ಅಂಬಟಿ ರಾಯುಡು 
ಕ್ರಿಕೆಟ್

ಎಲ್ಲಾ ಮಾದರಿಯ ಕ್ರಿಕೆಟ್ ಗೂ ಅಂಬಟಿ ರಾಯುಡು ನಿವೃತ್ತಿ ಘೋಷಣೆ, ಬಿಸಿಸಿಐಗೆ ಪತ್ರ

ಭಾರತದ ಮಧ್ಯಮ ಕ್ರಮಾಂಕದ ಬ್ಯಾಟ್ಸ್ ಮನ್ ಅಂಬಟಿ ರಾಯುಡು ಐಪಿಎಲ್ ಸೇರಿದಂತೆ ಎಲ್ಲಾ ಮಾದರಿಯ ಕ್ರಿಕೆಟ್ ಗೂ ನಿವೃತ್ತಿ ಘೋಷಿಸಿದ್ದಾರೆ.

ಮುಂಬೈ: ಭಾರತದ ಮಧ್ಯಮ ಕ್ರಮಾಂಕದ ಬ್ಯಾಟ್ಸ್ ಮನ್  ಅಂಬಟಿ ರಾಯುಡು ಐಪಿಎಲ್ ಸೇರಿದಂತೆ ಎಲ್ಲಾ ಮಾದರಿಯ ಕ್ರಿಕೆಟ್ ಗೂ ನಿವೃತ್ತಿ ಘೋಷಿಸಿದ್ದಾರೆ.
ವಿಶ್ವ ಕಪ್ ಕ್ರಿಕೆಟ್ ತಂಡದಲ್ಲಿ ಗಾಯಗೊಂಡ ವಿಜಯ್ ಶಂಕರ್ ಬದಲಿಗೆ ಮಯಾಂಕ್ ಅಗರ್ ವಾಲ್ ಅವರಿಗೆ ಸ್ಥಾನ ನೀಡಿರುವ ಆಯ್ಕೆದಾರರ ಸಮಿತಿ ವಿರುದ್ಧ ರಾಯುಡು ಅಸಮಾಧಾನಗೊಂಡು ಈ ನಿರ್ಧಾರ ಕೈಗೊಂಡಿದ್ದಾರೆ.
ಅಂಬಟಿ ರಾಯುಡು ವಿಶ್ವಕಪ್ ಆಟಗಾರರ ಸ್ಟಾಂಡ್ ಬೈ ಪಟ್ಟಿಯಲ್ಲಿದ್ದರು. ಆದರೆ, ಶಿಖರ್ ಧವನ್ ಹಾಗೂ ವಿಜಯ್ ಶಂಕರ್ ಗಾಯಗೊಂಡ ನಂತರ ರಿಷಬ್ ಪಂತ್ ಹಾಗೂ ಅಗರ್ ವಾಲ್ ಅವರನ್ನು ಬದಲಿ ಆಟಗಾರರಾಗಿ ಆಯ್ಕೆದಾರರು ಆಯ್ಕೆ ಮಾಡಿರುವುದರಿಂದ ಲಂಡನ್ ಗೆ  ಟಿಕೆಟ್ ಪಡೆಯುವಲ್ಲಿ ಅಂಬಟಿ ರಾಯುಡು ವಿಫಲರಾಗಿದ್ದಾರೆ.
ಅಂಬಟಿ ರಾಯುಡು 55 ಏಕದಿನ ಪಂದ್ಯಗಳಲ್ಲಿ ಮೂರು ಶತಕ, 10 ಅರ್ಧಶತಕದೊಂದಿಗೆ 47. 05  ಸರಾಸರಿಯಲ್ಲಿ 1694 ರನ್ ಗಳಿಸಿದ್ದಾರೆ. ಆರು ಟಿ-20 ಪಂದ್ಯಗಳಲ್ಲಿ 42 ರನ್  ಕಲೆಹಾಕಿದ್ದಾರೆ. ಟೆಸ್ಟ್  ಕ್ರಿಕೆಟ್ ನಲ್ಲಿ ಸ್ಥಾನ ಅವಕಾಶ ಪಡೆಯುವಲ್ಲಿ ರಾಯುಡು ವಿಫಲರಾಗಿದ್ದಾರೆ.
2013 ರಲ್ಲಿ ಜಿಂಬಾಬ್ವೆ ವಿರುದ್ಧದ ಏಕದಿನ ಪಂದ್ಯದ ಮೂಲಕ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ ಅಂಬಟಿ ರಾಯುಡು ಈ ವರ್ಷ ರಾಂಚಿಯಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧ ಏಕದಿನ ಪಂದ್ಯದಲ್ಲಿ ಆಡಿದ್ದರು. 
ಏಕದಿನ ಹಾಗೂ ಟಿ-20 ಪಂದ್ಯಗಳಲ್ಲಿ ಗಮನ ನೀಡುವ ನಿಟ್ಟಿನಲ್ಲಿ  ಪ್ರಥಮ ದರ್ಜೆ ಕ್ರಿಕೆಟ್ ಗೆ ಕಳೆದ ವರ್ಷ ರಾಯುಡು ನಿವೃತ್ತಿ ಘೋಷಿಸಿದ್ದರು. 17 ವರ್ಷಗಳ ಪ್ರಥಮ ದರ್ಜೆ ಕ್ರಿಕೆಟ್ ನಲ್ಲಿ 97 ಪಂದ್ಯಗಳಲ್ಲಿ 6151 ರನ್ ಗಳನ್ನು ರಾಯುಡು ಗಳಿಸಿದ್ದಾರೆ.  
ಐಪಿಎಲ್ ಟೂರ್ನಿಯಲ್ಲಿ ಚೆನ್ನೆ ಸೂಪರ್ ಕಿಂಗ್ಸ್ ಪರವಾಗಿ ಉತ್ತಮ ಪ್ರದರ್ಶನ ತೋರಿದ ರಾಯುಡು, ವಿಶ್ವಕಪ್ ನಲ್ಲಿ ಟೀಂ ಇಂಡಿಯಾದ ನಂಬರ್ ನಾಲ್ಕರ ಬ್ಯಾಟ್ಸ್ ಮನ್ ಆಗಿ ಕಾಣಿಸಿಕೊಳ್ಳಬೇಕಿತ್ತು. ಆದಾಗ್ಯೂ, ಸ್ಟಾಂಡ್ ಬೈ ಆಟಗಾರರ ಪಟ್ಟಿಯಲ್ಲಿದ್ದರೂ ಅವಕಾಶ ಪಡೆಯುವಲ್ಲಿ ಅವರು ವಿಫಲರಾಗಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತದಾನದ ಹಕ್ಕನ್ನೇ ಕಸಿದರೆ ಯಾವ ಪಕ್ಷವೂ ಸುರಕ್ಷಿತವಾಗಿರಲ್ಲ': SIR ವಿರುದ್ಧ ದೇಶಾದ್ಯಂತ ಹೋರಾಟಕ್ಕೆ CJP ಕರೆ

ಸ್ಟಿಂಗ್‌ ಆಪರೇಷನ್ ಆರೋಪ: ಶಾಂಗ್ರೀಲಾ ಹೋಟೆಲ್‌ನಲ್ಲಿ ಯಾರ ಜೊತೆ ಕುಳಿತಿದ್ರಿ; ಸಿಎಂ ಶಿವಕುಮಾರ್ ವಿರುದ್ಧ HDK ಹೊಸ ಬಾಂಬ್

3rd T20I: ಆಲೌಟ್ ನಲ್ಲೂ ವಿಚಿತ್ರ ದಾಖಲೆ ಬರೆದ ಟೀಂ ಇಂಡಿಯಾ!

"ಜಗತ್ತಿಗೆ ಅಗತ್ಯವಿರುವ ಪರಿಹಾರಗಳು ನಿಮ್ಮಲ್ಲಿವೆ": ಚೆನ್ನೈನಲ್ಲಿ 'Gen Z ಯನ್ನುದ್ದೇಶಿಸಿ ಪ್ರಧಾನಿ ಮೋದಿ ಮಾತು

3rd T20I: ಅಭಿಷೇಕ್ ಶರ್ಮಾ ಭರ್ಜರಿ ಬ್ಯಾಟಿಂಗ್, ವಿಂಡೀಸ್ ಗೆ ಗೆಲ್ಲಲು 224 ರನ್ ಗುರಿ ನೀಡಿದ ಭಾರತ