ಊವರ್ಶಿ ರೌಟೇಲಾ, ಹಾರ್ದಿಕ್ ಪಾಂಡ್ಯ 
ಕ್ರಿಕೆಟ್

ವಿಶ್ವಕಪ್ ಟೂರ್ನಿ ವೇಳೆ ಆ ಒಂದು ಕೆಲಸಕ್ಕಾಗಿ ಹಾರ್ದಿಕ್‌ಗೆ ಹಿಂದೆ ಬಿದ್ದಿದ್ರಾ ಊರ್ವಶಿ, ಐರಾವತನ ರಾಣಿ ಕೊಟ್ಟ ಸ್ಪಷ್ಟನೆ ಏನು?

ವಿಶ್ವಕಪ್ ಟೂರ್ನಿ ವೇಳೆ ಟೀಂ ಇಂಡಿಯಾದ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯಗೆ ಬಾಲಿವುಡ್ ನಟಿ ಊರ್ವಶಿ ರೌಟೇಲಾ ಬೇಡಿಕೆಯೊಂದಿಟ್ಟಿದ್ದರು ಎಂಬ ಚರ್ಚೆ ಸಾಮಾಜಿಕ...

ಮುಂಬೈ: ವಿಶ್ವಕಪ್ ಟೂರ್ನಿ ವೇಳೆ ಟೀಂ ಇಂಡಿಯಾದ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯಗೆ ಬಾಲಿವುಡ್ ನಟಿ ಊರ್ವಶಿ ರೌಟೇಲಾ ಬೇಡಿಕೆಯೊಂದಿಟ್ಟಿದ್ದರು ಎಂಬ ಚರ್ಚೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಇದಕ್ಕೆ ಸ್ವತಃ ನಟಿ ಸ್ಪಷ್ಟನೆ ನೀಡಿದ್ದಾರೆ.
ಟೂರ್ನಿಯಲ್ಲಿ ಪಾಕ್ ವಿರುದ್ಧದ ಪಂದ್ಯ ವೀಕ್ಷಣೆಗಾಗಿ ಊರ್ವಶಿ ಹಾರ್ದಿಕ್ ಪಾಂಡ್ಯಗೆ ಎರಡು ಟಿಕೆಟ್ ಕೊಡಿಸುವಂತೆ ಮನವಿ ಮಾಡಿದ್ದರು ಎಂಬ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. 
ಇದಕ್ಕೆ ಸಂಬಂಧಿಸಿದಂತೆ ಇನ್ ಸ್ಟಾಗ್ರಾಮ್ ನಲ್ಲಿ ಸ್ಟೇಟಸ್ ಅಪ್ ಡೇಟ್ ಮಾಡಿರುವ ಊರ್ವಶಿ ಇಂತ ಸುಳ್ಳು ಸುದ್ದಿಗಳನ್ನು ಹಬ್ಬಿಸಬೇಡಿ. ನಾನು ನನ್ನ ಕುಟುಂಬಕ್ಕೆ ಉತ್ತರ ನೀಡಬೇಕು. ಇದರಿಂದ ನನಗೆ ಸಮಸ್ಯೆಯಾಗುತ್ತದೆ ಎಂದು ಮನವಿ ಮಾಡಿದ್ದಾರೆ.
ವಿಶ್ವಕಪ್ ಟೂರ್ನಿ ವೇಳೆ ನಾನು ಶೂಟಿಂಗ್ ಸಂಬಂಧ ಲಂಡನ್ ಗೆ ತೆರಳಿದ್ದೆ. ಆದರೆ ಪಾಕ್ ಮತ್ತು ಟೀಂ ಇಂಡಿಯಾ ಪಂದ್ಯ ಮ್ಯಾಂಚೆಸ್ಟರ್ ನಲ್ಲಿತ್ತು. ಲಂಡನ್ ನಿಂದ ಮ್ಯಾಂಚೆಸ್ಟರ್ ಗೆ ಬಹಳ ದೂರವಿದೆ. ನನ್ನು ಮಾಜಿ ಪಿಆರ್ ಹೇಳುವ ವಿಷಯವನ್ನು ನಂಬಬೇಡಿ ಎಂದು ಹೇಳಿದ್ದಾರೆ. 

ವಿಡಿಯೋದಲ್ಲಿ ಊರ್ವಶಿ ಅವರು ತನ್ನ ತಾಯಿ ಜೊತೆ ಪಂದ್ಯ ವೀಕ್ಷಿಸಲು ಹಾರ್ದಿಕ್ ಪಾಂಡ್ಯಗೆ ಎರಡು ಪಾಸ್ ನೀಡುವಂತೆ ಮೆಸೇಜ್ ಮಾಡಿದ್ದರಂತೆ. ಅಭ್ಯಾಸದಲ್ಲಿ ತೊಡಗಿದ್ದರಿಂದ ಹಾರ್ದಿಕ್ ಈ ಮೆಸೇಜ್ ಅನ್ನು ನೋಡಿರಲಿಲ್ಲ ಎಂದು ಹೇಳಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಇಂಧನ ಸ್ಥಾವರಗಳ ಮೇಲಿನ ದಾಳಿಯನ್ನು ನಿಲ್ಲಿಸಲು ರಷ್ಯಾ-ಉಕ್ರೇನ್ ಒಪ್ಪಿಕೊಂಡಿವೆ: ಟ್ರಂಪ್ ಘೋಷಣೆ

ಕೊನೆಯ ಓವರ್‌ನಲ್ಲಿ ಭಾರತಕ್ಕೆ ವಿಂಡೀಸ್ ವಿರುದ್ಧ ರೋಚಕ ಜಯ: T20 ಸರಣಿಯಲ್ಲಿ 2-1 ಮುನ್ನಡೆ!

'We're Sorry': ಅಭಿಜಿತ್ ದೀಪ್ಕೆಗೆ ಅಜ್ಜಿಯ ಸಾವಿನ ಬಗ್ಗೆ ತಿಳಿಸಿದ್ದ ಮಹಿಳಾ ಪೊಲೀಸ್; ಹೇಗಿತ್ತು CJP ನಾಯಕನ ಪ್ರತಿಕ್ರಿಯೆ...: ವಿಡಿಯೋ ವೈರಲ್!

'ಮತದಾನದ ಹಕ್ಕನ್ನೇ ಕಸಿದರೆ ಯಾವ ಪಕ್ಷವೂ ಸುರಕ್ಷಿತವಾಗಿರಲ್ಲ': SIR ವಿರುದ್ಧ ದೇಶಾದ್ಯಂತ ಹೋರಾಟಕ್ಕೆ CJP ಕರೆ

ಸ್ಟಿಂಗ್‌ ಆಪರೇಷನ್ ಆರೋಪ: ಶಾಂಗ್ರೀಲಾ ಹೋಟೆಲ್‌ನಲ್ಲಿ ಯಾರ ಜೊತೆ ಕುಳಿತಿದ್ರಿ; ಸಿಎಂ ಶಿವಕುಮಾರ್ ವಿರುದ್ಧ HDK ಹೊಸ ಬಾಂಬ್