ಧಮ್ ಇದ್ರೆ ಹಿಡಿ: ಅಭಿಮಾನಿಯನ್ನು ಓಡಾಡಿಸಿದ ಎಂಎಸ್ ಧೋನಿ, ವಿಡಿಯೋ ವೈರಲ್!
ಟೀಂ ಇಂಡಿಯಾ ಹಾಗೂ ಆಸ್ಟ್ರೇಲಿಯಾ ನಡುವಿನ ಎರಡನೇ ಏಕದಿನ ಪಂದ್ಯದಲ್ಲಿನ ಘಟನೆಯೊಂದು ಇದೀಗ ಭಾರೀ ವೈರಲ್ ಆಗಿದೆ.
ನಾಗ್ಪುರ: ಟೀಂ ಇಂಡಿಯಾ ಹಾಗೂ ಆಸ್ಟ್ರೇಲಿಯಾ ನಡುವಿನ ಎರಡನೇ ಏಕದಿನ ಪಂದ್ಯದಲ್ಲಿನ ಘಟನೆಯೊಂದು ಇದೀಗ ಭಾರೀ ವೈರಲ್ ಆಗಿದೆ.
ಟೀಂ ಇಂಡಿಯಾ ಮೊದಲು ಬ್ಯಾಟಿಂಗ್ ಮಾಡಿ ನಂತರ ಫೀಲ್ಡಿಂಗ್ ಗೆ ಇಳಿಯುತ್ತಿದ್ದಂತೆ ಕ್ರೀಡಾಂಗಣದೊಳಕ್ಕೆ ನುಗ್ಗಿದ ಅಭಿಮಾನಿಗೆ ಎಂಎಸ್ ಧೋನಿ ಚಮಕ್ ಕೊಟ್ಟಿದ್ದಾರೆ. ಧೋನಿಯನ್ನು ಆಲಂಗಿಸಿ ಅವರ ಪಾದ ಮುಟ್ಟಿ ನಮಸ್ಕರಿಸಲು ಅಭಿಮಾನಿಯೊಬ್ಬ ಹತ್ತಿರಕ್ಕೆ ಬಂದಿದ್ದ. ಈ ವೇಳೆ ಧೋನಿ ಅಭಿಮಾನಿಗೆ ಸಿಗದೆ ಆಟಾಡಿಸಿದ್ದಾರೆ.
ಧೋನಿ ವೇಗವಾಗಿ ಮೈದಾನದಲ್ಲಿ ಓಡಿದ್ದಾರೆ. ಧೋನಿಯನ್ನು ಹಿಡಿಯಲು ಅಭಿಮಾನಿ ಕೂಡ ಓಡಿದ್ದಾರೆ. ಆದರೆ ಧೋನಿ ವೇಗಕ್ಕೆ ಅಭಿಮಾನಿ ಸುಸ್ತಾದ. ಪಿಚ್ ಬಳಿ ಬಂದಾಗ ಧೋನಿ ನಿಂತು ಬಿಟ್ಟರು. ಅಭಿಮಾನಿ ಪಿಚ್ ತುಳಿದು ಆವಾಂತರ ಮಾಡೋ ಬದಲು ಅಲ್ಲೇ ನಿಂತರು. ಧೋನಿಯನ್ನ ಅಪ್ಪಿಕೊಂಡು ಅಭಿಮಾನಿಯನ್ನ ಭದ್ರತಾ ಸಿಬ್ಬಂದಿಗಳು ಕರೆದೊಯ್ದರು. ಈ ವಿಡಿಯೋ ಇದೀಗ ಬಾರಿ ವೈರಲ್ ಆಗಿದೆ.
Woww what a moment