದರು.
ಇನ್ನು ಕ್ರಿಕೆಟ್ ಇತಿಹಾಸದಲ್ಲಿ ಅತ್ಯಂತ ವೇಗದ ಸ್ಟಂಪೌಟ್ ದಾಖಲಾಗಿರುವುದು ಕೂಡ ಇದೇ ದಿ ಗ್ರೇಟ್ ಎಂಎಸ್ ಡಿ ಹೆಸರಲ್ಲಿ. 2012ರಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆದಿದ್ದ ಟಿ20 ಸರಣಿಯಲ್ಲಿ ಧೋನಿ ಆಸ್ಚ್ರೇಲಿಯಾದ ಮಿಚೆಲ್ ಮಾರ್ಶ್ ರನ್ನು ಕೇವಲ 0.09 ಮಿಲಿ ಸೆಕೆಂಡ್ಸ್ ಗಳಲ್ಲಿ ರನೌಟ್ ಮಾಡಿದ್ದರು. ರಾಹುಲ್ ಶರ್ಮಾ ಎಸೆದಿದ್ದ ಚೆಂಡನ್ನು ಆಡುವಲ್ಲಿ ಮಾರ್ಶ್ ವಿಫಲರಾಗಿದ್ದರು. ಆದರೆ ಹಿಂದೆ ತಿರುಗಿ ನೋಡುವಷ್ಟರಲ್ಲೇ ಧೋನಿ ಬೇಲ್ಸ್ ಎಗರಿಸಿದ್ದರು. ಇದು ಕ್ರಿಕೆಟ್ ಇತಿಹಾಸದಲ್ಲಿ ದಾಖಲಾಗಿರುವ ಅತ್ಯಂತ ವೇಗದ ಸ್ಟಂಪೌಟ್ ಆಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

We’re getting married! ನಾವು ಮದುವೆ ಆಗುತ್ತಿದ್ದೇವೆ: ಕೊನೆಗೂ ಭಾವಿ ಪತಿ ಜತೆ ಗುಡ್ ನ್ಯೂಸ್ ನೀಡಿದ ನಟಿ ಸ್ಪಂದನಾ

'ನನ್ನ ಚೋಲಿ ಬಗ್ಗೆ 6 ಜನರಿಂದ ಪ್ಯಾನಲ್ ಡಿಸ್ಕಷನ್, ಸಂಸ್ಕೃತಿ ಬಟ್ಟೆಯಲ್ಲ, ಹೃದಯದಲ್ಲಿದೆ'; ರಾಖಿ ಜಾಹೀರಾತು ವಿವಾದ ಬಗ್ಗೆ ಮೌನ ಮುರಿದ ನಟಿ Kriti Sanon

ಜಿಲ್ಲಾ, ತಾಲೂಕು ಪಂಚಾಯ್ತಿ ಎಲೆಕ್ಷನ್'ಗೆ ಕೊನೆಗೂ ಮುಹೂರ್ತ ಫಿಕ್ಸ್; ನಾಳೆಯೇ ಮೀಸಲಾತಿ ಪಟ್ಟಿ ಪ್ರಕಟ

KPSC ನೇಮಕಾತಿ ಹಗರಣ: ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್, ಸದಸ್ಯೆ ಗೀತಾ 13 ದಿನ ED ಕಸ್ಟಡಿಗೆ