ಸಿಡ್ನಿ: ಎಸ್ ಸಿಜಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ನಾಲ್ಕನೇ ಮತ್ತು ಅಂತಿಮ ಟೆಸ್ಟ್ ಪಂದ್ಯ ಮಳೆಯ ಕಾಟಕ್ಕೆ ಬಲಿಯಾಗಿ ನೀರಸ ಡ್ರಾದಲ್ಲಿ ಅಂತ್ಯವಾಗಿದೆ. ಆ ಮೂಲಕ ಸರಣಿಯನ್ನು ಭಾರತ ತಂಡ 2-1 ಅಂತರಲ್ಲಿ ತನ್ನ ಕೈವಶ ಮಾಡಿಕೊಂಡಿದೆ.
ಪಂದ್ಯದ ನಾಲ್ಕನೇ ದಿನದಿಂದ ಆರಂಭವಾದ ಮಳೆ ಐದನೇ ದಿನವೂ ಮುಂದುವರೆದಿತ್ತು. ಈ ಹಿನ್ನಲೆಯಲ್ಲಿ ಇಂದು ಭೋಜನ ವಿರಾಮದ ಬಳಿಕ ಪರಿಶೀಲಿಸಿದ ಅಂಪೈರ್ ಗಳು ಪಂದ್ಯವನ್ನು ಡ್ರಾ ಎಂದು ಘೋಷಣೆ ಮಾಡಿದರು. ಆ ಮೂಲಕ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯನ್ನು ಭಾರತ ತಂಡ 2-1ರಲ್ಲಿ ತನ್ನ ಕೈವಶ ಮಾಡಿಕೊಂಡಿದೆ.
ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ ತಂಡ ಪೂಜಾರ ಮತ್ತು ರಿಷಬ್ ಪಂತ್ ಶತಕದ ನೆರವಿನಿಂದ 7 ವಿಕೆಟ್ ನಷ್ಟಕ್ಕೆ 622 ರನ್ ಗಳಿಸಿತ್ತು. ಇದಕ್ಕೆ ಉತ್ತರವಾಗಿ ಆಸ್ಟ್ರೇಲಿಯಾ ತಂಡ ಮೊಜಲ ಇನ್ನಿಂಗ್ಸ್ ನಲ್ಲಿ ಕೇವಲ 300 ರನ್ ಗಳಿಗೆ ಆಲೌಟ್ ಆಗಿತ್ತು. ಅಲ್ಲದೆ 322 ರನ್ ಗಳ ತೀವ್ರ ಹಿನ್ನಡೆ ಅನುಭವಿಸಿತು. ಅಲ್ಲದೆ ಗಾಯದ ಮೇಲೆ ಬರೆ ಎಂಬಂತೆ ಭಾರತ ತಂಡ ಆಸಿಸ್ ಮೇಲೆ ಫಾಲೋ ಆನ್ ಹೇರಿತು. 322 ರನ್ ಗಳ ಹಿನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್
ಆರಂಭಿಸಿದ ಆಸ್ಟ್ರೇಲಿಯಾ ತಂಡ ನಾಲ್ಕನೇ ದಿನದಾಟದಲ್ಲಿ 6 ರನ್ ಗಳಿಸಿತ್ತು. ಬಳಿಕ ಆರಂಭವಾದ ಮಳೆರಾಯನ ಆರ್ಭಟ 4 ಮತ್ತು 5ನೇ ದಿನದಾಟವನ್ನು ಸಂಪೂರ್ಣವಾಗಿ ನುಂಗಿಹಾಕಿತು.
ಹೀಗಾಗಿ ಪಂದ್ಯ ನೀರಸ ಡ್ರಾದಲ್ಲಿ ಅಂತ್ಯಗೊಂಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics