ಉಮೇಶ್, ಶಮಿ ಮಾರಕ ದಾಳಿ: ಹಿನ್ನಡೆಯ ಭೀತಿಯಲ್ಲಿ ದಕ್ಷಿಣ ಆಫ್ರಿಕಾ, 8 ವಿಕೆಟ್ ಪತನ
ಹಿರಿಯ ವೇಗಿ ಉಮೇಶ್ ಯಾದವ್(27 ಕ್ಕೆ 3) ಹಾಗೂ ಮೊಹಮ್ಮದ್ ಶಮಿ (28 ಕ್ಕೆ 2) ಅವರ ಮಾರಕ ದಾಳಿಗೆ ನಲುಗಿದ ದಕ್ಷಿಣ ಆಫ್ರಿಕಾ ತಂಡ ಎರಡನೇ ಟೆಸ್ಟ್ ಪಂದ್ಯದ ಪ್ರಥಮ ಇನಿಂಗ್ಸ್‍ನಲ್ಲಿ ಭಾರತದ ವಿರುದ್ಧ ಭಾರಿ ಅಂತರದ ಹಿನ್ನಡೆಯ ಭೀತಿಗೆ ಸಿಲುಕಿದೆ.
ಪುಣೆ: ಹಿರಿಯ ವೇಗಿ ಉಮೇಶ್ ಯಾದವ್(27 ಕ್ಕೆ 3) ಹಾಗೂ ಮೊಹಮ್ಮದ್ ಶಮಿ (28 ಕ್ಕೆ 2) ಅವರ ಮಾರಕ ದಾಳಿಗೆ ನಲುಗಿದ ದಕ್ಷಿಣ ಆಫ್ರಿಕಾ ತಂಡ ಎರಡನೇ ಟೆಸ್ಟ್ ಪಂದ್ಯದ ಪ್ರಥಮ ಇನಿಂಗ್ಸ್‍ನಲ್ಲಿ ಭಾರತದ ವಿರುದ್ಧ ಭಾರಿ ಅಂತರದ ಹಿನ್ನಡೆಯ ಭೀತಿಗೆ ಸಿಲುಕಿದೆ.
ಇಲ್ಲಿನ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ಮೂರು ವಿಕೆಟ್ ಕಳೆದುಕೊಂಡು 36 ರನ್‍ಗಳಿಂದ ಪ್ರಥಮ ಇನಿಂಗ್ಸ್ ಮುಂದುವರಿಸಿದ ದಕ್ಷಿಣ ಆಫ್ರಿಕಾ ತಂಡ ಮಧ್ಯಾಹ್ನದ ಭೋಜನ ವಿರಾಮದ ವೇಳೆಗೆ 42 ಓವರ್ ಗಳಿಗೆ ಆರು ವಿಕೆಟ್ ನಷ್ಟಕ್ಕೆ 136 ರನ್ ಗಳಿಸಿತ್ತು.
ನಂತರ ಬ್ಯಾಟಿಂಗ್ ಆರಂಭಿಸಿದ ಆಫ್ರಿಕಾ 169 ರನ್ ಗಳಿಗೆ ಮತ್ತೆರೆಡು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ ಇದರೊಂದಿಗೆ ಇನ್ನು, 431 ರನ್ ಹಿನ್ನಡೆಯಲ್ಲಿದ್ದು, ಕೈಯಲ್ಲಿ ಎರಡು ವಿಕೆಟ್ ಮಾತ್ರ ಇದೆ.
ಶನಿವಾರ ಬೆಳಗ್ಗೆ ಬ್ಯಾಟಿಂಗ್ ಮುಂದುವರಿಸಿದ ಆನ್ರಿಚ್ ನಾಡ್ಜ್ ಹಾಗೂ ಥ್ಯೂನಿಸ್ ಡಿ ಬ್ರೂಯಿನ್ ಅವರು ಹೆಚ್ಚು ಹೊತ್ತು ಕ್ರೀಸ್‍ನಲ್ಲಿ ಉಳಿಯಲಿಲ್ಲ. ಆನ್ರಿಚ್ ನಾಡ್ಜ್ ಕೇವಲ ಮೂರು ರನ್ ಗಳಿಸಿ ಮೊಹಮ್ಮದ್ ಶಮಿ ಎಸೆತದಲ್ಲಿ ವೃದ್ದಿಮನ್ ಸಾಹ ಅವರಿಗೆ ಕ್ಯಾಚ್ ನೀಡಿದರು.