ನವದೆಹಲಿ: ಪಾಕಿಸ್ತಾನದ ಸೊಸೆ, ಭಾರತದ ಖ್ಯಾತ ಟೆನಿಸ್ ತಾರೆ ಸಾನಿಯಾ ಮಿರ್ಜಾ ಅವರು ಪಾಕಿಸ್ತಾನದ ಕ್ರಿಕೆಟ್ ಜಾಹಿರಾತುವಿನಲ್ಲಿ ಭಾರತದ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ರನ್ನು ಎಳೆದುತಂದು ಅಪಮಾನ ಮಾಡಿರುವುದಕ್ಕೆ ಸಿಡಿದೆದಿದ್ದಾರೆ.
ಅಭಿನಂಧನ್ ಅವರನ್ನು ಮುಂದಿಟ್ಟು ಭಾರತದ ಕಾಲೆಳೆದಿದ್ದಕ್ಕೆ ಸಾನಿಯಾ ರೊಚ್ಚಿಗೆದಿದ್ದು ಎರಡು ಕಡೆ ಅವಮಾನಕರ ವಿಷಯದೊಂದಿಗೆ ಜಾಹಿರಾತು ತಯಾರಾಗಿದೆ. ಸ್ವಲ್ಪ ಗಂಭೀರವಾಗಿ ನಡೆದುಕೊಳ್ಳಿ. ಈ ಪಂದ್ಯಕ್ಕೆ ಪ್ರಚಾರ ನೀಡುವ ಯಾವುದೇ ಅವಶ್ಯಕತೆ ಇಲ್ಲ. ಈಗಾಗಲೇ ಈ ಪಂದ್ಯಕ್ಕೆ ಪ್ರಚಾರ ಸಿಕ್ಕಿದೆ. ಇದು ಕೇವಲ ಕ್ರಿಕೆಟ್ ಪಂದ್ಯ ಎಂದು ಟ್ವೀಟ್ ಮಾಡಿದ್ದಾರೆ.
ಅಭಿನಂದನ್ ರನ್ನು ಹೋಲುವ ವ್ಯಕ್ತಿಯನ್ನು ತೋರಿಸಿರುವ ಪಾಕಿಸ್ತಾನ ಮಾಧ್ಯಮ, ತಂಡ ಆಡುವ 11ರ ಬಳಗದ ಬಗ್ಗೆ ಪ್ರಶ್ನೆ ಮಾಡಿತ್ತು. ಈ ವೇಳೆ ಟೀ ಕುಡಿಯುತ್ತ ಆತ ಅಭಿನಂದನ್ ಅವರು ಹೇಳಿದಂತೆ ಮಾಹಿತಿ ನೀಡಲು ನಿರಾಕರಿಸಿದ್ದರು. ಅಂತಿಮವಾಗಿ ಆತನ್ನು ಕಳುಹಿಸಲು ಒಪ್ಪಿ ತೆರಳಲು ಸೂಚಿಸುತ್ತದೆ. ಆದರೆ ಈ ವೇಳೆ ಕಪ್ ವಾಪಸ್ ನೀಡುವಂತೆ ಹೇಳಿ ಕಾಲೆಳೆಯುವ ಪ್ರಯತ್ನ ನಡೆಸಿತ್ತು.
ವಿಶ್ವಕಪ್ ಟೂರ್ನಿಯಲ್ಲಿ ಜೂನ್ 16ರಂದು ಟೀಂ ಇಂಡಿಯಾ-ಪಾಕಿಸ್ತಾನ ನಡುವೆ ಪಂದ್ಯ ನಡೆಯಲಿದ್ದು ಈ ಪಂದ್ಯ ಸದ್ಯ ವಿಶ್ವದ ಗಮನ ಸೆಳೆದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics