ಭಾರತದ ವಿರುದ್ಧದ ಏಕದಿನ ಸರಣಿಗೆ ಆಸಿಸ್ ತಂಡ ಪ್ರಕಟ: ಬೌಲಿಂಗ್ ಲೆಜೆಂಡ್ ಶೇನ್ ವಾರ್ನ್ ಕಿಡಿ!
ಟೀಂ ಇಂಡಿಯಾ ವಿರುದ್ಧದ ಮುಂಬರುವ ಏಕದಿನ ಸರಣಿಗೆ ಕ್ರಿಕೆಟ್ ಆಸ್ಟ್ರೇಲಿಯಾ 14 ಮಂದಿ ಆಟಗಾರರ ತಂಡ ಪ್ರಕಟಿಸಿದ್ದು, ಈ ಆಯ್ಕೆಗೆ ಆಸಿಸ್ ಬೌಲಿಂಗ್ ಲೆಜೆಂಡ್ ಶೇನ್ ವಾರ್ನ್ ಕಿಡಿಕಾರಿದ್ದಾರೆ.
ಸಿಡ್ನಿ: ಟೀಂ ಇಂಡಿಯಾ ವಿರುದ್ಧದ ಮುಂಬರುವ ಏಕದಿನ ಸರಣಿಗೆ ಕ್ರಿಕೆಟ್ ಆಸ್ಟ್ರೇಲಿಯಾ 14 ಮಂದಿ ಆಟಗಾರರ ತಂಡ ಪ್ರಕಟಿಸಿದ್ದು, ಈ ಆಯ್ಕೆಗೆ ಆಸಿಸ್ ಬೌಲಿಂಗ್ ಲೆಜೆಂಡ್ ಶೇನ್ ವಾರ್ನ್ ಕಿಡಿಕಾರಿದ್ದಾರೆ.
ಇದೇ ಜನವರಿ 8 ರಿಂದ ಆರಂಭವಾಗಲಿರುವ ಭಾರತ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಗೆ ಕ್ರಿಕೆಟ್ ಆಸ್ಟ್ರೇಲಿಯಾ ಆಯ್ಕೆ ಮಾಡಿರುವ ತಂಡ ಹಾಸ್ಯಾಸ್ಪದವಾಗಿದೆ ಎಂದು ಆಸ್ಟ್ರೇಲಿಯಾ ತಂಡದ ಮಾಜಿ ಲೆಗ್ ಸ್ಪಿನ್ ಲೆಜೆಂಡ್ ಶೇನ್ ವಾರ್ನ್ ಹೇಳಿದ್ದಾರೆ. 14 ಸದಸ್ಯರ ಪರಿಸ್ಕೃತ ತಂಡ ಪ್ರಕಟಿಸಿರುವ ಆಸ್ಟ್ರೇಲಿಯಾ ಕ್ರಿಕೆಟ್ ಬೋರ್ಡ್, ಪೀಟರ್ ಸಿಡ್ಲೇ, ಉಸ್ಮಾನ್ ಖ್ವಾಜಾ ಮತ್ತು ನೇಥನ್ ಲಿಯಾನ್ ಗೆ ಚಾನ್ಸ್ ನೀಡಿತ್ತು. ಈ ಬಗ್ಗೆ ಟ್ವೀಟ್ ಮೂಲಕ ಅಸಮಾಧಾನ ವ್ಯಕ್ತಪಡಿಸಿರುವ ಶೇನ್ ವಾರ್ನ್, ಕ್ರಿಕೆಟ್ ಆಸ್ಟ್ರೇಲಿಯಾ ಸೆಲೆಕ್ಷನ್ ಕಂಡು ಚಕಿತನಾದೆ. ಈ ಆಯ್ಕೆಯಲ್ಲಿ ಯಾವುದೇ ಅರ್ಥವಿಲ್ಲ. ಇದೊಂದು ಹಾಸ್ಯಾಸ್ಪದ ಆಯ್ಕೆ ಎಂದು ಟೀಕಿಸಿದ್ದಾರೆ.
ಇದೇ ವೇಳೆ ವಾರ್ನ್ 11 ಜನರ ತಂಡ ಹೀಗಿರಬೇಕು. ಇದಾಗಿದ್ದರೆ ಚೆನ್ನ ಎಂದು ಲಿಸ್ಟ್ ಅನ್ನು ಟ್ವಿಟ್ಟರ್ನಲ್ಲಿ ಹಾಕಿಕೊಂಡಿದ್ದಾರೆ.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.