ರಿಷಭ್ ಪಂತ್ 
ಕ್ರಿಕೆಟ್

ರಿಷಭ್ ಪಂತ್ ಹಾಡಿನೊಂದಿಗೆ ಆಸ್ಟ್ರೇಲಿಯಾ ಕಾಲೆಳೆದ ಟೀಂ ಇಂಡಿಯಾ ಅಭಿಮಾನಿಗಳು!

ಭಾರತ ತಂಡದ ಅಧಿಕೃತ ಅಭಿಮಾನಿಗಳ ಸಂಘ ಭಾರತ ಆರ್ಮಿ ಉದಯವಾಗಿದ್ದು, ರಿಷಭ್ ಪಂತ್ ಪರ ಹಾಡಿನೊಂದಿಗೆ ಕಾಂಗರೂಗಳನ್ನು ಟ್ರೋಲ್ ಮಾಡುತ್ತಿದ್ದಾರೆ.

ಸಿಡ್ನಿ:  ಆಸ್ಟ್ರೇಲಿಯಾ ವಿರುದ್ಧದ ನಾಲ್ಕನೇ ಹಾಗೂ ಅಂತಿಮ ಟೆಸ್ಟ್  ಎರಡನೇ ದಿನವಾದ ಇಂದು ವಿಕೆಟ್ ಕೀಪರ್  ರಿಷಭ್  ಪಂತ್ ಭರ್ಜರಿ ಪ್ರದರ್ಶನ ತೋರುತ್ತಿರುವಂತೆ  ಭಾರತ ತಂಡದ ಅಧಿಕೃತ ಅಭಿಮಾನಿಗಳ ಸಂಘ ಭಾರತ ಆರ್ಮಿ ಉದಯವಾಗಿದ್ದು, ರಿಷಭ್ ಪಂತ್ ಪರ ಹಾಡಿನೊಂದಿಗೆ  ಕಾಂಗರೂಗಳನ್ನು ಟ್ರೋಲ್ ಮಾಡುತ್ತಿದ್ದಾರೆ.

ಈ ಹಿಂದೆ ಮೆಲ್ಬರ್ನ್ ನಲ್ಲಿ ನಡೆದ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದ ವೇಳೆಯಲ್ಲಿ  ಪಂತ್ ಬ್ಯಾಟ್ ಮಾಡುವ ವೇಳೆ ಆಸೀಸ್ ನಾಯಕ ಟಿಮ್ ಪೇಯ್ನ್  ನೀನು ಬೇಟಿ ಸಿಟ್ಟಿಂಗ್ ಮಾಡು ಎಂದು ಸ್ಲೆಡ್ಜಿಂಗ್ ಮಾಡಿದ್ದರು.
ನಂತರ ಪಂದ್ಯ ಗೆದ್ದ ಬಳಿಕ ರಿಷಭ್ ಪಂತ್ ನೇರವಾಗಿ ಪೈನ್ ಮನೆಗೆ ಹೋಗಿ ಬೊನೀ ಪೈನ್ ಹಾಗೂ ಮಕ್ಕಳೊಂದಿಗೆ ಫೋಟೋಗೆ ಪೋಸ್ ಕೊಟ್ಟಿದ್ದರು. ಇದು ಸಾಕಷ್ಟು ವೈರಲ್ ಆಗಿತ್ತು.
ಇದಕ್ಕೆ ಈಗ  ಭಾರತೀಯ ಅಭಿಮಾನಿಗಳು ಪ್ರೇಕ್ಷಕರ ಗ್ಯಾಲರಿಯಲ್ಲಿ ರಿಷಭ್ ಪಂತ್ ಪರ ಹಾಡು ಹೇಳುವ ಮೂಲಕ ತಿರುಗೇಟು ನೀಡಿದ್ದಾರೆ. ಭಾರತಕ್ಕೆ ರಿಷಬ್ ಪಂತ್ ಸಿಕ್ಕಿದ್ದಾರೆ.  ಅವರು ಸಿಕ್ಸ್ ಕೂಡಾ ಬಾರಿಸುತ್ತಾರೆ. ನಿಮ್ಮ ಮಕ್ಕಳನ್ನೂ ನೋಡಿಕೊಳ್ಳುತ್ತಾರೆ ಎಂಬರ್ಥದಲ್ಲಿ ಹಾಡು ಹಾಡುತ್ತಿದ್ದಾರೆ. ರಿಷಭ್ ಪಂತ್ ಸಿಡ್ನಿ ಟೆಸ್ಟ್ ನಲ್ಲಿ   189 ಎಸೆತಗಳಲ್ಲಿ ಅಜೇಯ 159 ರನ್ ಗಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?