ಕ್ರಿಕೆಟ್

ಮಾಲಿಂಗ ಮ್ಯಾಜಿಕ್, ತವರಿನಲ್ಲೇ ಆಂಗ್ಲರನ್ನು ಬಗ್ಗುಬಡಿದ ಲಂಕಾಗೆ 20 ರನ್ ರೋಚಕ ಜಯ

Raghavendra Adiga
ಲೀಡ್ಸ್: ಐಸಿಸಿ ವಿಶ್ವಕಪ್ ಶುಕ್ರವಾರದ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಶ್ರೀಲಂಕಾ 20 ರನ್ ರೋಚಕ ಜಯ ಸಾಧಿಸಿದೆ. ಈ ಮೂಲಕ ತವರಿನಲ್ಲೇ ಆಂಗ್ಲರನ್ನು ಬಗ್ಗುಬಡಿದಿರುವ ಸಿಂಹಳೀಯ ಪಡೆ ಕ್ರಿಕೆಟ್ ಪ್ರೇಮಿಗಳ ಲೆಕ್ಕಾಚಾರವನ್ನೇ ಬುಡಮೇಲು ಮಾಡಿದೆ.
ಟಾಸ್ ಗೆದ್ದು ಬ್ಯಾಟಿಂಗ್ ನಡೆಸಿದ ಲಂಕಾ ಪಡೆ ಏಂಜೆಲೋ ಮ್ಯಾಥ್ಯೂಸ್(85*) ಅದ್ಭುತ ಪ್ರದರ್ಶನದ ನೆರವಿನಿಂದ ನಿಗದಿತ ಓವರ್ ಗಳಲ್ಲಿ ಆಂಗ್ಲರಿಗೆ ಗೆಲ್ಲಲು 232 ರನ್ ಗುರಿ ಒಡ್ಡಿತ್ತು.
ಸಿಂಹಳೀಯರು ಒಡ್ಡಿದ ಗುರಿ ಬೆನ್ನತ್ತಿದ ಪ್ರಾರಂಬದಲ್ಲೇ ಎಡವಿತ್ತು. ಜಾನಿ ಬೈರ್‌ಸ್ಟೋವ್ (0) ಹಾಗೂ ಜೇಮ್ಸ್ ವಿನ್ಸ್ (14) ಗಳಿಸಿ ಔಟಾಗಿದ್ದರೆ ನಾಯಕ ಇಯಾನ್ ಮಾರ್ಗನ್ 21 ರನ್ ಗಳಿಸಿ ಪೆವಿಲಿಯನ್ ಸೇರಿದ್ದರು.

ಜೋ ರೂಟ್ (57 ) ಅರ್ಧಶತಕ ಗಳಿಸಿದ್ದರೂ ಹೆಚ್ಚು ಹೊತ್ತು ಕ್ರೀಸ್ ನಲ್ಲಿರಲು ಸಾಧ್ಯವಾಗಲಿಲ್ಲ. ಅದರ ಬೆನ್ನಲ್ಲೇ ಜೋಸ್ ಬಟ್ಲರ್‌ರನ್ನು (10) ಕೂಡಾ ಔಟಾಗಿ ತವರಿನಲ್ಲೇ ಆಂಗ್ಲ ಪಡೆಗೆ ಆಘಾತದ ಮೇಲೆ ಆಘಾತಗಳು ಉಂಟಾಗಿದ್ದವು,

ಇನ್ನು ಮೊಯಿನ್ ಅಲಿ (16) ಸ್ಟೋಕ್ಸ್ (82), ಕ್ರಿಸ್ ವೋಕ್ಸ್ (2), ಆದಿಲ್ ರಶೀದ್ (1), ಜೋಫ್ರಾ ಆರ್ಚರ್ (3)  ರನ್ ಗಳಿಸಿ ಪೆವಿಲಿಯನ್ ಗೆ ಮರಳಿದ್ದರು. 

ಇತ್ತ ಲಂಕಾ ಪರ ಲಸಿತ್ ಮಾಲಿಂಗ 4 ಧನಂಜಯ ಡಿಸಿಲ್ವ 3 ಇಸುರು ಉದಾನ ಎರಡು ವಿಕೆಟ್ ಪಡೆದು ಲಂಕಾಪಡೆ ಗೆಲುವಿನ ಕೇಕೆ ಹಾಕುವಂತೆ ಮಾಡಿದ್ದರು.

ಈ ಜಯದೊಡನೆ ಲಂಕಾ ತಾನಾಡಿದ್ದ ಆರು ಪಂದ್ಯದ ಪೈಕಿ ಎರಡು ಜಯ, ಎರಡು ಡ್ರಾ ಸಾಧಿಸಿ ಆರು ಅಂಕಗಳೊಡನೆ ಸೆಮೀಸ್ ಪ್ರವೇಶದ ಕನಸನ್ನು ಜೀವಂತವಾಗಿರಿಸಿಕೊಂಡಿದೆ.

ಇನ್ನು ಸರಣಿ ಪ್ರಾರಂಭದಿಂದ ಸೋಲಿನ ರುಚಿ ನೋಡಿರದಿದ್ದ ಆಂಗ್ಲ ಪಡೆಗೆ ಇಂದು ಮೊದಲ ಕಹಿ ಅನುಭವವಾಗಿದೆ.
SCROLL FOR NEXT