ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಆರ್‌ಸಿಬಿ ಹಾಗೂ ಪಂಜಾಬ್ ನಡುವಿನ ಪಂದ್ಯದ ವೇಳೆ ಕೆಲಕಾಲ ಚೆಂಡು ಅದೃಶ್ಯವಾಗಿದ್ದು ಕೆಲ ಕಾಲ ಆತಂಕ ಪರಿಸ್ಥಿತಿ ನಿರ್ಮಾಣವಾಗಿತ್ತು.
ಆರ್‌ಸಿಬಿ ಮೊದಲು ಬ್ಯಾಟಿಂಗ್ ಮಾಡುತ್ತಿದ್ದ ವೇಳೆ 15ನೇ ಓವರ್ ಗೂ ಮುನ್ನ ಟೈಮ್ ಔಟ್ ತೆಗೆದುಕೊಳ್ಳಲಾಗಿತ್ತು. ಟೈಮ್ ಔಟ್ ಬಳಿಕ ಬೌಲಿಂಗ್ ಗೆ ಅಂಕಿತ್ ರಜಪೂತ್ ಮುಂದಾಗಿದ್ದರು. ಆದರೆ ತಮ್ಮ ಬಳಿ ಚೆಂಡು ಇಲ್ಲ ಎಂದು ಹೇಳಿದರು. ಈ ವೇಳೆ ಪಂಜಾಬ್ ನಾಯಕ ಆರ್ ಅಶ್ವಿನ್ ಚೆಂಡು ಕೊಡುವಂತೆ ಅಂಪೈರ್ ರನ್ನು ಕೇಳಿದರು. ಆಗ ತಮ್ಮ ಬಳಿ ಚೆಂಡು ಇಲ್ಲವೆಂದು ಅಂಪೈರ್ ವಾದಿಸಿದರು.
ಕೂಡಲೇ ಅಂಪೈರ್ ಚೆಂಡು ನಾಪತ್ತೆಯಾಗಿದೆ ಎಂದು ಭಾವಿಸಿ ಹೊಸ ಚೆಂಡನ್ನು ತರುವಂತೆ ಸೂಚಿಸಿದರು. ಈ ವೇಳೆ ಹೊಸ ಚೆಂಡನ್ನು ನೀಡಲಾಯಿತು. ಅಷ್ಟರಲ್ಲಿ ತಾಂತ್ರಿಕ ವಿಭಾಗ ಚೆಂಡು ಎಲ್ಲಿ ಹೋಯಿತು ಎಂದು ರಿವೈಂಡ್ ಮಾಡಿ ನೋಡಿದಾಗ ಅಂಪೈರ್ ಒಬ್ಬರು ಚೆಂಡನ್ನು ತಮ್ಮ ಜೇಬಿನಲ್ಲಿ ಇಟ್ಟುಕೊಂಡಿದ್ದು ಕಂಡುಬಂದಿತು.
ಅಷ್ಟರಲ್ಲಿ ಹೊಸ ಚೆಂಡು ಬಂದಿದ್ದರಿಂದ ಹಳೆಯ ಚೆಂಡನ್ನು ಬೌಲರ್ ಗೆ ನೀಡಿ ಹೊಸ ಚೆಂಡನ್ನು ಅಂಪೈರ್ ತಮ್ಮ ಜೇಬಿನಲ್ಲಿ ಹಾಕಿಕೊಂಡ ದೃಶ್ಯ ಎಲ್ಲರು ನಗುವಂತೆ ಮಾಡಿತು. ಈ ವಿಡಿಯೋ ಇದೀಗ ವೈರಲ್ ಆಗಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos