10 ಎಸೆತದಲ್ಲಿ ಭರ್ಜರಿ 5 ಸಿಕ್ಸ್, ವಿಶ್ವದಾಖಲೆ: ಉಮೇಶ್ ಬ್ಯಾಟಿಂಗ್ ಕಂಡು ಕುಣಿದ ಕೊಹ್ಲಿ, ವಿಡಿಯೋ ವೈರಲ್!

ದಕ್ಷಿಣ ಆಫ್ರಿಕಾ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಟೀಂ ಇಂಡಿಯಾದ ವೇಗಿ ಉಮೇಶ್ ಯಾದವ್ 10 ಎಸೆತಗಳಲ್ಲಿ 5 ಎಸೆತಗಳನ್ನು ಸಿಕ್ಸರ್ ಬಾರಿಸಿದ್ದು ಉಮೇಶ್ ನ ವೀರಾವೇಷದ ಬ್ಯಾಟಿಂಗ್ ಕಂಡು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕುಣಿದಿರುವ ವಿಡಿಯೋ ವೈರಲ್ ಆಗಿದೆ.
ಉಮೇಶ್ ಯಾದವ್
ಉಮೇಶ್ ಯಾದವ್
Updated on

ದಕ್ಷಿಣ ಆಫ್ರಿಕಾ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಟೀಂ ಇಂಡಿಯಾದ ವೇಗಿ ಉಮೇಶ್ ಯಾದವ್ 10 ಎಸೆತಗಳಲ್ಲಿ 5 ಎಸೆತಗಳನ್ನು ಸಿಕ್ಸರ್ ಬಾರಿಸಿದ್ದು ಉಮೇಶ್ ನ ವೀರಾವೇಷದ ಬ್ಯಾಟಿಂಗ್ ಕಂಡು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕುಣಿದಿರುವ ವಿಡಿಯೋ ವೈರಲ್ ಆಗಿದೆ.

ರಾಂಚಿಯಲ್ಲಿ ಅಂತಿಮ ಟೆಸ್ಟ್ ಪಂದ್ಯ ನಡೆಯುತ್ತಿದ್ದು ಮೊದಲು ಬ್ಯಾಟಿಂಗ್ ಆರಂಭಿಸಿದ್ದ ಟೀಂ ಇಂಡಿಯಾ 497 ರನ್ ಗಳಿಗೆ ಡಿಕ್ಲೇರ್ ಮಾಡಿಕೊಂಡಿತ್ತು. ಇದೇ ಇನ್ನಿಂಗ್ಸ್ ನಲ್ಲಿ 7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ್ದು ಕೇವಲ 10 ಎಸೆತಗಳಲ್ಲಿ 31 ರನ್ ಬಾರಿಸಿದರು. ಇದರಲ್ಲಿ ಭರ್ಜರಿ 5 ಸಿಕ್ಸರ್ ಸೇರಿದೆ.

ಇನ್ನು ಉಮೇಶ್ ಯಾದವ್ ಭರ್ಜರಿ ಸಿಕ್ಸರ್ ಸಿಡಿಸುತ್ತಿದ್ದಂತೆ ವಿರಾಟ್ ಕೊಹ್ಲಿ ಖುಷಿಯಿಂದ ಕುಣಿದಿದ್ದಾರೆ. ಅಲ್ಲದೆ ಔಟ್ ಆಗಿ ಪೆವಿಲಿಯನ್ ಸೇರಿದ ಉಮೇಶ್ ಯಾದವ್ ಗೆ ಕೊಹ್ಲಿ ಸ್ವಾಗತ ನೀಡಿ ಗ್ರೇಟ್ ಎಂದು ಮೆಚ್ಚುಗೆ ಸೂಚಿಸಿದರು. 

ವೇಗಿಯೊಬ್ಬ ಅತೀ ಕಡಿಮೆ ಎಸೆತದಲ್ಲಿ 30ಕ್ಕೂ ರನ್ ಸಿಡಿಸಿದ ಮೊದಲ ಆಟಗಾರ ಎಂಬ ಖ್ಯಾತಿಗೆ ಭಾಜನರಾಗಿದ್ದಾರೆ. 2004ರಲ್ಲಿ ಸ್ಟೀಫನ್ ಫ್ಲೆಮ್ಮಿಂಗ್ 11 ಎಸೆತದಲ್ಲಿ 31 ರನ್ ಸಿಡಿಸಿದ್ದರು. ಆದರೆ ಉಮೇಶ್ ಯಾದವ್ 10 ಎಸೆತದಲ್ಲೇ 31 ರನ್ ಸಿಡಿಸಿ ಫ್ಲೆಮ್ಮಿಂಗ್ ದಾಖಲೆಯನ್ನು ಧೂಳಿಪಟ ಮಾಡಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com