ಮತ್ತೆ ಕಾಲು ಅಗಲಿಸಿ ಸೇಫಾದ ಎಂಎಸ್ ಧೋನಿ, ವಿಡಿಯೋ ವೈರಲ್!
ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧ ಎರಡನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಸೋಲು ಕಾಣುವ ಮೂಲಕ ಸರಣಿ ಸೋತಿದೆ. ಆದರೆ ಇದೇ ಪಂದ್ಯದಲ್ಲಿ ಎಂಎಸ್ ಧೋನಿ ಮಾತ್ರ ನನ್ನನ್ನು ನೀನು ಸ್ಟಂಪ್...
ಬೆಂಗಳೂರು: ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧ ಎರಡನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಸೋಲು ಕಾಣುವ ಮೂಲಕ ಸರಣಿ ಸೋತಿದೆ. ಆದರೆ ಇದೇ ಪಂದ್ಯದಲ್ಲಿ ಎಂಎಸ್ ಧೋನಿ ಮಾತ್ರ ನನ್ನನ್ನು ನೀನು ಸ್ಟಂಪ್ ಮಾಡಲಾರೆ ಎಂಬುದನ್ನು ಸಾಬೀತುಪಡಿಸಿದ್ದಾರೆ.
ಹೌದು, ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಟಿ20 ಪಂದ್ಯದ 11.1 ಓವರ್ ನಲ್ಲಿ ಜಂಪಾ ಬೌಲಿಂಗ್ ನಲ್ಲಿ ಧೋನಿ ಮುಂದಕ್ಕೆ ಬಂದು ಭರ್ಜರಿ ಹೊಡೆತ ಹೊಡೆಯಲು ಮುಂದಾದರೂ ಆದರೆ ಚೆಂಡು ಬ್ಯಾಟ್ ಗೆ ತಾಗುವುದಿಲ್ಲ ಎಂದು ಅರಿತ ಧೋನಿ ಅಲ್ಲಿಂದಲೇ ಕಾಲನ್ನು ಅಗಲಿಸಿ ಕ್ರೀಸ್ ಮುಟ್ಟಿ ಸೇಫಾದರೂ ಈ ವಿಡಿಯೋ ಇದೀಗ ವೈರಲ್ ಆಗಿದೆ.
ಈ ರೀತಿ ಈ ಹಿಂದೆ ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದಲ್ಲೂ ಸಹ ಧೋನಿ ಮಾಡಿದ್ದು ಅಂದು ಸಹ ಔಟಾಗದೇ ಸೇಫಾಗಿದ್ದರು.