ಸೂರ್ಯಕುಮಾರ್‌ ಯಾದವ್ - ಅರ್ಜುನ್‌ ತೆಂಡೂಲ್ಕರ್ 
ಕ್ರಿಕೆಟ್

ಟಿ20 ಅಭ್ಯಾಸ ಪಂದ್ಯ: ಸಚಿನ್‌ ಪುತ್ರನ ಒಂದೇ ಓವರ್‌ಗೆ 21 ರನ್‌ ಚಚ್ಚಿದ ಸೂರ್ಯಕುಮಾರ್‌, 47 ಎಸೆತಗಳಲ್ಲಿ 120 ರನ್‌

ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ಕಳೆದ ಹಲವು ಆವೃತ್ತಿಗಳಿಂದ ಸ್ಥಿರ ಪ್ರದರ್ಶನ ತೋರುತ್ತಾ ಬಂದಿದ್ದ ಮುಂಬೈ ಇಂಡಿಯನ್ಸ್ ಬ್ಯಾಟ್ಸ್‌ಮನ್‌ ಸೂರ್ಯಕುಮಾರ್‌ ಯಾದವ್, ಆಸ್ಟ್ರೇಲಿಯಾ ಪ್ರವಾಸಕ್ಕೆ ಭಾರತ ಸೀಮಿತ ಓವರ್‌ ತಂಡಕ್ಕೆ ಆಯ್ಕೆಯಾಗುವುದು ಬಹುತೇಕ ಖಚಿತ ಎಂದೇ ಭಾವಿಸಲಾಗಿತ್ತು.

ನವದೆಹಲಿ: ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ಕಳೆದ ಹಲವು ಆವೃತ್ತಿಗಳಿಂದ ಸ್ಥಿರ ಪ್ರದರ್ಶನ ತೋರುತ್ತಾ ಬಂದಿದ್ದ ಮುಂಬೈ ಇಂಡಿಯನ್ಸ್ ಬ್ಯಾಟ್ಸ್‌ಮನ್‌ ಸೂರ್ಯಕುಮಾರ್‌ ಯಾದವ್‌, ಆಸ್ಟ್ರೇಲಿಯಾ ಪ್ರವಾಸಕ್ಕೆ ಭಾರತ ಸೀಮಿತ ಓವರ್‌ ತಂಡಕ್ಕೆ ಆಯ್ಕೆಯಾಗುವುದು ಬಹುತೇಕ ಖಚಿತ ಎಂದೇ ಭಾವಿಸಲಾಗಿತ್ತು. ಆದರೆ, ಬಿಸಿಸಿಐ ಆಯ್ಕೆ ಸಮಿತಿ ಬಲಗೈ ಬ್ಯಾಟ್ಸ್‌ಮನ್‌ಗೆ ಮತ್ತೊಮ್ಮೆ ನಿರಾಸೆ ಮೂಡಿಸಿತ್ತು.

ಆಸ್ಟ್ರೇಲಿಯಾ ಪ್ರವಾಸಕ್ಕೆ ಆಯ್ಕೆಯಾಗದೇ ಇದ್ದ ಕಾರಣ ತೀವ್ರ ಬೇಸರಕ್ಕೆ ಒಳಗಾಗಿದ್ದ ಸೂರ್ಯಕುಮಾರ್‌ ಯಾದವ್‌ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ಸ್ಪೋಟಕ ಅರ್ಧಶತಕ ಸಿಡಿಸಿ ಆಯ್ಕೆ ಸಮಿತಿಗೆ ಎಚ್ಚರಿಕೆ ರವಾನಿಸಿದ್ದರು. ಅಲ್ಲದೆ, ಮುಂಬೈ ಇಂಡಿಯನ್ಸ್ ತಂಡ ಐದನೇ ಐಪಿಎಲ್‌ ಪ್ರಶಸ್ತಿ ಗೆಲುವಿನಲ್ಲಿ ಬಲಗೈ ಬ್ಯಾಟ್ಸ್‌ಮನ್‌ ಮಹತ್ತರ ಪಾತ್ರವನ್ನು ವಹಿಸಿದ್ದರು. ನಂತರ ಬಿಸಿಸಿಐ ವಿರುದ್ಧ ಅಸಮಾಧಾನದೊಂದಿಗೆ ದುಬೈನಿಂದ ತವರಿಗೆ ಮರಳಿದ್ದರು.

ಇದೀಗ ದೇಶಿ ಕ್ರಿಕೆಟ್‌ನತ್ತ ಚಿತ್ತ ಹರಿಸಿರುವ ಸೂರ್ಯಕುಮಾರ್‌ ಮುಂಬರುವ ಸೈಯದ್‌ ಮುಷ್ತಾಕ್‌ ಅಲಿ ಟ್ರೋಫಿ ಟೂರ್ನಿಗೆ ತಯಾರಿ ನಡೆಸುತ್ತಿದ್ದಾರೆ. ಅದರಂತೆ, ಟಿ20 ಟೂರ್ನಿಯ ನಿಮಿತ್ತ ಅಭ್ಯಾಸ ಪಂದ್ಯವೊಂದರಲ್ಲಿ ಸೂರ್ಯಕುಮಾರ್‌ ಯಾದವ್‌ ಕೇವಲ 37 ಎಸೆತಗಳಲ್ಲಿ 120 ರನ್‌ ಚಚ್ಚಿದ್ದರು. ಆ ಮೂಲಕ ಮತ್ತೊಮ್ಮೆ ಆಯ್ಕೆ ಸಮಿತಿಗೆ ಮತ್ತೊಮ್ಮೆ ಸಂದೇಶವನ್ನು ರವಾನಿಸಿದರು. 

ಟೀಮ್‌ 'ಬಿ' ಹಾಗೂ ಟೀಮ್‌ 'ಡಿ' ನಡುವಿನ ಅಭ್ಯಾಸ ಪಂದ್ಯದಲ್ಲಿ ಸೂರ್ಯ ಸ್ಪೋಟಕ ಶತಕ ಸಿಡಿಸಿದ್ದರು. ಟೀಮ್‌ 'ಬಿ' ತಂಡವನ್ನು ತಾವೇ ಮುನ್ನಡೆಸಿದ್ದ ಬಲಗೈ ಬ್ಯಾಟ್ಸ್‌ಮನ್‌ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿದು, ಯಶಸ್ವಿ ಜೈಸ್ವಾಲ್‌ ನಾಯಕತ್ವದ ಟೀಮ್‌ 'ಡಿ' ಬೌಲರ್‌ಗಳನ್ನು ಮನ ಬಂದಂತೆ ಬಗ್ಗು ಬಡಿದರು. 

ಸೂರ್ಯಕುಮಾರ್ ಯಾದವ್‌ ಅವರೊಂದಿಗೆ ಟೀಮ್‌ 'ಡಿ' ತಂಡದಲ್ಲಿ ಆಡಿದ ಮಾಸ್ಟರ್‌ ಬ್ಲಾಸ್ಟರ್‌ ಸಚಿನ್‌ ತೆಂಡೂಲ್ಕರ್‌ ಪುತ್ರ ಅರ್ಜುನ್‌ ತೆಂಡೂಲ್ಕರ್‌ ಕೂಡ ಅಭ್ಯಾಸ ಪಂದ್ಯದಲ್ಲಿ ಪ್ರಮುಖ ಆಕರ್ಷಣೆಯಾಗಿತ್ತು. ಆರಂಭದಲ್ಲಿ ಎರಡು ಉತ್ತಮ ಓವರ್‌ಗಳನ್ನು ಹಾಕಿದ್ದ, 13ನೇ ಓವರ್‌ನಲ್ಲಿ ಮತ್ತೆ ಬೌಲಿಂಗ್‌ ದುಬಾರಿಯಾದರು.

ಅರ್ಜುನ್‌ ತೆಂಡೂಲ್ಕರ್‌ ಓವರ್‌ಗೆ ಸೂರ್ಯಕುಮಾರ್‌ ಯಾಧವ್‌ 21 ರನ್‌ಗಳನ್ನು ಸಿಡಿಸಿದರು. ಅಂತಿಮವಾಗಿ ಬಲಗೈ ಬ್ಯಾಟ್ಸ್‌ಮನ್‌ 255.32ರ ಸ್ಟ್ರೈಕ್‌ ರೇಟ್‌ನೊಂದಿಗೆ ಬರೋಬ್ಬರಿ 9 ಸಿಕ್ಸರ್‌ ಹಾಗೂ 10 ಬೌಂಡರಿಗಳೊಂದಿಗೆ 120 ರನ್‌ಗಳನ್ನು ಸಿಡಿಸಿದರು.

ಸೂರ್ಯಕುಮಾರ್‌ ಯಾದವ್‌ ಸ್ಪೋಟಕ ಶತಕದ ನೆರವಿನಿಂದ ಟೀಮ್‌ 'ಬಿ' ತನ್ನ ಪಾಲಿನ 20 ಓವರ್‌ಗಳಿಗೆ ಐದು ವಿಕೆಟ್‌ಗಳ ನಷ್ಟಕ್ಕೆ 213 ರನ್‌ಗಳನ್ನು ದಾಖಲಿಸಿತು. ತನ್ನ ಮೂರನೇ ಓವರ್‌ನಲ್ಲಿ 21 ರನ್‌ ನೀಡಿದ್ದ ಅರ್ಜುನ್‌ ತೆಂಡೂಲ್ಕರ್‌ ನಂತರ ಕೊನೆಯ ಓವರ್‌ನಲ್ಲಿ ಸಿದ್ದಾರ್ಥ್‌ ಆಕ್ರೆ ವಿಕೆಟ್‌ ಪಡೆದುಕೊಂಡರು ಹಾಗೂ ಅಂತಿಮವಾಗಿ 4 ಓವರ್‌ಗಳ ಅಂತ್ಯಕ್ಕೆ 33 ರನ್‌ ನೀಡಿ ಒಂದು ವಿಕೆಟ್‌ ಪಡೆದುಕೊಂಡರು. 

ಹದಿಮೂರನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಿಂದಲೇ ಸೂರ್ಯಕುಮಾರ್‌ ಯಾದವ್‌ ಭಯಾನಕ ಫಾರ್ಮ್‌ನಲ್ಲಿದ್ದಾರೆ ಹಾಗೂ ಐದನೇ ಬಾರಿ ಚಾಂಪಿಯನ್‌ ಆದ ಮುಂಬೈ ಇಂಡಿಯನ್ಸ್ ಪರ ಅವರು 14 ಪಂದ್ಯಗಳಿಂದ 30.2ರ ಸರಾಸರಿಯಲ್ಲಿ 480 ರನ್‌ ಸಿಡಿಸಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

ಇಲ್ಲಿಂದ ತೊಲಗಿ; ಭಾರತೀಯ ದಂಪತಿಗೆ ಅಮೆರಿಕಾದಲ್ಲಿ ಜನಾಂಗೀಯ ನಿಂದನೆ

IPL 2026: SRH ವಿರುದ್ಧ RR ಗೆ 47 ರನ್ ಗಳ ಭರ್ಜರಿ ಗೆಲುವು

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

SCROLL FOR NEXT