ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರಿಕೆಟ್

ನಾವೇ ಅಂತ ಬೀಗಬೇಡಿ, ಮುಂದಿದೆ ಮಾರಿಹಬ್ಬ: ಕೀವಿಸ್ ಸರಣಿ ಕುರಿತಂತೆ ಕೊಹ್ಲಿ ಪಡೆಗೆ ಸ್ಕಾಟ್ ಸವಾಲು!

ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿ ಗೆಲ್ಲುವ ಮೂಲಕ ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಪಡೆ ಇತಿಹಾಸ ನಿರ್ಮಿಸಿದ್ದು ಇದರ ಬೆನ್ನಲ್ಲೇ ನ್ಯೂಜಿಲ್ಯಾಂಡ್ ತಂಡದ ಮಾಜಿ ಆಟಗಾರ ಸ್ಕಾಟ್ ಸ್ಟೈರಿಸ್...

ಟೀಂ ಇಂಡಿಯಾ-ಸ್ಕಾಟ್
Vishwanath S
Updated On : 19 Jan 2019, 12:25 pm
ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿ ಗೆಲ್ಲುವ ಮೂಲಕ ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಪಡೆ ಇತಿಹಾಸ ನಿರ್ಮಿಸಿದ್ದು ಇದರ ಬೆನ್ನಲ್ಲೇ ನ್ಯೂಜಿಲ್ಯಾಂಡ್ ತಂಡದ ಮಾಜಿ ಆಟಗಾರ ಸ್ಕಾಟ್ ಸ್ಟೈರಿಸ್ ಭಾರತಕ್ಕೆ ಸವಾಲು ಹಾಕಿದ್ದಾರೆ. 
ಜನವರಿ 23ರಿಂದ ನ್ಯೂಜಿಲ್ಯಾಂಡ್ ವಿರುದ್ಧದ ಏಕದಿನ ಸರಣಿ ಆರಂಭವಾಗಲಿದೆ. ಈ ಮಧ್ಯೆ ಸ್ಕಾಟ್ ಸ್ಟೈರಿಸ್ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿ ಬರೀ ಆರಂಭ ಅಷ್ಟೇ. ಮುಂದಿದೆ ಮಾರಿಹಬ್ಬ ಎಂದು ಟ್ವೀಟ್ ಮಾಡಿ ಸವಾಲೆಸೆದಿದ್ದಾರೆ. 
ಆಸ್ಟ್ರೇಲಿಯಾ ವಿರುದ್ಧ ಸರಣಿ ಗೆಲುವು ಸಾಧಿಸಿದ್ದಕ್ಕೆ ಟೀಂ ಇಂಡಿಯಾಗೆ ಶುಭಾಶಯ ತಿಳಿಸಿರುವ ಸ್ಕಾಟ್ ಆಸ್ಟ್ರೇಲಿಯಾ ವಿರುದ್ಧ ಗೆಲುವು ಬರೀ ಸ್ನಾಕ್ಸ್ ಅಷ್ಟೇ. ಮುಂದಿದೆ ದೊಡ್ಡ ಸವಾಲು ಎಂದು ಟ್ವೀಟಿಸಿದ್ದಾರೆ.

Advertisement

Advertisement

ಆಸ್ಟ್ರೇಲಿಯಾ ವಿರುದ್ಧ 2-1 ಅಂತರದಿಂದ ಏಕದಿನ ಸರಣಿ ಗೆಲ್ಲುವ ಮೂಲಕ ಭಾರತ ಇತಿಹಾಸ ನಿರ್ಮಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement