ಕ್ರಿಕೆಟ್

ರಾಸ್ ಟೇಲರ್ ಶತಕ, ನಿಕೋಲಸ್, ಲಾಥಮ್ ಭರ್ಜರಿ ಬ್ಯಾಟಿಂಗ್; ಕಿವೀಸ್ ಗೆ 4 ವಿಕೆಟ್ ಜಯ

Srinivasamurthy VN

ಹ್ಯಾಮಿಲ್ಟನ್: ರಾಸ್ ಟೇಲರ್ ಶತಕ, ನಿಕೋಲಸ್, ಲಾಥಮ್ ಭರ್ಜರಿ ಬ್ಯಾಟಿಂಗ್ ಪ್ರವಾಸಿ ಭಾರತ ತಂಡದ ವಿರುದ್ಧ ನ್ಯೂಜಿಲೆಂಡ್ ತಂಡ ನಾಲ್ಕು ವಿಕೆಟ್ ಗಳ ಭರ್ಜರಿ ಜಯ ಸಾಧಿಸಿದೆ.

ಹ್ಯಾಮಿಲ್ಟನ್ ನ ಸೆಡಾನ್ ಪಾರ್ಕ್ ನಲ್ಲಿ ನಡೆಯುತ್ತಿರುವ ಮೊದಲ ಏಕದಿನ ಪಂದ್ಯದಲ್ಲಿ  ಟಾಸ್ ಸೋತರೂ ಭರ್ಜರಿ ಬ್ಯಾಟಿಂಗ್ ನಡೆಸಿದ ಭಾರತ ತಂಡ ನಿಗದಿತ 50 ಓವರ್ ಗಳಲ್ಲಿ 347 ರನ್ ಗಳಿಸಿತ್ತು. ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡದ ಪರ ಶ್ರೇಯಸ್ ಅಯ್ಯರ್ ಆಕರ್ಷಕ ಶತಕ (103), ಕೊಹ್ಲಿ (51)ಮತ್ತು ರಾಹುಲ್ (79) ಭರ್ಜರಿ ಬ್ಯಾಟಿಂಗ್ ನೆರವಿನಿಂದಾಗಿ ಭಾರತ 347ರನ್ ಪೇರಿಸಿತು.

ಈ ಬೃಹತ್ ಮೊತ್ತವನ್ನು ಬೆನ್ನು ಹತ್ತಿದ ನ್ಯೂಜಿಲೆಂಡ್ ತಂಡ ರಾಸ್ ಟೇಲರ್ ಶತಕ (ಅಜೇಯ 109 ರನ್), ನಿಕೋಲಸ್ (78 ರನ್), ಲಾಥಮ್ (69 ರನ್) ಭರ್ಜರಿ ಬ್ಯಾಟಿಂಗ್ ನೆರವಿನಿಂದ 4 ವಿಕೆಟ್ ಗಳ ಅಂತರದ ಭರ್ಜರಿ ಜಯ ಸಾಧಿಸಿದೆ. ಕಿವೀಸ್ ಗೆ ಮಾರ್ಟಿನ್ ಗಪ್ಟಿಲ್ (32 ರನ್) ಮತ್ತು ನಿಕೋಲಸ್ (78 ರನ್) ಭರ್ಜರಿ ಆರಂಭ ಒದಗಿಸಿದರು. ಇದನ್ನೇ ಮುಂದುವರೆಸಿದ ರಾಸ್ ಟೇಲರ್ ಸ್ಪೋಟಕ ಬ್ಯಾಟಿಂಗ್ ನಡೆಸಿ ಶತಕ ಸಿಡಿಸಿದರು. ಕೇವಲ 84 ಎಸೆತಗಳನ್ನು ಎದುರಿಸಿದ ಟೇಲರ್ 10 ಬೌಂಡರಿ ಹಾಗೂ 4 ಸಿಕ್ಸರ್ ಗಳ ನೆರವಿನಿಂದ 109ರನ್ ಕಲೆಹಾಕಿ ನ್ಯೂಜಿಲೆಂಡ್ ತಂಡದ ಗೆಲುವಿನಲ್ಲಿ ಮಹತ್ತರ ಪಾತ್ರವಹಿಸಿದರು.

ಟೇಲರ್ ಗೆ ಲಾಥಮ್ ಮತ್ತು ಸ್ಯಾಂಥನರ್ ಉತ್ತಮ ಸಾಥ್ ನೀಡಿದರು. ಅಂತಿಮವಾಗಿ ನ್ಯೂಜಿಲೆಂಡ್ ತಂಡ ಭಾರತ ನೀಡಿದ್ದ 348ರನ್ ಗಳ ಬೃಹತ್ ಗುರಿಯನ್ನು 6 ವಿಕೆಟ್ ಕಳೆದುಕೊಂಡು 48.1 ಓವರ್ ಗಳಲ್ಲಿ ಗುರಿ ಮುಟ್ಟಿತು. ಆ ಮೂಲಕ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಕಿವೀಸ್ ಪಡೆ 1-0 ಅಂತರದ ಮುನ್ನಡೆ ಸಾಧಿಸಿದೆ.

SCROLL FOR NEXT