ಕ್ರಿಕೆಟ್

2020ರ ಟಿ-20 ವಿಶ್ವಕಪ್‌ ಟೂರ್ನಿಗೆ ಅರ್ಹತೆ ಪಡೆದ ಸ್ಕಾಟ್ಲೆಂಡ್‌

Lingaraj Badiger

ದುಬೈ: ಅಧಿಕಾರಯುತ ಪ್ರದರ್ಶನ ನೀಡಿದ ಸ್ಕಾಟ್ಲೆಂಡ್‌ ತಂಡ, ಇಲ್ಲಿ ನಡೆದ ವಿಶ್ವಕಪ್‌ ಅರ್ಹತಾ ಸುತ್ತಿನ ಸ್ಪರ್ಧೆಯ ಪಂದ್ಯದಲ್ಲಿ ಆತಿಥೇಯ ಯುಎಇ ವಿರುದ್ಧ 90 ರನ್‌ಗಳ ಭರ್ಜರಿ ಜಯ ದಾಖಲಿಸುವ ಮೂಲಕ 2020ರ ಟಿ-20 ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಗೆ ಅರ್ಹತೆ ಗಿಟ್ಟಿಸಿಕೊಂಡಿದೆ.

ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿದ ಸ್ಕಾಟ್ಲೆಂಡ್‌ ತಂಡ ಆರಂಭಿಕ ಬ್ಯಾಟ್ಸ್‌ಮನ್‌ ಜಾರ್ಜ್‌ ಮುನ್ಸೇ ಅವರ ಅಮೋಘ 65 ರನ್‌ಗಳ ನೆರವಿನಿಂದ 198 ರನ್‌ಗಳ ಬೃಹತ್‌ ಮೊತ್ತವನ್ನೇ ದಾಖಲಿಸಿತು. ಬಳಿಕ ಗುರಿ ಬೆನ್ನತ್ತಿದ ಯುಎಇ ತಂಡ 18.3 ಓವರ್‌ಗಳಲ್ಲಿ 108 ರನ್‌ಗಳಿಗೆ ಆಲ್‌ಔಟ್‌ ಆಗುವ ಮೂಲಕ ಸೋಲಿಗೆ ಶರಣಾಯಿತು.

ಸ್ಕಾಟ್ಲೆಂಡ್‌ ಪರ ಮಾರ್ಕ್‌ ವ್ಯಾಟ್‌ ಮತ್ತು ಸಫ್ಯಾನ್‌ ಶರಿಫ್‌ ತಲಾ ಮೂರು ವಿಕೆಟ್‌ ಪಡೆಯುವ ಮೂಲಕ ಯುಎಇ ತಂಡದ ಕುಸಿತಕ್ಕೆ ಕಾರಣರಾದರು. 

ಈ ಗೆಲುವಿನೊಂದಿಗೆ ಆಸ್ಟ್ರೇಲಿಯಾ ಆತಿಥ್ಯದಲ್ಲಿ ನಡೆಯಲಿರುವ 2020 ವಿಶ್ವಕಪ್‌ ಟೂರ್ನಿಗೆ ಈಗಾಗಲೇ ಅರ್ಹತೆ ಪಡೆದಿರುವ ನಮೀಬಿಯಾ, ನೆದರ್ಲೆಂಡ್ಸ್‌, ಪಪುವಾ ನ್ಯೂ ಗಿನಿ ಮತ್ತು ಐರ್ಲೆಂಡ್‌ ಜೊತೆಗೆ ಸ್ಕಾಟ್ಲೆಂಡ್‌ ಸೇರಿಕೊಂಡಿದೆ.

SCROLL FOR NEXT