ಸಿಡ್ನಿ: ಆಸ್ಟ್ರೇಲಿಯಾ ವಿರುದ್ದದ 4ನೇ ಟೆಸ್ಟ್ ಪಂದ್ಯದ 5ನೇ ದಿನದಾಟವೂ ಮಳೆಯ ಕಾಟ ಮುಂದುವರೆದಿದ್ದು, ಬೆಳಗ್ಗೆಯಿಂದಲೇ ಸುರಿಯುತ್ತಿರುವ ಮಳೆಯಿಂದಾಗಿ ಇಂದು ಪಂದ್ಯ ಒಂದೇ ಒಂದು ಎಸೆತವನ್ನೂ ಕಂಡಿಲ್ಲ.
ಮಳೆಯ ಕಾರಣ ಮತ್ತು ಮಂದ ಬೆಳಕಿನಿಂದಾಗಿ ಇಂದು ಭೋಜನ ವಿರಾಮವಾದರೂ ಆಟ ಆರಂಭವಾಗಿಲ್ಲ. ಹೀಗಾಗಿ ನಾಲ್ಕನೇ ಪಂದ್ಯ ನೀರಸ ಡ್ರಾದತ್ತಾ ಸಾಗಿದೆ. ಆದರೆ ಮಳೆ ಬಿಡುವು ನೀಡಿ ಪಂದ್ಯ ಆರಂಭಕ್ಕೆ ಅನುವು ಮಾಡಿಕೊಟ್ಟರೆ ಮತ್ತು ಸಿಕ್ಕ ಅಲ್ಪಾವಕಾಶದಲ್ಲೇ ಭಾರತ ತಂಡ ಆಸಿಸ್ ನ ಎಲ್ಲ 10 ವಿಕೆಟ್ ಕಬಳಿಸಿದರೆ ಖಂಡಿತಾ ಭಾರತ ಈ ಪಂದ್ಯವನ್ನು ಗೆಲ್ಲಲಿದೆ.
ಈ ಹಿಂದೆ ಆಫ್ಘಾನಿಸ್ತಾನ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ಕೇವಲ ಒಂದೇ ಸೆಷನ್ ನಲ್ಲಿ ಆಫ್ಘನ್ ನ ಎಲ್ಲ 10 ಬ್ಯಾಟ್ಸಮನ್ ಗಳನ್ನೂ ಔಟ್ ಮಾಡಿತ್ತು. ಇಂತಹುದೇ ಮ್ಯಾಜಿಕ್ ಸಿಡ್ನಿಯ ಎಸ್ ಸಿಜಿ ಕ್ರೀಡಾಂಗಣದಲ್ಲೂ ಆದರೂ ಅಚ್ಚರಿ ಇಲ್ಲ. ಆಗ ಸರಣಿಯನ್ನು ಭಾರತ 3-1 ಅಂತರದಲ್ಲಿ ತನ್ನದಾಗಿಸಿಕೊಂಡು ಐತಿಹಾಸಿಕ ದಾಖಲೆ ನಿರ್ಮಾಣ ಮಾಡಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics