ಜೇಸನ್​ ರಾಯ್ 
ಕ್ರಿಕೆಟ್

ಮಗಳಿಗಾಗಿ ರಾತ್ರಿಯಿಡೀ ಆಸ್ಪತ್ರೆಯಲ್ಲಿದ್ದೂ ಪಾಕ್ ವಿರುದ್ಧ ಶತಕ ಸಿಡಿಸಿದ ಜೇಸನ್​ ರಾಯ್​!

ಇಂಗ್ಲೆಂಡ್ ತಂಡದ ಆರಂಭಿಕ ಆಟಗಾರ ಜೇಸನ್​ ರಾಯ್​ ಭರ್ಜರಿ ಶತಕ ಸಿಡಿಸಿ (114ರನ್​​) ಪಾಕಿಸ್ತಾನದ ವಿರುದ್ಧ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ತಂಡವು ಮೂರು ವಿಕೆಟ್ ಗಳಿಂಡ ಗೆಲುವು ಸಾಧಿಸಲು ನೆರವಾಗಿದ್ದರು.

ಲಂಡನ್: ಇಂಗ್ಲೆಂಡ್ ತಂಡದ ಆರಂಭಿಕ ಆಟಗಾರ ಜೇಸನ್​ ರಾಯ್​ ಭರ್ಜರಿ ಶತಕ ಸಿಡಿಸಿ (114ರನ್​​) ಪಾಕಿಸ್ತಾನದ ವಿರುದ್ಧ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ತಂಡವು ಮೂರು ವಿಕೆಟ್ ಗಳಿಂಡ ಗೆಲುವು ಸಾಧಿಸಲು ನೆರವಾಗಿದ್ದರು. ಗಮನಾರ್ಹ ಸಂಗತಿ ಎಂದರೆ ಈ ಪಂದ್ಯದ ಪ್ರಾರಂಭಕ್ಕೆ ಮುನ್ನ ಅವರು ಬರೋಬ್ಬರಿ ಏಳು ಗಂಟೆ ಕಾಲ ಆಸ್ಪತ್ರೆಯಲ್ಲಿ ಕಳೆದಿದ್ದಾರೆ.
ವಿಷಯವೆಂದರೆ ಜೇಸನ್ ರಾಯ್ಅವರ ಪ್ಪುತ್ರಿಗೆ ಅನಾರೋಗ್ಯ ಕಾಡಿದ್ದು ಅವರು ತಮ್ಮ ಪತ್ನಿಯೊಡನೆ ಮಧ್ಯರಾತ್ರಿ 1:30ಕ್ಕೆ ಆಸ್ಪತ್ರೆಗೆ ತೆರಳಿದ್ದಾರೆ .ಅಲ್ಲದೆ ಬೆಳಿಗ್ಗೆ 8:30ರವರೆಗೆ ರಾಯ್ ಆಸ್ಪತ್ರೆಯಲ್ಲಿ ಮಗಳೊಂದಿಗೇ ಇದ್ದರು. 
ಆಸ್ಪತ್ರೆಯಿಂದ ಬಂದ ರಾಯ್ ಕೇವಲ ಕೆಲ ಕ್ಷಣಗಳ ಕಾಲದ ಅಭ್ಯಾಸ ನಡೆಸಿ ನೇರವಾಗಿ ಕ್ರಿಕೆಟ್ ಮೈದಾನಕ್ಕೆ ಇಳಿದಿದಿದ್ದಾರೆ. ಅಲ್ಲದೆ ಪಂದ್ಯದಲ್ಲಿ ಒಟ್ಟು 114ರನ್ಬಾರಿಸಿ ಗಮನ ಸೆಳೆದಿದ್ದಾರೆ.
ರಾತ್ರಿ ಕೇವಲ ಎರಡು ತಾಸು ನಿದ್ರೆ ಮಾಡಿದ್ದ ರಾಯ್ ತಮಗೆ ಯಾವ ರೀತಿಯಲ್ಲಿಯೂ ಆಯಾಸವಾಗಿದೆ ಎನ್ನುವುದನ್ನೂ ತೋರಿಸದೆ ರನ್ ಗಳ ಸುರಿಮಳೆಗೆರೆದಿದ್ದಾರೆ. "ಬೆಳಗಿನ ಜಾವ ತುಸು ಕಷ್ಟವೆನಿಸಿದ್ದು ಹೌದು. ಆದರೆ ಈ ಸಮಯ ನನಗೆ ಮತ್ತು ನನ್ನ ಕುಟುಂಬಕ್ಕೆ ಅತ್ಯಂತ ಮಹತ್ವದ ಕ್ಷಣವಾಗಿತ್ತು" ಎಂದು ರಾಯ್ ಬಿಬಿಸಿ ರೇಡಿಯೋಗೆ ನೀಡಿದ್ದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.
ರಾಯ್ 84 ಎಸೆತದಲ್ಲಿ 114  ರನ್ ಗಳಿಸಿತಂಡದ ಗೆಲುವಿಗೆ ಕಾರಣವಾಗಿದ್ದಲ್ಲದೆ ಪಂದ್ಯ ಪುರುಷೋತ್ತಮ ಪ್ರಶಸ್ತಿಗೆ ಸಹ ಭಾಜನರಾಗಿದ್ದಾರೆ.
ಶುಕ್ರವಾರದ ಪಂದ್ಯದಲ್ಲಿ ಇಂಗ್ಲೆಂಡ್ ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ್ದ ಪಾಕಿಸ್ತಾನ 50 ಓವರ್ ಗೆ 7 ಕಿಕೆಟ್ ಕಳೆದುಕೊಂಡು 340 ರನ್ ಗಳಿಸಿತ್ತು. ಪಾಕ್ ನ ಸವಾಲು ಬೆನ್ನತ್ತಿದ ಇಂಗ್ಲೆಂಡ್ 9.3 ಓವರ್​ಗಳಲ್ಲಿ 7 ವಿಕೆಟ್​ ನಷ್ಟಕ್ಕೆ 341 ರನ್ ಗಳಿಸಿ ಜಯ ಗಳಿಸಿದೆ. ಈ ಮೂಲಕ ಸರಣಿಯಲ್ಲಿ 3-0 ಅಂತರದಿಂಡ ಸರಣಿಯನ್ನು ಸಹ ಕೈವಶ ಮಾಡಿಕೊಂಡಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಯುದ್ಧ ತೀವ್ರ: ಪಾಕಿಸ್ತಾನದ ಏರ್ ಸ್ಟ್ರೈಕ್ ಗೆ ಅಫ್ಘಾನಿಸ್ತಾನದಿಂದ ಕ್ಷಿಪಣಿ ದಾಳಿ ಉತ್ತರ

ಇತಿಹಾಸ ಬರೆದ Sherry Singh, 48 ವರ್ಷಗಳಲ್ಲಿ ಮೊದಲ ಬಾರಿಗೆ ಭಾರತಕ್ಕೆ 'ಮಿಸ್ ಯೂನಿವರ್ಸ್' ಕಿರೀಟ!

ಅಭಿಷೇಕ್ ಶರ್ಮಾನನ್ನು ಮೂರೇ ಎಸೆತಗಳಲ್ಲಿ ಔಟ್ ಮಾಡುತ್ತೇನೆ: ಪಾಕ್ ನ 152.65 kmph ವೇಗಿಯ ಉದ್ಧಟತನದ ಮಾತು

ಡಿಕೆ ಶಿವಕುಮಾರ್ ಇದ್ದ ವೇದಿಕೆಯಲ್ಲೇ ಹೈಡ್ರಾಮಾ: RSS ಸಮವಸ್ತ್ರದಲ್ಲಿ ಬಿಜೆಪಿ ಶಾಸಕ ಮುನಿರತ್ನ ಧರಣಿ! Video

ಪಶ್ಚಿಮ ಬಂಗಾಳ ವೈದ್ಯಕೀಯ ವಿದ್ಯಾರ್ಥಿನಿ ಗ್ಯಾಂಗ್ ರೇಪ್ ಕೇಸ್: ಮೂವರ ಬಂಧನ

SCROLL FOR NEXT