ವಿಶ್ವಕಪ್: ಬಾಂಗ್ಲಾ ವಿರುದ್ಧ ಸೋತ 'ಚೋಕರ್ಸ್' ದಕ್ಷಿಣ ಆಫ್ರಿಕಾ
ಚೋಕರ್ಸ್ ಹಣೆ ಪಟ್ಟಿ ಹೊಂದಿರುವ ದಕ್ಷಿಣ ಆಫ್ರಿಕಾ ತಂಡ ಪ್ರಸ್ತುತ ವಿಶ್ವಕಪ್ ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತದೆ ಎಂದು ಭಾವಿಸಲಾಗಿತ್ತು. ಆದರೆ ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಸೋಲು...
ಲಂಡನ್: ಚೋಕರ್ಸ್ ಹಣೆ ಪಟ್ಟಿ ಹೊಂದಿರುವ ದಕ್ಷಿಣ ಆಫ್ರಿಕಾ ತಂಡ ಪ್ರಸ್ತುತ ವಿಶ್ವಕಪ್ ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತದೆ ಎಂದು ಭಾವಿಸಲಾಗಿತ್ತು. ಆದರೆ ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಸೋಲು ಕಂಡಿದ್ದ ದಕ್ಷಿಣ ಆಫ್ರಿಕಾ ಎರಡನೇ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಸೋಲು ಕಂಡಿದೆ.
ದಕ್ಷಿಣ ಆಫ್ರಿಕಾದಲ್ಲಿ ಒಳ್ಳೆಯ ಬ್ಯಾಟಿಂಗ್ ಮತ್ತು ಬೌಲಿಂಗ್ ಲೈನ್ ಅಪ್ ಇದ್ದರೂ ಬಾಂಗ್ಲಾದೇಶದ ವಿರುದ್ಧ 21 ರನ್ ಗಳಿಂದ ಸೋಲು ಕಂಡಿದೆ.
ಲಂಡನ್ ನಲ್ಲಿ ನಡೆದ ಪಂದ್ಯದಲ್ಲಿ ಮೊದಲ ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ ತಂಡ ನಿಗದಿತ ಓವರ್ ನಲ್ಲಿ 6 ವಿಕೆಟ್ ನಷ್ಟಕ್ಕೆ 330 ರನ್ ಪೇರಿಸಿತ್ತು. 331 ರನ್ ಗಳ ಬೃಹತ್ ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ತಂಡ ನಿಗದಿತ ಓವರ್ ನಲ್ಲಿ 8 ವಿಕೆಟ್ ನಷ್ಟಕ್ಕೆ 309 ರನ್ ಮಾತ್ರ ಬಾರಿಸಲು ಶಕ್ತವಾಯಿತು.
ಬಾಂಗ್ಲಾ ಪರ ಶಕಿಬ್ ಅಲ್ ಹಸನ್ 75 ಹಾಗೂ ರಹೀಂ 78 ರನ್ ಗಳ ಬ್ಯಾಟಿಂಗ್ ನೆರವಿನಿಂದ ತಂಡ 330 ರನ್ ಪೇರಿಸಲು ಶಕ್ತವಾಯಿತು. ಇನ್ನುಳಿದಂತೆ ಸೌಮ್ಯ ಸರ್ಕಾರ್ 42, ಮೊಹಮುದುಲ್ಲಾ ಅಜೇಯ 46 ರನ್ ಬಾರಿಸಿದ್ದಾರೆ.
ದಕ್ಷಿಣ ಆಫ್ರಿಕಾ ಪರ ಡಿ ಕಾಕ್ 23, ಮಾರ್ಕ್ ರಾಮ್ 45, ಡುಪ್ಲೇಸಿಸ್ 62, ಮಿಲ್ಲರ್ 38, ದುಸೇನ್ 41, ಡುಮಿನಿ 45 ರನ್ ಪೇರಿಸಿದ್ದಾರೆ.
ಬಾಂಗ್ಲಾ ಪರ ಮುಸ್ತಾಫಿಝೂರ್ ರೆಹಮಾನ್ 3, ಸೈಫುದೀನ್ 2, ಹಸನ್ ಮತ್ತು ಮಿರಾಜ್ ತಲಾ 1 ವಿಕೆಟ್ ಪಡೆದಿದ್ದಾರೆ.