ಲಂಡನ್: ವಿಶ್ವಕಪ್ ಮಹಾಸಮರ ಉದ್ಘಾಟನ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ ತಂಡ ದಕ್ಷಿಣ ಆಫ್ರಿಕಾಗೆ 312 ರನ್ ಗಳ ಬೃಹತ್ ಗುರಿ ನೀಡಿದೆ.
ಟಾಸ್ ಸೋತು ಮೊದಲ ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ತಂಡ ನಿಗದಿತ ಓವರ್ ನಲ್ಲಿ 8 ವಿಕೆಟ್ ನಷ್ಟಕ್ಕೆ 311 ರನ್ ಪೇರಿಸಿದೆ.
ಇಂಗ್ಲೆಂಡ್ ಪರ ಜೋಸನ್ ರಾಯ್ 54, ಜೋ ರೂಟ್ 51, ಇಯಾನ್ ಮೋರ್ಗನ್ 57, ಬೇನ್ ಸ್ಟೋಕ್ಸ್ 89 ರನ್ ಪೇರಿಸಿದ್ದಾರೆ.
ದಕ್ಷಿಣ ಆಫ್ರಿಕಾ ಪರ ಬೌಲಿಂಗ್ ನಲ್ಲಿ ಲುಂಗಿ ಎನ್ಗಿಡಿ 3, ಇಮ್ರಾನ್ ತಾಹಿರ್ ಮತ್ತು ರಬಾಡಾ ತಲಾ 2 ವಿಕೆಟ್ ಪಡೆದಿದ್ದಾರೆ.