ಕ್ರಿಕೆಟ್

ಕ್ರಿಕೆಟ್: ಈ ದಾಖಲೆ ಬರೆದ ಭಾರತದ ಮೊಟ್ಟ ಮೊದಲ ವೇಗಿ ಉಮೇಶ್ ಯಾದವ್!

Srinivasamurthy VN

ರಾಂಚಿ: ರಾಂಚಿ ಟೆಸ್ಟ್ ಪಂದ್ಯದಲ್ಲಿ ಪ್ರವಾಸಿ ದಕ್ಷಿಣ ಆಫ್ರಿಕಾವನ್ನು ಸೋಲಿನ ದವಡೆಗೆ ನೂಕಿರುವ ಟೀಂ ಇಂಡಿಯಾ ಆಟಗಾರರು ಹಲವು ದಾಖಲೆಗಳನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದು, ಇದೀಗ ಈ ಸಾಲಿಗೆ ವೇಗಿ ಉಮೇಶ್ ಯಾದವ್ ಕೂಡ ಸೇರಿದ್ದಾರೆ.

ಹೌದು.. ರಾಂಚಿ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ದಕ್ಷಿಣ ಆಫ್ರಿಕಾ ತಂಡ ಕೇವಲ 162 ರನ್ ಗಳಿಗೆ ಆಲೌಟ್ ಆಗಿದ್ದು, ಆಫ್ರಿಕಾ ದಾಂಡಿಗರ ಪತನಕ್ಕೆ ಭಾರತದ ವೇಗಿ ಉಮೇಶ್ ಯಾದವ್ ಪ್ರಮುಖ ಕಾರಣ. ಆಫ್ರಿಕಾದ ಪ್ರಮುಖ 3 ವಿಕೆಟ್ ಕಬಳಿಸಿದ ಉಮೇಶ್ ಯಾದವ್ ಈ ಮೂಲಕ ಅಪರೂಪದ ದಾಖಲೆಯೊಂದನ್ನು ಮುಂಡಿಗೇರಿಸಿಕೊಂಡಿದ್ದಾರೆ.

ತವರಿನಲ್ಲಿ ನಡೆದ ಟೂರ್ನಿಯ ಸತತ ಐದು ಪಂದ್ಯಗಳಲ್ಲಿ ಐದು ಬಾರಿ ಮೂರಕ್ಕಿಂತ ಹೆಚ್ಚು ವಿಕೆಟ್ ಪಡೆದ ಮೊಟ್ಟ ಮೊದಲ ಭಾರತದ ವೇಗಿ ಎಂಬ ಕೀರ್ತಿಗೆ ಉಮೇಶ್ ಯಾದವ್ ಭಾಗಿಯಾಗಿದ್ದಾರೆ.

ಈ ಹಿಂದಿನ ಪಂದ್ಯಗಳಲ್ಲಿ ಉಮೇಶ್ ಯಾದವ್, 6/88, 4/45, 3/37, 3/22 ಮತ್ತು 3/40* ಗಳಿಸಿದ್ದಾರೆ.

SCROLL FOR NEXT