ವೆಸ್ಟ್ ಇಂಡೀಸ್ ವಿರುದ್ಧ ಭಾರತಕ್ಕೆ ಭರ್ಜರಿ ಜಯ: ಸರಣಿ ವಶ! 
ಕ್ರಿಕೆಟ್

ವೆಸ್ಟ್ ಇಂಡೀಸ್ ವಿರುದ್ಧ ಭಾರತಕ್ಕೆ ಭರ್ಜರಿ ಜಯ: ಸರಣಿ ವಶ! 

3 ನೇ ಟಿ20 ಪಂದ್ಯದಲ್ಲಿ ಭಾರತ ವೆಸ್ಟ್ ಇಂಡೀಸ್ ವಿರುದ್ಧ 67 ರನ್ ಗಳ ಗೆಲುವು ಸಾಧಿಸಿದ್ದು ಸರಣಿಯನ್ನು 2-1 ಅಂತರದಿಂದ ವಶಪಡಿಸಿಕೊಂಡಿದೆ. 

ವಾಖಂಡೆ: 3 ನೇ ಟಿ20 ಪಂದ್ಯದಲ್ಲಿ ಭಾರತ ವೆಸ್ಟ್ ಇಂಡೀಸ್ ವಿರುದ್ಧ 67 ರನ್ ಗಳ ಗೆಲುವು ಸಾಧಿಸಿದ್ದು ಸರಣಿಯನ್ನು 2-1 ಅಂತರದಿಂದ ವಶಪಡಿಸಿಕೊಂಡಿದೆ. 

ಮೊದಲು ಬ್ಯಾಟಿಂಗ್ ಮಾಡಿದ ಭಾರತ 3 ವಿಕೆಟ್ ನಷ್ಟಕ್ಕೆ ವೆಸ್ಟ್ ಇಂಡೀಸ್ ಗೆ 241 ರನ್ ಗಳ ಗುರಿ ನೀಡಿತ್ತು. ಬೃಹತ್ ಗುರಿ ಬೆನ್ನಟ್ಟಿದ ವೆಸ್ಟ್ ಇಂಡೀಸ್ ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ ಕೇವಲ 178 ರನ್ ಗಳನ್ನಷ್ಟೇ ದಾಖಲಿಸಲು ಸಾಧ್ಯವಾಯಿತು. 

ಭಾರತದ ಪರ ರೋಹಿತ್ ಶರ್ಮ 34 ಎಸೆತಗಳಲ್ಲಿ 71 ರನ್ ಗಳಿಸಿದರು, ಕೆಎಲ್ ರಾಹುಲ್ 56 ಎಸೆತಗಳಲ್ಲಿ 91 ರನ್ ಗಳಿಸಿ ಭಾರತ ಬೃಹತ್ ಮೊತ್ತ ಪೇರಿಸುವುದಕ್ಕೆ ನೆರವಾದರು, ನಾಯಕ ವಿರಾಟ್ ಕೊಹ್ಲಿ ಸಹ 29 ಎಸೆತಗಳಲ್ಲಿ 70 ರನ್ ಗಳಿಸಿದರು. 

ವೆಸ್ಟ್ ಇಂಡೀಸ್ ಪರ ನಾಯಕ ಕೀರೊನ್ ಪೊಲಾರ್ಡ್​​ 39 ಎಸೆತಗಳಲ್ಲಿ 68 ರನ್ ಹಾಗೂ  ಶಿಮ್ರೋನ್ ಹೆಟ್ಮರ್ 24 ಎಸೆತಗಳಲ್ಲಿ 41 ರನ್ ಗಳಿಸಿ ತಂಡಕ್ಕೆ ನೆರವಾದರು. ಆದರೆ  ಉಳಿದ ಬ್ಯಾಟ್ಸ್ಮನ್ ಗಳು ಪೆವಿಲಿಯನ್ ಪರೇಡ್ ನಡೆಸಿದ ಪರಿಣಾಮ ವೆಸ್ಟ್ ಇಂಡೀಸ್  ಭಾರತದೆದುರು ಸೋಲೊಪ್ಪಿಕೊಂಡಿತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

KPSC ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್​​ಗೆ ED ಶಾಕ್​: ಮನೆ, ಕಚೇರಿ ಸೇರಿದಂತೆ 13ಕ್ಕೂ ಹೆಚ್ಚು ಕಡೆ ದಾಳಿ

ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾದ 'ಮಂಕಿಮ್ಯಾನ್'; ಜ್ಯೋತಿರಾಜ್ ಕೈ ಹಿಡಿಯುತ್ತಿರುವ ಯುವತಿ ಯಾರು ಗೊತ್ತಾ?

‘Dimagi Naxal’ ವಿವಾದ: ‘ಕಾಂಗ್ರೆಸ್‌ ಮಾವೋವಾದಿ ಪಕ್ಷವಾಗಿ ಬದಲಾಗುತ್ತಿದೆ’: ಕಿರಣ್‌ ರಿಜಿಜು ವಾಗ್ದಾಳಿ

‘ಅಲ್ಲಿ ಪ್ರತಿ ಮತದಾರನಿಗೂ photo ID’ಯಿದೆ: ಭಾರತದ ಚುನಾವಣಾ ವ್ಯವಸ್ಥೆ ಕೊಂಡಾಡಿದ ಟ್ರಂಪ್, ಅಮೆರಿಕಾ ಮತದಾನ ವ್ಯವಸ್ಥೆ ಬದಲಾವಣೆಗೆ ಪಟ್ಟು, SAVE America Act ಜಾರಿಗೆ ಆಗ್ರಹ..!

ಜಿಲ್ಲಾವಾರು ಕಾಂಗ್ರೆಸ್ ಶಾಸಕರೊಂದಿಗೆ ನಿಯಮಿತ ಸಭೆಗೆ ಸಿಎಂ ಡಿಕೆ. ಶಿವಕುಮಾರ್‌ ನಿರ್ಧಾರ..!