ಕ್ರಿಕೆಟ್

ಟೀಂ ಇಂಡಿಯಾ ಪ್ರಧಾನ ಕೋಚ್ ಆಗಿ ರವಿಶಾಸ್ತ್ರಿ ಮರು ಆಯ್ಕೆ ಬೆನ್ನಲ್ಲೇ ವೇತನ ಇನ್ನಷ್ಟು ಜಾಸ್ತಿ?

Vishwanath S

ಮುಂಬೈ: ಶುಕ್ರವಾರವಷ್ಟೇ ಭಾರತ ಕ್ರಿಕೆಟ್‌ ತಂಡದ ಮುಖ್ಯ ತರಬೇತುದಾರರಾಗಿ ಎರಡನೇ ಅವಧಿಗೆ ನೇಮಕಗೊಂಡಿರುವ ರವಿಶಾಸ್ತ್ರಿ ಅವರ ವೇತನ ಕಳೆದ ಬಾರಿಗಿಂತ ಈ ಬಾರಿ ಇನ್ನಷ್ಟು ಏರಿಕೆಯಾಗುವ ಸಾಧ್ಯತೆ ಇದೆ.

ಕಪಿಲ್‌ದೇವ್‌ ನೇತೃತ್ವದ ಬಿಸಿಸಿಐ ಕ್ರಿಕೆಟ್‌ ಸಲಹಾ ಸಮಿತಿಯು ರವಿಶಾಸ್ತ್ರಿ ಅವರನ್ನು 2021ರವರೆಗೆ ಎರಡನೇ ಅವಧಿಗೆ ಮುಖ್ಯ ಕೋಚ್‌ ಆಗಿ ಮುಂದುವರಿಸಿದೆ. ಇನ್ನೂ, ಟೀಮ್‌ ಇಂಡಿಯಾದ ಸಹಾಯಕ ಸಿಬ್ಬಂದಿ ನೇಮಕ ಮಾಡುವ ಪ್ರಕ್ರಿಯೆಯಲ್ಲಿ ನಿರತವಾಗಿದೆ. ಆದರೆ, ಬಿಸಿಸಿಐ ಮುಖ್ಯ ಕೋಚ್‌ ಹೆದ್ದೆಗೆ ಎಷ್ಟು ಸಂಭಾವನೆ ನೀಡಬಹುದೆಂಬುದು ಇದೀಗ ಎಲ್ಲರಲ್ಲೂ ಆಸಕ್ತಿ ಕೆರಳಿಸಿದೆ.
 

SCROLL FOR NEXT