ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರಿಕೆಟ್

ಟೀಂ ಇಂಡಿಯಾದಲ್ಲಿ 'ಜಡೆ ಜಗಳ'ವಿಲ್ಲ: ಶಾಸ್ತ್ರಿ

ಭಾರತ ತಂಡದ ಆಟಗಾರರು ಮತ್ತು ಅವರ ಪತ್ನಿಯರ ನಡುವೆ ಯಾವುದೇ ರೀತಿಯ ಭಿನ್ನಾಭಿಪ್ರಾಯಗಳಿಲ್ಲ. ಅವೆಲ್ಲವೂ ಕೇವಲ ಮಾಧ್ಯಮಗಳ ಕಲ್ಪಿತ ಕಥೆಗಳು ಎಂದು ಟೀಂ ಇಂಡಿಯಾ ಪ್ರಧಾನ ಕೋಚ್ ರವಿಶಾಸ್ತ್ರಿ ಹೇಳಿದ್ದಾರೆ.

ಸಂಗ್ರಹ ಚಿತ್ರ
Srinivasa Murthy VN
Updated On : 30 Jul 2019, 11:45 am
ನವದೆಹಲಿ: ಭಾರತ ತಂಡದ ಆಟಗಾರರು ಮತ್ತು ಅವರ ಪತ್ನಿಯರ ನಡುವೆ ಯಾವುದೇ ರೀತಿಯ ಭಿನ್ನಾಭಿಪ್ರಾಯಗಳಿಲ್ಲ. ಅವೆಲ್ಲವೂ ಕೇವಲ ಮಾಧ್ಯಮಗಳ ಕಲ್ಪಿತ ಕಥೆಗಳು ಎಂದು ಟೀಂ ಇಂಡಿಯಾ ಪ್ರಧಾನ ಕೋಚ್ ರವಿಶಾಸ್ತ್ರಿ ಹೇಳಿದ್ದಾರೆ.
ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಅಣಿಯಾಗುತ್ತಿರುವ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಜೊತೆ ನಿನ್ನೆ ಜಂಟಿ ಸುದ್ದಿಗೋಷ್ಠಿ ನಡೆಸಿದ ರವಿಶಾಸ್ತ್ರಿ, ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರ ಪತ್ನಿಯರ ನಡುವೆ ಉತ್ತಮ ಬಾಂಧವ್ಯವಿದೆ. ಅವರ ನಡುವೆ ಯಾವುದೇ ರೀತಿಯ ಮನಸ್ಥಾಪ ಇಲ್ಲ ಎಂದು ಹೇಳಿದರು.
ಅಂತೆಯೇ ಅನುಷ್ಕಾರ ಶರ್ಮಾ ಮತ್ತು ರೋಹಿತ್ ಪತ್ಮಿ ರಿತಿಕಾ ಉತ್ತಮ ಸ್ನೇಹಿತರಾಗಿದ್ದು ಅವರ ನಡುವೆ ಯಾವುದೇ ರೀತಿಯ ಭಿನ್ನಾಭಿಪ್ರಾಯಗಳಿಲ್ಲ. ಇವೆಲ್ಲವೂ ಮಾಧ್ಯಮಗಳ ಸೃಷ್ಟಿ ಎಂದು ಶಾಸ್ತ್ರಿ ಕಿಡಿಕಾರಿದ್ದಾರೆ. 

Advertisement

Advertisement

ಇದೇ ವಿಚಾರವಾಗಿ ಮಾತನಾಡಿದ್ದ ಕೊಹ್ಲಿ, ರೋಹಿತ್ ಶರ್ಮಾ  ಜೊತೆಗೆ ಯಾವುದೇ ಭಿನ್ನಾಭಿಪ್ರಾಯವಿಲ್ಲ, ಆದಾಗ್ಯೂ, ಇಂತಹ ವರದಿಗಳು ಗೊಂದಲವನ್ನುಂಟು ಮಾಡುವ ಸುಳ್ಳುಗಳು ಹಾಗೂ ಹಾಸ್ಯಾಸ್ಪದ ಎಂದು ಅವರು ಹೇಳಿದ್ದಾರೆ. ರೋಹಿತ್ ಜೊತೆಗೆ ಸಂಬಂಧ ಉತ್ತಮವಾಗಿದೆ. ನಮ್ಮಿಬ್ಬರ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಹಿಂದಿನ ಕೆಲ ದಿನಗಳಲ್ಲಿ ಅನೇಕ ವಿಚಾರಗಳ ಬಗ್ಗೆ ಕೇಳಿದ್ದೇನೆ. ಆದರೆ, ಟೀಂ ನಲ್ಲಿ ಸಂಬಂಧ ಸರಿಯಿಲ್ಲದಿದ್ದರೆ , ಚೆನ್ನಾಗಿ ಪ್ರದರ್ಶನ ನೀಡಲು ಸಾಧ್ಯವಿಲ್ಲ ಎಂದು ಕೊಹ್ಲಿ ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement