ಕ್ರಿಕೆಟ್

ಐಪಿಎಲ್‌ ಪ್ರದರ್ಶನ ನೋಡಿ ಕೊಹ್ಲಿ ಫಾರ್ಮ್‌ ನಿರ್ಧರಿಸುವುದು ತಪ್ಪು: ವೆಂಗ್‌ ಸರ್ಕಾರ್‌

Lingaraj Badiger
ಪಣಜಿ: ಐಪಿಎಲ್ ಟೂರ್ನಿಯ ಪ್ರದರ್ಶನ ಒಬ್ಬ ಆಟಗಾರನ ಸಾಮಾರ್ಥ್ಯ ನಿರ್ಧರಿಸುವುದಿಲ್ಲ. ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರು ಅದ್ಭುತ ಲಯದಲ್ಲಿದ್ದಾರೆ. ವಿಶ್ವ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳಲ್ಲಿ ಕೊಹ್ಲಿ ಕೂಡ ಒಬ್ಬರು. ಐಪಿಎಲ್ ಪ್ರದರ್ಶನದ ಆಧಾರದ ಮೇಲೆ ಕೊಹ್ಲಿ ಅವರ ಫಾರ್ಮ್ ಅನ್ನು ನಿರ್ಧರಿಸುವುದು ತಪ್ಪು ಎಂದು ದಿಲೀಪ್ ವೆಂಗ್ ಸರ್ಕಾರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 
ವಿರಾಟ್ ಕೊಹ್ಲಿ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ರಸ್ತುತ ನಡೆಯುತ್ತಿರುವ ಐಪಿಎಲ್ ಟೂರ್ನಿಯಲ್ಲಿ ಆಡಿರುವ ಎಲ್ಲಾ 6 ಪಂದ್ಯಗಳಲ್ಲಿ ಸೋಲು ಅನುಭವಿಸಿದೆ. ಇದಕ್ಕೂ ಮೊದಲು ಟೀಂ ಇಂಡಿಯಾ, ತವರು ನೆಲದಲ್ಲಿ ನಡೆದಿದ್ದ ಆಸ್ಟ್ರೇಲಿಯಾ ವಿರುದ್ಧ ಏಕದಿನ ಹಾಗೂ ಟಿ-20 ಸರಣಿಯಲ್ಲಿ ಸೋಲು ಅನುಭವಿಸಿದೆ. 
“ವಿರಾಟ್ ಕೊಹ್ಲಿ ಸದ್ಯ ಅದ್ಭುತ ಫಾರ್ಮ್‌ನಲ್ಲಿದ್ದಾರೆ. ಇವರ ಜತೆಗೆ ರೋಹಿತ್ ಶರ್ಮಾ ಕೂಡ ಕ್ಲಾಸಿಕ್ ಬ್ಯಾಟಿಂಗ್ ಮಾಡುತ್ತಿದ್ದಾರೆ. ಭಾರತ ತಂಡ ಕೇವಲ ಇವರಿಬ್ಬರ ಮೇಲೆ ಅವಲಂಬಿತವಾಗಿಲ್ಲ. ಇನ್ನುಳಿದ ಬ್ಯಾಟ್ಸ್‌ಮನ್‌ಗಳು ನೆರವಾಗುವುದು ಅಗತ್ಯ. ಕೊಹ್ಲಿ, ರೋಹಿತ್ ಬಹುಬೇಗ ವಿಕೆಟ್ ಒಪ್ಪಿಸಿದರೆ, ಇನ್ನುಳಿದವರಿಗೆ ಒತ್ತಡ ಹೆಚ್ಚಾಗುತ್ತದೆ. ಇಂಥ ಕ್ಲಿಷ್ಟ ಸಂದರ್ಭಗಳನ್ನು ಎದುರಿಸುವ ಸಾಮಾರ್ಥ್ಯವನ್ನು ಇನ್ನುಳಿದವರು ರೂಡಿಸಿಕೊಳ್ಳಬೇಕು” ಎಂದರು.
“ಐಸಿಸಿ ವಿಶ್ವಕಪ್‌ನಲ್ಲಿ ಭಾರತ ಅಂತಿಮ ನಾಲ್ಕರ ಘಟ್ಟಕ್ಕೆ ತಲುಪುವುದು ಖಚಿತ. ಕಳೆದ ಬಾರಿಯ ಬೌಲಿಂಗ್ ವಿಭಾಗಕ್ಕಿಂತ ಈ ಬಾರಿ ಬೌಲಿಂಗ್ ಲೈನ್ ಅಪ್ ಉತ್ತಮವಾಗಿದೆ. ಆದ್ದರಿಂದ ಭಾರತಕ್ಕೆ ವಿಶ್ವಕಪ್ ಗೆಲ್ಲುವ ಸಾಕಷ್ಟು ಸಾಧ್ಯತೆಗಳಿದೆ. ಜಸ್ಪ್ರೀತ್ ಬೂಮ್ರಾ ಸೇರಿದಂತೆ ವೇಗಿಗಳು ಎದುರಾಳಿ ತಂಡವನ್ನು ಸಮಯಕ್ಕೆ ತಕ್ಕಂತೆ ನಿಯಂತ್ರಿಸುವ ಸಾಮಾರ್ಥ್ಯವಿದೆ” ಎಂದು ಹೇಳಿದ್ದಾರೆ.
"ವಿಶ್ವಕಪ್ ಭಾರತ ತಂಡದಲ್ಲಿ ಭರ್ತಿಯಾಗದೆ ಖಾಲಿ ಉಳಿದಿರುವ ನಾಲ್ಕನೇ ಬ್ಯಾಟಿಂಗ್ ಕ್ರಮಾಂಕಕ್ಕೂ ವೆಂಗಸರ್ಕಾರ್ ಸಲಹೆ ನೀಡಿದ್ದಾರೆ. ನಾಲ್ಕನೇ ಕ್ರಮಾಂಕಕ್ಕೆ ಕೆ.ಎಲ್ ರಾಹುಲ್ ಅಥವಾ ಅಜಿಂಕ್ಯಾ ರಹಾನೆ ಅವರು ಸೂಕ್ತ. ಜತೆಗೆ, ಆಸ್ಟ್ರೇಲಿಯಾ ನೆಲದಲ್ಲಿ ಉತ್ತಮ ಪ್ರದರ್ಶನ ತೋರಿದ್ದ ಮಯಾಂಕ್ ಅಗರ್ವಾಲ್ ಕೂಡ ಉತ್ತಮ ಆಯ್ಕೆಯಾಗಲಿದೆ ಎಂದು ಸಲಹೆ ನೀಡಿದ್ದು, ಐಪಿಎಲ್ ಪ್ರದರ್ಶನ ನೀಡಿ ನಾಲ್ಕನೇ ಕ್ರಮಾಂಕ ಆಯ್ಕೆ ಮಾಡಿಕೊಳ್ಳಬಾರದು" ಎಂದು ಸಲಹೆ ನೀಡಿದ್ದಾರೆ.
SCROLL FOR NEXT