ಕಿವೀಸ್ ವಿರುದ್ಧ ಭರ್ಜರಿ ಗೆಲುವಿನ ನಂತರ ಮೈದಾನದಲ್ಲಿ ಕೊಹ್ಲಿ, ಧೋನಿ ಮಕ್ಕಳಾಟ, ವಿಡಿಯೋ ವೈರಲ್!
ನ್ಯೂಜಿಲ್ಯಾಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಭರ್ಜರಿ ಜಯ ಗಳಿಸಿದ್ದು ಪಂದ್ಯ ಸಂಭ್ರಮಾಚರಣೆಯನ್ನು ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಹಾಗೂ ಎಂಎಸ್ ಧೋನಿ...
ನೇಪಿಯರ್: ನ್ಯೂಜಿಲ್ಯಾಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಭರ್ಜರಿ ಜಯ ಗಳಿಸಿದ್ದು ಪಂದ್ಯ ಸಂಭ್ರಮಾಚರಣೆಯನ್ನು ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಹಾಗೂ ಎಂಎಸ್ ಧೋನಿ ವಿಶೇಷವಾಗಿ ಆಚರಿಸಿದ್ದಾರೆ.
ನ್ಯೂಜಿಲ್ಯಾಂಡ್ ವಿರುದ್ಧ ಭಾರತ 8 ವಿಕೆಟ್ ಗಳ ಭರ್ಜರಿ ಜಯ ಗಳಿಸಿದ್ದು ಐದು ಪಂದ್ಯಗಳ ಏಕದಿನ ಸರಣಿಯಲ್ಲಿ ಭಾರತ 1-0 ಅಂತರದ ಮುನ್ನಡೆ ದಾಖಲಿಸಿದೆ. ಇನ್ನು ಪಂದ್ಯದ ಗೆಲುವಿನ ನಂತರ ಧೋನಿ ಮತ್ತು ಕೊಹ್ಲಿ ವಿಶಿಷ್ಟ ರೀತಿಯಲ್ಲಿ ವಿಜಯೋತ್ಸವ ಆಚರಿಸಿದ್ದರು.
ಪ್ರಶಸ್ತಿ ಸಮಾರಂಭದ ವೇಳೆ ಧೋನಿ ಮತ್ತು ಕೊಹ್ಲಿ ಮೈದಾನದಲ್ಲಿದ್ದ ಸೆಗ್ವೇ ಏರಿ ಮೈದಾನಕ್ಕೆ ಸುತ್ತು ಬಂದರು. ಈ ವೇಳೆ ಕೊಹ್ಲಿ ಡ್ಯಾನ್ಸ್ ಮಾಡುವ ಮೂಲಕ ಸಮತೋಲನವನ್ನು ಪ್ರದರ್ಶಿಸಿದ್ದರು.