ಕ್ರಿಕೆಟ್

ಟಿ-20 ಶ್ರೇಯಾಂಕ : ಕನ್ನಡಿಗ ಕೆಎಲ್ ರಾಹುಲ್ 6ನೇ ಸ್ಥಾನ,ಅಪ್ಘಾನಿಸ್ತಾನದ ಹಜರತ್ತುಲ್ಲಾ 7ನೇ ಸ್ಥಾನಕ್ಕೆ ಜಿಗಿತ

Nagaraja AB
ದುಬೈ: ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಟಿ-20 ಅಂತಾರಾಷ್ಟ್ರೀಯ ಆಟಗಾರರ ಶ್ರೇಯಾಂಕಿತರ ಪಟ್ಟಿಯನ್ನು ಪ್ರಕಟಿಸಿದೆ.
ಕನ್ನಡಿಗ ಟೀಂ ಇಂಡಿಯಾ ಆಟಗಾರ ಕೆಎಲ್ ರಾಹುಲ್ ಟಾಪ್ 10 ಬ್ಯಾಟ್ಸ್ ಮನ್ ಗಳ ಪೈಕಿಯಲ್ಲಿ ಆರನೇ ಸ್ಥಾನ ಪಡೆದುಕೊಂಡಿದ್ದಾರೆ.ಅಪ್ಘಾನಿಸ್ತಾನದ ಹಜರುತುಲ್ಲಾ ಝಾಜಾಯಿ 31 ಸ್ಥಾನ ಜಿಗಿತ ಕಂಡಿದ್ದು, 7ನೇ ಸ್ಥಾನದಲ್ಲಿದ್ದಾರೆ.
ಇತ್ತೀಚಿಗೆ ಮುಕ್ತಾಯಗೊಂಡ ಆಸ್ಟ್ರೇಲಿಯಾ ವಿರುದ್ಧದ ಟಿ-20 ಸರಣಿಯಲ್ಲಿ ಕೆ. ಎಲ್. ರಾಹುಲ್  47 ಮತ್ತು 50 ರನ್ ಬಾರಿಸುವ ಮೂಲಕ ಮತ್ತೆ ಕಂ ಬ್ಯಾಕ್ ಆಗಿದ್ದು, 726 ರೇಟಿಂಗ್ ಪಾಯಿಂಟ್ ಗಳೊಂದಿಗೆ  ಆರನೇ ಸ್ಥಾನಕ್ಕೆ ಜಿಗಿತ ಹೊಂದಿದ್ದಾರೆ.
ರೋಹಿತ್ ಶರ್ಮಾ 12, ಶಿಖರ್ ಧವನ್ 15, ನಾಯಕ ವಿರಾಟ್ ಕೊಹ್ಲಿ 17ನೇ ಸ್ಥಾನದಲ್ಲಿದ್ದಾರೆ. ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ 56 ನೇ ಸ್ಥಾನದಲ್ಲಿದ್ದಾರೆ.
SCROLL FOR NEXT