ಕ್ರಿಕೆಟ್

ಕಿವೀಸ್ ಬೌಲರ್ ಗಳ ಬಿಟ್ಟೂ ಬಿಡದೆ ಕಾಡಿದ ನವದೀಪ್ ಸೈನಿಯಿಂದ ಮಹತ್ವದ ದಾಖಲೆ!

Srinivasamurthy VN

ಆಕ್ಲೆಂಡ್: ಪಂದ್ಯದ ಅಂತಿಮ ಹಂತದಲ್ಲಿ ನ್ಯೂಜಿಲೆಂಡ್ ಬೌಲರ್ ಗಳನ್ನು ಬಿಟ್ಟೂ ಬಿಡದೆ ಕಾಡಿ ಸೋಲಿನ ಭೀತಿ ಸೃಷ್ಟಿಸಿದ್ದ ಭಾರತದ ಯುವ ಆಟಗಾರ ನವದೀಪ್ ಸೈನಿ ತಮ್ಮ ಅಮೋಘ ಬ್ಯಾಟಿಂಗ್ ಮೂಲಕ ಮಹತ್ವದ ದಾಖಲೆಯೊಂದನ್ನು ಮಾಡಿದ್ದಾರೆ. 

ನ್ಯೂಜಿಲೆಂಡ್ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ರವೀಂದ್ರ ಜಡೇಜಾಗೆ ಉತ್ತಮ ಸಾಥ್ ನೀಡಿದ್ದ ಸೈನಿ 9ನೇ ವಿಕೆಟ್ ನಲ್ಲಿ 49 ಎಸೆತಗಳಲ್ಲಿ 45ರನ್ ಗಳಿಸಿದ್ದರು. ಇದು ಭಾರತದ ಪರ ಆಟಗಾರನೋರ್ವ 9ನೇ ಕ್ರಮಾಂಕದಲ್ಲಿ ಗಳಿಸಿದ 5ನೇ ಗರಿಷ್ಠ ರನ್ ಗಳಿಕೆಯಾಗಿದೆ. 

ಈ ಹಿಂದೆ 2005ರಲ್ಲಿ ಬುಲವಾಯೋದಲ್ಲಿ ಜೆಪಿ ಯಾದವ್ ಗಳಿಸಿದ್ದ 69ರನ್ ಗಳು ಈ ವರೆಗಿನ ಗರಿಷ್ಠ ರನ್ ಸಾಧನೆಯಾಗಿದೆ. ಇದಾದ ಬಳಿಕ 2009ರಲ್ಲಿ ಗುವಾಹತಿಯಲ್ಲಿ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಪ್ರವೀಣ್ ಕುಮಾರ್ ಅಜೇಯ 54ರನ್ ಗಳಿಸಿದ್ದರು. ಇದು 9ನೇ ಕ್ರಮಾಂಕದಲ್ಲಿ ಗಳಿಸಿದ 2ನೇ ಗರಿಷ್ಠ ರನ್ ಗಳಿಕೆಯಾಗಿದೆ. 1982ರಲ್ಲಿ ಓವಲ್ ಕ್ರೀಡಾಂಗಣದಲ್ಲಿ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಮದನ್ ಲಾಲ್ ಅಜೇಯ 53ರನ್ ಗಳಿಸಿದ್ದು, 3ನೇ ಗರಿಷ್ಠ ರನ್ ಗಳಿಕೆಯಾಗಿದೆ. 2017ರಲ್ಲಿ ಶ್ರೀಲಂಕಾ ವಿರುದ್ಧದ ಪೆಲ್ಲೆಕೆಲೆ ಪಂದ್ಯದಲ್ಲಿ ಭುವನೇಶ್ವರ್ ಕುಮಾರ್ ಅಜೇಯ 53ರನ್ ಗಳಿಸಿದ್ದರು. ಇದು 4ನೇ ಗರಿಷ್ಛ ರನ್ ಗಳಿಕೆಯಾಗಿದೆ.

ಇದೀಗ ಸೈನಿ ನ್ಯೂಜಿಲೆಂಡ್ ವಿರುದ್ಧ 45 ರನ್ ಗಳಿಸಿ 5ನೇ ಗರಿಷ್ಠ ರನ್ ಸಾಧನೆ ಮಾಡಿದ್ದಾರೆ.

SCROLL FOR NEXT