ಎಬಿ ಡಿವಿಲಿಯರ್ಸ್ರಂತೆ ರಿವರ್ಸ್ ಸ್ವೀಪ್ 6 ಬಾರಿಸಿದ ಯುವರಾಜ್ ಸಿಂಗ್, ವಿಡಿಯೋ ವೈರಲ್!
ಮುಂಬರುವ ವಿಶ್ವಕಪ್ ಟೂರ್ನಿಗೆ ಟೀಂ ಇಂಡಿಯಾದಲ್ಲಿ ಸ್ಥಾನ ಕಂಡಕೊಳ್ಳಲು ಹರಸಾಹಸ ಪಡುತ್ತಿರುವ ಸ್ಫೋಟಕ ಬ್ಯಾಟ್ಸ್ ಮನ್ ಯುವರಾಜ್ ಸಿಂಗ್...
ಹೈದರಾಬಾದ್: ಮುಂಬರುವ ವಿಶ್ವಕಪ್ ಟೂರ್ನಿಗೆ ಟೀಂ ಇಂಡಿಯಾದಲ್ಲಿ ಸ್ಥಾನ ಕಂಡಕೊಳ್ಳಲು ಹರಸಾಹಸ ಪಡುತ್ತಿರುವ ಸ್ಫೋಟಕ ಬ್ಯಾಟ್ಸ್ ಮನ್ ಯುವರಾಜ್ ಸಿಂಗ್ ಅವರು ಆರ್ಸಿಬಿ ಸ್ಫೋಟಕ ಬ್ಯಾಟ್ಸ್ ಮನ್ ಎಬಿ ಡಿವಿಲಿಯರ್ಸ್ ರೀತಿ ರಿವರ್ಸ್ ಸ್ವೀಪ್ ಸಿಕ್ಸರ್ ಬಾರಿಸಿ ಗಮನ ಸೆಳೆದಿದ್ದಾರೆ.
ರಿವರ್ಸ್ ಸ್ವೀಪ್ ಕ್ರಿಕೆಟ್ ನಲ್ಲಿ ಜನಪ್ರಿಯ ಹೊಡೆತ. ಆದರೆ ಈ ಹೊಡೆತ ಎಷ್ಟು ಆಕರ್ಷಕವೋ ಅಷ್ಟೇ ಅಪಾಯಕಾರಿಯೂ ಹೌದು. ಇಂತಹ ಕ್ಲಿಷ್ಟಕರ ಹೊಡೆತದಲ್ಲಿ ಸಿಕ್ಸರ್ ಬಾರಿಸುವ ಮೂಲಕ ಯುವರಾಜ್ ಸಿಂಗ್ ತಮ್ಮ ಸಾಮರ್ಥ್ಯ ಸಾಬೀತುಪಡಿಸಿದ್ದಾರೆ.
ಮಾಲೆಯಲ್ಲಿ ನಡೆದ ಏರ್ ಇಂಡಿಯಾ ಹಾಗೂ ಮಾಲ್ಡೀವ್ಸ್ ಕ್ರಿಕೆಟ್ ಟೀಂ ನಡುವಿನ ಸ್ನೇಹಪೂರ್ವಕ ಪಂದ್ಯದಲ್ಲಿ ಯುವರಾಜ್ ಈ ಹೊಡೆತ ಬಾರಿಸಿದ್ದಾರೆ. ಯುವಿ ಏರ್ ಇಂಡಿಯಾ ತಂಡವನ್ನು ಪ್ರತಿನಿಧಿಸಿದ್ದು ಎದುರಾಳಿ ತಂಡ ಮಾಲ್ಡೀವ್ಸ್ ನಲ್ಲಿ ಅಧ್ಯಕ್ಷ ಇಬ್ರಾಹಿಂ ಮೊಹಮ್ಮದ್ ಸೋಲಿ ಹಾಗೂ ಉಪಾಧ್ಯಕ್ಷ ಫೈಸಲ್ ನಸೀಮ್ ಭಾಗವಹಿಸಿದ್ದರು.